ಬೈಕಂಪಾಡಿ ಕೊಲೆ ಆರೋಪಿ ಬಂಧನ

mng--22 Aug Manu sebastian
Published on

ಮಂಗಳೂರು: ನಗರದ ಹೊರ ವಲಯದ ಬೈಕಂಪಾಡಿ ಎಪಿಎಂಸಿ ಕಟ್ಟಡದ ವಾಣಿಜ್ಯ ಮಳಿಗೆ ಹಿಂಭಾಗ ಹಳೇ ಹರಾಜು ಕಟ್ಟಡದ ಒಳಗಡೆ ಆ.17ರಂದು ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.


ಕೇರಳದ ಕಣ್ಣೂರು ನಿವಾಸಿ ಮನು ಸೆಬಾಸ್ಟಿಯನ್ (33) ಬಂಧಿತ ಆರೋಪಿ. ಈತ 45 ವರ್ಷ ವಯಸ್ಸಿನ ಅಪರಿಚಿತನೋರ್ವನನ್ನು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಪಣಂಬೂರು ಇನ್‌ಸ್ಪೆಕ್ಟರ್ ಸೋಮಶೇಖರ್ ಜೆ.ಸಿ., ಪಿಎಸ್‌ಐಗಳಾದ ರಾಘವೇಂದ್ರ ನಾಯ್ಕ, ಜ್ಞಾನಶೇಖರ್ ಹಾಗೂ ಪಣಂಬೂರು ಠಾಣಾ ಸಿಬ್ಬಂದಿ ಶ್ರಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net