ಬೈಲಹೊಂಗಲದ ಏತ ನೀರಾವರಿ ಯೋಜನೆಗಳ ಪುನಶ್ಚೇತನ ಮಾಡುತ್ತೇವೆಂದ ಡಿಸಿಎಂ; ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆ ತೆರದಿಟ್ಟ ಶಾಸಕ ಕೌಜಲಗಿಗೆ ಸರ್ಕಾರದ ಭರವಸೆ

FB_IMG_1688727944539.jpg
Published on

ಬೆಳಗಾವಿ : ಮಲಪ್ರಭಾ ನದಿಯ ಹಿನ್ನೀರಿನಿಂದ ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಏತ ನೀರಾವರಿ ಯೋಜನೆಗಳ ಪುನಶ್ಚೇತನಕ್ಕೆ ಅಂದಾಜು ಪತ್ರಿಕೆ ತಯಾರಿಸಿದ್ದು, ಕೂಡಲೇ  ಪುಶ್ಚೇತನ ಕಾರ್ಯವನ್ನು ಕೈಗೊಳ್ಳಲಾಗುವುದೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
 

ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಬೈಲಹೊಂಗಲ ವಿಧಾನಸಭಾ ಸದಸ್ಯ ಮಹಾಂತೇಶ ಶಿವಾನಂದ ಕೌಜಲಗಿ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದಲ್ಲಿ ದೇವಲಾಪೂರ,. ಜಾಲಿಕೊಪ್ಪ, ಕೆಂಗಾನೂರು, ಬೂದಿಹಾಳ ಮಲ್ಲೂರ-ಮಾಟೊಳ್ಳಿ ಹೊಸೂರು-ವಕ್ಕುಂದ ಸಿಂಗಾರಗೊಪ್ಪ ಹಾಗೂ ಏಣಗಿ-ಹಿಟ್ಟಣಗಿ ಏತ ನೀರಾವರಿ ಯೋಜನೆಗಳು ಬರುತ್ತಿದ್ದು, ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ರೈತರ ಜಮೀನುಗಳಿಗೆ ನೀರು ಸಮಪರ್ಕಕವಾಗಿ ಬರದೇ ಇರುವುದರಿಂದ ಈ ಯೋಜನೆಯಡಿ ಜಮೀನು ಕಳೆದುಕೊಂಡ ರೈತರಿಗೆ ತೊಂದರೆಯಾಗಿದೆ ಎಂದು ಶಾಸಕ ಮಹಾಂತೇಶ ಎಸ್ ಕೌಜಲಗಿ ಅವರು ಸರ್ಕಾರದ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಉಪ ಮುಖ್ಯಮಂತ್ರಿಗಳು ಈ ಎಂಟು ಏತ ನೀರಾವರಿ ಯೋಜನೆಗಳನ್ನು ಪುನಶ್ಚೇತನಗೊಳಿಸಲು ಅಂದಾಜುವೆಚ್ಚ ಪತ್ರಿಕೆ ತಯಾರಿಸಿದೆ ಕೂಡಲೇ ಸಮಕ್ಷ ಪ್ರಾದಿಕಾರದ ಅನುಮೋದನೆ ಪಡೆದು ಪುನಶ್ಚೇತನ ಕಾರ್ಯ ಕೈಗೊಳ್ಳಲಾಗುವುದು. ದೇವಲಾಪೂರ ಹಾಗೂ ಬೈಲವಾಡ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಸೇರಿದಂತೆ ಬೈಲಹೊಂಗಲ ತಾಲೂಕಿನ ಕೆಂಗಾನೂರು, ಜಾಲಿಕೊಪ್ಪ ಮತ್ತು ಬೂದಿಹಾಳ ಏತ ನೀರಾವರಿ ಯೋಜನೆಗಳ ಪುನಶ್ಚೇತನ ಕಾಮಗಾರಿಗಳಿಗೆ ಪ್ರಸಕ್ತ ದರಪಟ್ಟಿಯನ್ವಯ ಅಂದಾಜು ವೆಚ್ಚ ಪತ್ರಿಕೆ ನೀರಾವರಿ ನಿಗಮದಡಿ ತಯಾರಿಕಾ ಹಂತದಲ್ಲಿದ್ದು, ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಶಿವಕುಮಾರ್ ತಿಳಿಸಿದ್ದಾರೆ.

ಸವದತ್ತಿ ತಾಲೂಕಿನ ಬಡ್ಲಿ ಗ್ರಾಮದಲ್ಲಿ ಬಡ್ಲಿ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ಅನುಕೂಲತೆಗಾಗಿ ಸರ್ಕಾರಿ ಪ್ರೌಡ ಶಾಲೆಯನ್ನು ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದು ಪ್ರಾರಂಭಿಸಲು ಕ್ರಮ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಾಸಕ  ಕೌಜಲಗಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸವದತ್ತಿ ತಾಲೂಕಿನ ಬಡ್ಲಿ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಸರ್ಕಾರಿ ಪ್ರೌಡ ಶಾಲೆ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಸಂಗತಿ ಹಾಗೂ ಶಾಲೆಗಾಗಿ ಸಲ್ಲಿಸಿರುವ ಪ್ರಸ್ತಾವನೆಯೂ ಸರ್ಕಾರದ ಗಮನಕ್ಕೆ ಬಂದಿದ್ದು, ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದು ಇಲ್ಲಿ ಸರ್ಕಾರಿ ಪ್ರೌಢ ಶಾಲೆ ಪ್ರಾರಂಭಿಸಲು ಕ್ರಮ ಕೈಗೊಳ್ಳುವುದುದಾಗಿ ತಿಳಿಸಿದ್ದಾರೆ.

ಡಯಾಲಿಸಿಸ್ ಕೇಂದ್ರಕ್ಕೆ ಸಿಬ್ಬಂದಿ : ಬೈಲಹೊಂಗಲ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಯಾಲಿಸಿಸ್ ಯಂತ್ರಗಳಲ್ಲಿ ಡಯಾಲಿಸಿಸ್ ಸೈಕಲ್‌ಗಳ ಸಂಖ್ಯೆಯನ್ನು ಹೆಚ್ಚಿಸಿ, ಡಯಾಲೀಸಿಸ್ ಸೇವೆ ಒದಗಿಸಲು ಜೂ.27ರಂದು 4 ವಿಭಾಗದಲ್ಲಿ ಟೆಂಡರ್ ಕರೆಯಲಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದ ನಂತರ ನಿಯಮಾನುಸಾರ ನುರಿತ ಸಿಬ್ಬಂದಿ ಒದಗಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಉತ್ತರಿಸಿದ್ದಾರೆ.  
 ಬಾಲ ಭವನ ನಿರ್ಮಾಣಕ್ಕೆ ಕ್ರಮ : ಕೇಂದ್ರ ಬಾಲ ಭವನ ಕಬ್ಬನ್ ಪಾರ್ಕ ಇವರಿಂದ ಅನುಮೋದನೆಯನ್ನು ಪಡೆದು ಬೈಲಹೊಂಗಲ ಪಟ್ಟಣದಲ್ಲಿ ಬಾಲ ಭವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೈಲಹೊಂಗಲ-ಮುರಗೋಡ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಮರಕುಂಬಿ ಗ್ರಾಮದ ಗ್ರಾಮದ ಬ್ಲಾಕ್ ನಂ 157 ರ 2.10 ಎಕರೆ ಜಮೀನಿನಲ್ಲಿ  ಬಾಲ-ಭವನ ಹಾಗೂ ಪುರಸಭೆ ಉದ್ಯಾನವನ್ನು ನಿರ್ಮಿಸಲು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರಿಗೆ ಜಮೀನು ಹಸ್ತಾಂತರಗೊಂಡಿದೆ. ಕೆ.ಆರ್.ಐ.ಡಿ.ಎಲ್ ಎಜೆನ್ಸಿ ಕಿತ್ತೂರು ಇವರಿಂದ ಬಾಲ ಭವನ ನಿರ್ಮಿಸಲು ರೂ 279 ಲಕ್ಷ ಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಅಲ್ಲದೆ ಸದರಿ ಪ್ರಸ್ತಾವನೆಯು ಪರಿಶೀಲನೆಯಲ್ಲಿದ್ದು, ಮಂಜೂರಾತಿ ಪಡೆದು ಬಾಲ ಭವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net