ಮಹಿಳೆಯರನ್ನು ಗೌರವಿಸುವುದು ಎಲ್ಲರ ಕರ್ತವ್ಯ: ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಅಭಿಮತ

Bagina
Published on

ಮಂಡ್ಯ: ಹೆಣ್ಣು ಕುಟುಂಬದ ಶಕ್ತಿ. ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಯುವ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಹೇಳಿದರು.
ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಗೌರಿ-ಗಣೇಶ ಹಬ್ಬ ಅಂಗವಾಗಿ ಸೋಮವಾರ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಬಾಗಿನ ಕೊಟ್ಟು ಮಾತನಾಡಿದರು. ಹಿಂದುಗಳ ಪವಿತ್ರ ಹಬ್ಬ ಗೌರಿ-ಗಣೇಶ ಹಬ್ಬದಂದು ಮಹಿಳೆಯರಿಗೆ ಬಾಗಿನ ಕೊಡುವುದು ಪುಣ್ಯದ ಕೆಲಸ ಎಂದರು.
ತಾಲೂಕು ಪಂಚಾಯತಿ ಮಾಜಿ ಸದಸ್ಯ ಯೋಗಾನಂದ ಪಟೇಲ್, ಗ್ರಾಮ ಪಂಚಾಯತಿ ಸದಸ್ಯ ಕಬ್ಬನಹಳ್ಳಿ ರಾಮಚಂದ್ರು, ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೇಶ್, ಮಾಜಿ ಅಧ್ಯಕ್ಷರಾದ ಮಹೇಶ್, ಕನಕಮ್ಮ, ಮಾಯಣ್ಣ, ಮುಖಂಡರಾದ ಕುಮಾರಸ್ವಾಮಿ, ನಾಗರಾಜು, ಹನಕೆರೆ ಶಶಿ, ಅರವಿಂದ್, ಬಿ.ಎಂ.ದಿನೇಶ್, ಮನು ಇತರರಿದ್ದರು. ಇದೇ ವೇಳೆ ಕೊತ್ತತ್ತಿ ಹೋಬಳಿಯ ಮೊದಲನೇ ಹಾಗೂ ಎರಡನೇ ವೃತ್ತದ ಅಂಗನವಾಡಿ ಶಿಕ್ಷಕರು, ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಬಾಗಿನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net