ಬೈಕಂಪಾಡಿ ಜೂಜಾಟ 9 ಮಂದಿಯ ಬಂಧನ

FIR-2
Published on

ಮಂಗಳೂರು: ಬೈಕಂಪಾಡಿ ಗ್ರಾಮದ ಬೈಕಂಪಾಡಿ ರೈಲ್ವೇ ಟ್ರಾೃಕ್ ದಕ್ಷಿಣ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಜೂಜಾಟವಾಡುತ್ತಿದ್ದ 9 ಮಂದಿಯನ್ನು ಸಿಸಿಬಿ ಹಾಗೂ ಪಣಂಬೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.


ಮಹಮ್ಮದ್ ಹನೀಫ್, ಜಾಕೀರ್ ಅಹಮ್ಮದ್,ವಿಲ್ಪ್ರೆಡ್ ಡಿಸೋಜ, ಅನಿಲ್ ಕುಮಾರ್, ಮುರ್ತೋಝ ಇಮಾಮ್ ಸಾಬ್, ಶಶಿ ದೇವಾಡಿಗ, ಮೈಲಾರಪ್ಪ, ರಾಯ್ ಡಯಾಸ್, ಜೋನ್ ರಾಬರ್ಟ್ ಬಂಧಿತರು.


ಆರೋಪಿಗಳಿಂದ 11,265 ರೂ. ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net