ಮೈಸೂರಿನಲ್ಲಿ ಪೌರ ಕಾರ್ಮಿಕರಿಗೆ ಬಾಗಿನ ಅರ್ಪಣೆ

Pourakarmika
Published on

ಮೈಸೂರು: ನಗರದ ಚಾಮುಂಡಿಪುರಂನ ತಗಡೂರು ರಾಮಚಂದ್ರ ರಾವ್ ಉದ್ಯಾನದಲ್ಲಿ ನಗರ ಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡಿದರು.

55ನೇ ವಾರ್ಡ್‌ನ 50 ಮಹಿಳಾ ಪೌರಕಾರ್ಮಿಕರಿಗೆ ಬಾಗಿನ, ಸೀರೆಗಳನ್ನು ನೀಡಿ ಮಾತನಾಡಿದ ಮಾ.ವಿ. ರಾಮಪ್ರಸಾದ್, ಎಲ್ಲರೂ ಮನೆಯಲ್ಲಿ ಹೊಸ ಬಟ್ಟೆ ತೊಟ್ಟು ಗೌರಿ ಪೂಜೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಪೌರಕಾರ್ಮಿಕರು ತಮ್ಮ ಸ್ವಚ್ಚತೆ ಕಾರ್ಯದಲ್ಲಿ ದೇವರನ್ನು ಕಾಣುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಬಾಗಿನ ನೀಡಲಾಗಿದೆ ಎಂದರು.

ಈ ಸಂದರ್ಭ ನಗರದ ನಿವಾಸಿಗಳಾದ ಸಂದೀಪ್ ಚಂದ್ರಶೇಖರ್, ವಿಕ್ರಮ್ ಅಯ್ಯಂಗಾರ್, ಗೋಕುಲ್, ಪುನೀತ್, ಅದ್ವೈತ್, ಶಿವು, ಸಂತೋಷ್, ಧರ್ಮೇಂದ್ರ, ದೇವೇಂದ್ರ ಸ್ವಾಮಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net