ಹುಟ್ಟಿದ ಕೂಸು ಮುಂದೆ ಚಿಗುರಿತಲೇ ಬಹುಪರಾಕ್: ಶ್ರೀ ವೀರಭದ್ರೇಶ್ವರ ದೇವರ ಕಾರ್ಣಿಕ

Karadagi Karnika
Published on

ಸವಣೂರ: ವಿಜಯದಶಮಿ ಹಬ್ಬದ ಅಂಗವಾಗಿ ತಾಲೂಕಿನ ಸುಕ್ಷೇತ್ರ ಕಾರಡಗಿ ಗ್ರಾಮ ಶ್ರೀ ವೀರಭದ್ರೇಶ್ವರ ದೇವರ ಕಾರ್ಣಿಕ ಶನಿವಾರ ರಾತ್ರಿ ಸಾವಿರಾರು ಭಕ್ತರ ಮಧ್ಯೆ ಜರುಗಿತು.

‘ಹುಟ್ಟಿದ ಕೂಸು ಮುಂದೆ ಚಿಗುರಿತಲೇ ಬಹುಪರಾಕ್’ ಎಂದು ಹಾನಗಲ್ಲ ತಾಲೂಕಿನ ಹರನಗಿರಿ ಗ್ರಾಮದ ನಿವಾಸಿ ಈರಪ್ಪ ಬಡಗೇರ ಕಾರ್ಣಿಕ ನುಡಿದರು.

ನಾಡಿನ ಜನತೆಗೆ ಮುಂದಿನ ದಿನಮಾನಗಳು ಉತ್ತಮವಾಗಿರಲಿವೆ ಎಂಬುದು ಕಾರ್ಣಿಕದ ಸೂಚನೆಯಾಗಿದೆ ಎಂದು ಶ್ರೀ ವೀರಭದ್ರೇಶ್ವರ ದೇವರ ಕಾರ್ಣಿಕವನ್ನು ಭಕ್ತರು ವಿಶ್ಲೇಷಿಸಿದರು. ನಂತರ, ಅಹೋರಾತ್ರಿ ಹಾವೇರಿ ಕನ್ನಡತಿ ಕಲಾ ತಂಡದವರಿಂದ ಜಾನಪದ ಕಾರ್ಯಕ್ರಮ, ಕಾರಡಗಿ ಚಿಣ್ಣರ ಚಿಲಿಪಿಲಿ ಕೋಲಾಟ ಬಳಗದಿಂದ ಜನಪದ ಕಾರ್ಯಕ್ರಮ ಜರುಗಿತು. ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net