ಬಜಾಲ್ ಚರ್ಚ್ ವಾರ್ಷಿಕ ಹಬ್ಬ

bajal
ಬಜಾಲ್ ಹೋಲಿ ಸ್ಪಿರಿಟ್ ಚರ್ಚ್‌ನಲ್ಲಿ ಭಾನುವಾರ ಜರುಗಿದ ವಾರ್ಷಿಕ ಹಬ್ಬದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ಸಿಟಿ ವಲಯದ ಪ್ರಧಾನ ಗುರು ಫಾ. ಜೇಮ್ಸ್ ಡಿಸೋಜ, ಚರ್ಚ್ ಪ್ರಧಾನ ಗುರು ಫಾ.ಆಂಡ್ರೂ ಡಿಸೋಜ, ಫಾ.ಸ್ಟೇನಿ ಮೊಂತೆರೊ, ಫಾ.ರವಿ ಕುಮಾರ್ ಬರ್ತುಲಾ, ಫಾ.ಚಾರ್ಲ್ಸ್ ಮಿನೇಜಸ್ ಜಪ್ಪು ಮುಂತಾದವರು ಉಪಸ್ಥಿತರಿದ್ದರು.
Published on

ಮಂಗಳೂರು: ನಗರದ ಬಜಾಲ್‌ನ ಹೋಲಿ ಸ್ಪಿರಿಟ್ ಚರ್ಚ್ ವಾರ್ಷಿಕ ಹಬ್ಬ ಭಾನುವಾರ ನಡೆಯಿತು. ಮಂಗಳೂರು ಧರ್ಮ ಪ್ರಾಂತ್ಯದ ಸಿಟಿ ವಲಯದ ಪ್ರಧಾನ ಗುರು ಫಾ. ಜೇಮ್ಸ್ ಡಿಸೋಜ ಬಲಿ ಪೂಜೆಯ ನೇತೃತ್ವ ವಹಿಸಿ ಪ್ರವಚನ ನೀಡಿದರು.

ಕಷ್ಟದಲ್ಲಿ ಇರುವವರಿಗೆ ನೆರವು ಒದಗಿಸಿ ಎನ್ನುವುದು ಹಬ್ಬದ ಧ್ಯೇಯ ವಾಕ್ಯವಾಗಿದ್ದು, ಅದರಂತೆ ಕಷ್ಟದಲ್ಲಿ ಇರುವವರಿಗಾಗಿ ಮತ್ತು ಸಹಾಯ ಅಪೇಕ್ಷಿಸಿದವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಚರ್ಚ್‌ನ ಪ್ರಧಾನ ಗುರು ಫಾ.ಆಂಡ್ರೂ ಡಿಸೋಜ ಹಬ್ಬದ ಮಹತ್ವ ವಿವರಿಸಿದರು. ಬಲಿ ಪೂಜೆಯಲ್ಲಿ ಫಾ.ಸ್ಟೇನಿ ಮೊಂತೆರೊ,

ಫಾ.ರವಿ ಕುಮಾರ್ ಬರ್ತುಲಾ, ಫಾ.ಚಾರ್ಲ್ಸ್ ಮಿನೇಜಸ್ ಜಪ್ಪು, ಫಾ.ಪ್ರದೀಪ್ ಕೊರೆಯಾ ಬೆಳಗಾವಿ, ಸಿಒಡಿಪಿ ನಿರ್ದೇಶಕ ಫಾ.ವಿನ್ಸೆಂಟ್ ಡಿಸೋಜ, ಫಾ.ಫ್ರಾನ್ಸಿಸ್ ಮಿನೇಜಸ್ ಕಪುಚಿನ್ ಮತ್ತು ಫಾ.ರಾಬರ್ಟ್ ಡಿಸೋಜ ಭಾಗವಹಿಸಿದ್ದರು. ಚರ್ಚ್ ಉಪಾಧ್ಯಕ್ಷ ಮೌರಿಸ್ ಡಿಸೋಜ, ಕಾರ್ಯದರ್ಶಿ ಲೀಡಿಯಾ ಲೋಬೊ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net