

ಚಿತ್ರದುರ್ಗ:ಎಲ್ಲೆಡೆ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿರುವುದು ರೈತರಿಗೆ ಸಂತಸ ತಂದಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ಚಿತ್ರದುರ್ಗ ತಾಲೂಕು ಕಾತ್ರಾಳ್‌ಕೆರೆ ಕೋಡಿ ಬಿದ್ದಿರುವುದರಿಂದ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದರು. ನನ್ನ ವಿಧಾ ನಸಭಾ ಕ್ಷೇತ್ರ ವ್ಯಾಪ್ತಿಯ 90 ಭಾಗ ಕೆರೆ,ಗೋಕಟ್ಟೆಗಳು,ಚೆಕ್ ಡ್ಯಾಂಗಳು ಕೋಡಿ ಬಿದ್ದಿವೆ.
ಹತ್ತಾರು ವರ್ಷಗಳಿಂದ ಮಳೆ ಬರದೇ ಒಣಗಿದ್ದ ಕೆರೆಗಳು ಈಗ ಮೈ ತುಂಬಿವೆ. ಗ್ರಾಮೀಣ ಭಾಗದಲ್ಲಿ ನೀರಿನ ಸಂಗ್ರಹಕ್ಕಾಗಿ 1.50 ಕೋಟಿ ರೂ.ವೆಚ್ಚದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದು,ಬಹುತೇಕ ಎಲ್ಲ ಚೆಕ್ ಡ್ಯಾಂಗಳು ತುಂಬಿವೆ. ವ್ಯರ್ಥವಾಗಿ ಹರಿದು ಹೋಗುವ ನೀರಿನ ಸಂಗ್ರಹಕ್ಕಾಗಿ ಚೆಕ್ ಡ್ಯಾಂಗಳು ಸಹಕಾರಿಯಾಗಿವೆ.
ಕಳೆದ ಹಲವು ವರ್ಷಗಳ ಹಿಂದೆ ಎಲ್ಲ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ,ಪರಿತಪಿಸಿದ್ದ ದಿನಗಳನ್ನು ಎಂದಿಗೂ ನಾವು ಎಂದು ಮರೆಯ ಲಾಗದು. ಈಗ 10-20 ಅಡಿಗೆ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿದೆ. ತೋಟಗಾರಿಕೆ ಬೆಳೆಗೆ ಆದ್ಯತೆ ನೀಡುವ ಮೂಲಕ ಆರ್ಥಿಕವಾಗಿ ಸದೃಢರಾಗುವಂತೆ ರೈತರಿಗೆ ಸಲಹೆ ನೀಡಿದರು.
ವಿ.ವಿ.ಸಾಗರ ಭರ್ತಿಯಾಗಿರುವುದು ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಪ್ರತಿಯೊಬ್ಬರು ಜಲ ಸಂರಕ್ಷಣೆ ಮಾಡುವುದರಿಂದ ಮುಂದಿನ ಪೀಳಿಗೆಗೆ ನೀರಿ ಕೊರತೆ ನೀಗಿಸ ಬಹುದು. ರೈತರು ಸಂತೋಷ ನಾಡು ಸಮೃದ್ಧವಾಗಿರುತ್ತದೆ ಎಂದರು. ಗ್ರಾಪಂ ಅಧ್ಯಕ್ಷೆ ವೀ ಣಾದೇವರಾಜ್,ಉಪಾಧ್ಯಕ್ಷೆ ಪವಿತ್ರಾ,ಪಿಡಿಒ ಶೃತಿ,ಸದಸ್ಯರು,ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.
ಬಾಗಿನ ಅರ್ಪಣೆ
ಬಿಜೆಪಿ ಮುಖಂಡ ಸಿದ್ದಾರ್ಥ ಗುಂಡಾರ್ಪಿ ಅವರು ಭಾನುವಾರ ಇಂಗಳದಾಳ್ ಗ್ರಾಮದ 2 ಚೆಕ್‌ಡ್ಯಾಂಗಳಿಗೆ ಹಾಗೂ ಕೋಡಿ ಬಿ ದ್ದಿರುವ ಕುರುಮರಡಿಕೆರೆಗೆ ಭಾನುವಾರ ಬಾಗಿನ ಅರ್ಪಿಸಿದರು. ಗ್ರಾಪಂ ಸದಸ್ಯ ಪ್ರಕಾಶ್,ಮಹೇಶ್,ರಾಜಪ್ಪ,ರಘು,ಮುಖಂಡರಾದ ಜಿ.ತಿಪ್ಪೇಸ್ವಾ ಮಿ,ಪಿ.ಕೆ.ರಾಮಣ್ಣ,ಬಿ.ಅಶೋಕ್,ಜಿ.ಟಿ.ಓಬಣ್ಣ,ಜಿ.ಟಿ.ನಾಗರಾಜ್,ಎಸ್.ಮಂಜುನಾಥ್,ಉಮೇಶ್,ಪ್ರಕಾಶ್,ಪ್ರಸನ್ನ, ಮಂಚಿನ್ನಮ್ಮ,ಕೆ.ಟಿ.ಗಾದ್ರಪ್ಪ,ಮಹಾಂತೇಶ್,ಹನುಂಮತಪ್ಪ,ರವಿಕುಮಾರ್,ಆರ್.ಎಚ್.ಉಮೇಶ್,ರಾಮಣ್ಣ ,್ಮಹಂತೇಶ್ ತಳವಾರ್, ಅಶೋಕ್,ಆರ್.ಟಿ.ಭೀಮಣ್ಣ,ಜಿ.ಟಿ.ಗುರುರಾಜ್,ಚಿನ್ನಮ್ಮ ಇದ್ದರು.
ಕೋಟ್
ಇಂಗಳದಾಳ್ ಗ್ರಾಮದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು 2 ಕೋಟಿ ರೂ.ವೆಚ್ಚದಲ್ಲಿ 2 ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದಾರೆ. ಇದರಿಂದ ವ್ಯರ್ಥವಾಗುತ್ತಿದ್ದ ನೀರು ಶೇಖರಣೆ ಆಗುತ್ತಿದೆ. ಇದರಿಂದ ಅಂತರ್ಜಲ ವೃದ್ಧಿಗೆ ಹಾಗೂ ಕೃಷಿಗೆ ಅನುಕೂಲವಾಗಿದೆ. ಕುರುಮರಡಿಕೆರೆ, ಇಂಗಳದಾಳ್,ಕುಂಚಿಗನಾಳ್,ಪಾಲವ್ವಹಳ್ಳಿ,ಡಿ.ಎಸ್.ಹಳ್ಳಿ ಮತ್ತಿತರ ಹಳ್ಳಿಗಳ ಜಲ ಮೂಲವಾಗಿದೆ. ಈ ಕೆರೆ ತುಂಬಿದರೆ ಕನಿಷ್ಠ 2-3 ವರ್ಷ ರೈತರ ನೆಮ್ಮದಿಗೆ ಕಾರಣವಾಗುತ್ತದೆ
ಡಾ.ಸಿದ್ದಾರ್ಥ ಗುಂಡಾರ್ಫಿ,ಬಿಜೆಪಿ ಮುಖಂಡ,ಚಿತ್ರದುರ್ಗ.
----