

ಕೋಲಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಏ.5 ಮತ್ತು 6ರಂದು ನಡೆಯಲಿರುವ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸತಿಕ ಕಾರ್ಯಕ್ರಮದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರನ್ನು ಶನಿವಾರ ಅವರ ನಿವಾಸದಲ್ಲಿ ಜಿಲ್ಲಾ ಶಾಖೆಯಿಂದ ಔಪಚಾರಿಕವಾಗಿ ಆಹ್ವಾನ ನೀಡಲಾಯಿತು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎ.ಅಜಯ್ ಕುಮಾರ್ ಮಾತನಾಡಿ, ಸರ್ಕಾರಿ ನೌಕರರು ದೈನಂದಿನ ಕ್ರಿಯಾಶೀಲತೆ ಮತ್ತು ಉತ್ಸಾಹದಿಂದ ಕಾರ್ಯನಿರ್ವಹಿಸಲು ಹಾಗೂ ಮಾನಸಿಕ ಸದೃಢತೆ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ. ಈ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾರ್ಗದರ್ಶನ ಮಾಡುವಂತೆ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಖಜಾಂಚಿ ಮುರಳಿ ಮೋಹನ್, ಉಪಾಧ್ಯಕ್ಷ ಅನಿಲ್ಕುಮಾರ್, ಪದಾಧಿಕಾರಿಗಳಾದ ರಾಜಾರೆಡ್ಡಿ, ಗೌತಮ್, ಶ್ರೀಪತಿ, ರಮೇಶ್, ನಾರಾಯಣಸ್ವಾಮಿ, ರಿಯಾಜ್ ಅಹ್ಮದ್, ರಾಜೇಂದ್ರಪ್ರಸಾದ್, ಶ್ರೀರಾಮ್, ಇಂಚಾರ ನಾರಾಯಣಸ್ವಾಮಿ, ನಾಗರಾಜ್, ಮುನಿರಾಜು ಇದ್ದರು.