

ಹುಬ್ಬಳ್ಳಿ: ಇಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾ ಮಂಡಳದ ಆಶ್ರಯದಲ್ಲಿ ಹೊಸೂರಿನಲ್ಲಿರುವ ವಿಸರ್ಜನೆ ಬಾವಿಗೆ ಬಾಗಿನ ಅರ್ಪಿಸಲಾಯಿತು.
ಅತಿಥಿಗಳಾಗಿದ್ದ ಡಾ. ಚಂದ್ರಪ್ರಭಾ ಪೂಜಾರ ಬಾವಿಗೆ ಬಾಗಿನ ಅರ್ಪಿಸಿ ಮಾತನಾಡಿ, ಗಣೇಶ ಹಬ್ಬವು ಎಲ್ಲೆಡೆ ಶಾಂತಿ ಸೌಹಾರ್ದತೆ ಮೂಡಿಸುತ್ತದೆ. ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಜಾಗ್ರತೆ ವಹಿಸಬೇಕು. ಭೂಮಿ, ಗಂಗೆ, ಅಗ್ನಿ ಇವುಗಳಿಗೆ ಪೂಜೆ ಮಾಡುವುದರಿಂದ ಮನುಷ್ಯನಲ್ಲಿರುವ ದುಷ್ಟ ಭಾವನೆಗಳು ದೂರಾಗಿ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ಪೂಜೆಗಳಿಂದ ಶಾಂತತೆ ಇಮ್ಮಡಿಯಾಗುತ್ತದೆ ಎಂದು ಹೇಳಿದರು.
ಶ್ರೀ ನೀಲಕಂಠಸ್ವಾಮಿ ಹಿರೇಮಠ, ಸುಮಾ ಹಿರೇಮಠ, ಕೋಮಲ್ ಕಾಟವೆ, ದಾಕ್ಷಾಯಿಣಿ ಕವಿಶೆಟ್ಟಿ, ಡಾ. ಮಂಜುಳಾ ಹತ್ತಿಮತ್ತೂರ, ಅಕ್ಕಮಹಾದೇವಿ ಅಂದೇಲಿಮಠ, ಸಂಗೀತಾ ಜಡಿ, ಗಾಯತ್ರಿ ನೆಲ್ಲಿಕೊಪ್ಪ, ವಿಜಯಲಕ್ಷ್ಮಿ ಏಕಬೋಟೆ, ಸರಸ್ವತಿ ಮೆಹರವಾಡೆ, ರೂಪಾ ಅಂಗಡಿ, ರತ್ನಾ ಬಸಾಪುರ, ಅನಿತಾ ಜಡಿ, ಪಾರ್ವತಿ ಹಿರೇಮಠ, ಅನಿಲ ಬೇವಿನಕಟ್ಟಿ, ಎಸ್.ಎಸ್. ಕಮಡೋಳ್ಳಿಶೆಟ್ಟರ್, ಅರುಣ ಹಚಡದ, ಅನಿಲ ಕವಿಶೆಟ್ಟಿ, ಎಂ.ಎಂ. ಡಂಬಳ, ಚಂದ್ರಶೇಖರ ಗಾಣಿಗೇರ, ರೋಹನ ಗೊಂದಕರ, ಪ್ರಮೋದ ಬದ್ದಿ, ಅಮರೇಶ ಹಿಪ್ಪರಗಿ ಇತರರು ಇದ್ದರು.