

ಬಳ್ಳಾರಿ:ಬೆಂಗಳೂರಿನ ಕೆಜೆ ಹಳ್ಳಿ ಗಲಭೆ ಪ್ರಕರಣದ ಕೆಲ ಆರೋಪಿಗಳಿಗೆ ಬೆಲ್ ಸಿಕ್ಕಿದ್ದು,
ಆರು ತಿಂಗಳ ಬಳಿಕ ಬಳ್ಳಾರಿ ಸೆಂಟ್ರಲ್ ಜೈಲ್ ನಿಂದ ಮುಕ್ತಿ ಪಡೆದಿದ್ದಾರೆ.
ಶುಕ್ರವಾರ ರಾತ್ರಿ ಜೈಲ್ ನಿಂದ 29 ಆರೋಪಿಗಳ ಬಿಡುಗಡೆ ಮಾಡಲಾಯಿತು.
ಬಳ್ಳಾರಿಯಿಂದ ಬೆಂಗಳೂರಿಗೆ ವಿಶೇಷ ಬಸ್ ನಲ್ಲಿ ಆರೋಪಿಗಳು ಪ್ರಯಾಣ ಬೆಳೆಸಿದರು.
ಗಲಭೆ ನಡೆದ ದಿನ 100 ಕ್ಕೂ ಹೆಚ್ಚು ಆರೋಪಿಗಳನ್ನ ಬಳ್ಳಾರಿ ಜೈಲ್ ಗೆ ಕರೆತರಲಾಗಿತ್ತು.
ಮೊದಲ ಹಂತದಲ್ಲಿ 29 ಆರೋಪಿಗಳಿಗೆ ಬೇಲ್ ಸಿಕ್ಕ ಹಿನ್ನೆಲೆ, ಜೈಲ್ ನಿಂದ ಬಿಡುಗಡೆ ಮಾಡಲಾಗಿದೆ.