ಒಕ್ಕೂಟದ ಸೌಲಭ್ಯ ಬಳಸಿ ಲಾಭಾಂಶ ಗಳಿಕೆ

baidebettu
ಬೈದೆಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಒಕ್ಕೂಟ ವಿಸ್ತರಣಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಸಂಘ 48 ವರ್ಷ ಪೂರೈಸಿದ್ದು, ನೂತನ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಒಕ್ಕೂಟದ ಅನುದಾನ ಹಾಗೂ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಲಾಭಾಂಶ ಪಡೆಯಿರಿ ಎಂದು ಒಕ್ಕೂಟದ ವಿಸ್ತರಣಾಧಿಕಾರಿ ಮಂಜುನಾಥ್ ಹೇಳಿದರು. ಬೈದೆಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಸಂಘದ ಉಪಾಧ್ಯಕ್ಷೆ ಬಾಬಿ ಶೆಡ್ತಿ ಅಧ್ಯಕ್ಷತೆ ವಹಿಸಿದ್ದರು. ಕಟ್ಟಡ ಸಮಿತಿ ಸದಸ್ಯ ಬಿ.ಮಾಧವ ಪೈ, ಪ್ರಮುಖರಾದ ದಯಾನಂದ ಶೆಟ್ಟಿ, ನಿರ್ದೇಶಕರಾದ ಶೇಖರ ಶೆಟ್ಟಿ, ಕುಸುಮಾ ಶೆಡ್ತಿ, ಆಶಾ ಶೆಡ್ತಿ, ಯಶೋದಾ ಶೆಡ್ತಿ, ಕುಸುಮಾ ಪೂಜಾರ್ತಿ, ಮಾಧವ ಮಡಿವಾಳ, ಸದಸ್ಯರು, ಹೈನುಗಾರರು, ಸಿಬ್ಬಂದಿ ಉಪಸ್ಥಿತರಿದ್ದರು. ಹಾಲು ಪರೀಕ್ಷಕ ರಾಜೇಶ್ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಸದಾಶಿವ ಕೆ. ವರದಿ ವಾಚಿಸಿದರು. ಸಂಗೀತಾ ವಂದಿಸಿದರು. ಸಂಘವು ವರದಿ ವರ್ಷದಲ್ಲಿ ಒಂದು ಲಕ್ಷದ ಮೂರು ಸಾವಿರ ರೂ ಲಾಭಗಳಿಸಿದೆ.

ಹೈನುಗಾರರು ತಮ್ಮ ಮೊಬೈಲ್‌ನಲ್ಲಿ ಫಾರ್ಮರ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹಾಲಿನ ದರ, ಪ್ರತಿನಿತ್ಯದ ವ್ಯವಹಾರ ಮಾಡಬೇಕು. ಇದು ಸರ್ಕಾರದ ಆದೇಶವಾಗಿದ್ದು, ಇದನ್ನು ಅಳವಡಿಸಿಕೊಳ್ಳದಿದ್ದಲ್ಲಿ ಲೀಟರ್ ಮೇಲಿನ ಸರ್ಕಾರದ ಐದು ರೂ. ಪ್ರೋತ್ಸಾಹಧನ ರದ್ದಾಗುತ್ತದೆ. ಇದನ್ನು ಹೈನುಗಾರರು ಗಮನಿಸಬೇಕು.-ಮಂಜುನಾಥ್, ಕೆಎಂಎಫ್ ಒಕ್ಕೂಟ ವಿಸ್ತರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net