

ಮೈಸೂರು: ಮಾ.6ರಿಂದ 11 ರವರೆಗೆ ನಡೆಯಲಿರುವ ರಂಗಾಯಣದ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ- 2024’ ಟಿಕೆಟ್ ಮಾರಾಟ ಆರಂಭವಾಗಿದೆ.
ರಂಗಾಯಣದ ಅಂಗಳದಲ್ಲಿ ಶುಕ್ರವಾರ ನಾಟಕೋತ್ಸವ ಸಂಚಾಲಕ ಪ್ರೊ.ಎಚ್.ಎಸ್.ಉಮೇಶ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಅವರು ಟಿಕೆಟ್ ಕೊಳ್ಳುವ ಮೂಲಕ ರಂಗೋತ್ಸವದ ಟಿಕೆಟ್ ಮಾರಾಟಕ್ಕೆ ಚಾಲನೆ ನೀಡಿದರು.
ಎಲ್ಲ ನಾಟಕಗಳಿಗೂ 100 ರೂ. ಬೆಲೆ ನಿಗದಿ ಮಾಡಲಾಗಿದೆ. ಶೇ.40 ರಷ್ಟು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಹಾಗೂ ಶೇ.40 ರಷ್ಟು ಟಿಕೆಟ್‌ಗಳನ್ನು ರಂಗಾಯಣದ ಟಿಕೆಟ್ ಕೌಂಟರ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಉಳಿದ ಶೇ.20ರಷ್ಟು ಟಿಕೆಟ್‌ಗಳನ್ನು ಆಯಾಯಾ ನಾಟಕ ಪ್ರದರ್ಶನದ ದಿನ ಮಾರಾಟ ಮಾಡಲು ರಂಗಾಯಣ ಮುಂದಾಗಿದೆ.