ಜಾಮೀನಿನ ಮೇಲೆ ಹೊರಬಂದು ತಲೆಮರೆಸಿಕೊಂಡಿದ್ದವನ ಸೆರೆ

tunga nagar police station
Published on

ಶಿವಮೊಗ್ಗ: ಜಾಮೀನಿನ ಮೇಲೆ ಹೊರಬಂದು ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿನೋಬನಗರ ಡಿವಿಜಿ ಪಾರ್ಕ್ ಸಮೀಪದ ನಿವಾಸಿ ಚಂದ್ರ ಅಲಿಯಾಸ್ ಕರಿಯಾ (31) ಬಂಧಿತ ಆರೋಪಿ.

ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಡಪುಗೆರೆಯ ಚಂದ್ರು ಶಿವಮೊಗ್ಗದಲ್ಲಿ ಆಟೋ ಚಾಲಕನಾಗಿದ್ದ. ಈತನ ಮೇಲೆ ತುಂಗಾನಗರ ಠಾಣೆಯಲ್ಲಿ ವಿವಿಧ ಪ್ರಕರಣ ಆರು ಪ್ರತ್ಯೇಕ ಕೇಸ್‌ಗಳಿದ್ದವು. ಈತ ಶಿವಮೊಗ್ಗದಿಂದ ತಲೆಮರೆಸಿಕೊಂಡು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಬೆಟ್ಟದ ಮಲ್ಲೇಶ್ವರನಗರದಲ್ಲಿ ವಾಸವಾಗಿದ್ದ.

2018ರಿಂದ ತಲೆಮರೆಸಿಕೊಂಡಿದ್ದ. ಜಾಮೀನಿನ ಮೇಲೆ ಹೊರಬಂದ ಬಳಿಕ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅಲ್ಲದೆ, ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ. ಹಾಗಾಗಿ ಈತನ ಬಂಧನಕ್ಕೆ ನ್ಯಾಯಾಲಯವು ವಾರೆಂಟ್ ಜಾರಿಯಾಗಿತ್ತು. ಶನಿವಾರ ಬೆಟ್ಟದ ಮಲ್ಲೇಶ್ವರನಗರದಲ್ಲಿ ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net