ಅಯ್ಯನಕೆರೆಗೆ ಬಾಗೀನ ಅರ್ಪಣೆ

2 ckm 8
ಚಿಕ್ಕಮಗಳೂರು ಜಿಲ್ಲೆಯ ಅಯ್ಯನ ಕೆರೆ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶಾಸಕರಾದ ಎಚ್.ಡಿ.ತಮ್ಮಯ್ಯ ಹಾಗೂ ಎಸ್.ಎಲ್.ಭೋಜೇಗೌಡ ಅವರು ಕೆರೆಗೆ ಬಾಗೀನ ಅರ್ಪಿಸಿದರು. ಶ್ರೀಬಸವ ಮರುಳಸಿದ್ಧ ಸ್ವಾಮೀನಿ, ಶ್ರೀಜ್ಞಾನಪ್ರಭು ಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ, ಶ್ರೀವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಐತಿಹಾಸಿಕ ಹಿನ್ನೆಲೆಯುಳ್ಳ ಅಯ್ಯನಕೆರೆಯು ಮಲೆನಾಡು ಭಾಗದ ಜೀವನಾಡಿಯಾಗಿದೆ. ಇದರ ಸ್ವಚ್ಛತೆ ಮತ್ತು ಸಂರಕ್ಷಣೆಯು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಸಖರಾಯಪಟ್ಟಣ ಸಮೀಪದ ಅಯ್ಯನಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ವೃಂದದೊAದಿಗೆ ಶುಕ್ರವಾರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ವಾಣಿಕೆಗಿಂತ ಹೆಚ್ಚಿನ ಮಳೆಯಾದ ಕಾರಣ ಇತಿಹಾಸ ಪ್ರಸಿದ್ಧ ಅಯ್ಯನಕೆರೆ ತುಂಬಿ ಕೋಡಿ ಬಿದ್ದಿದೆ. ಸುತ್ತಮುತ್ತಲಿನ ನೂರಾರು ಗ್ರಾಮಗಳಿಗೆ ದಿನನಿತ್ಯದ ಬಳಕೆ ಹಾಗೂ ಕೃಷಿ ಚಟು ವಟಿಕೆಗಳಿಗೆ ನಿರೋದಗಿಸಲು ಅನುಕೂಲಕರವಾಗಿದೆ. ಪ್ರಕೃತಿದತ್ತವಾಗಿ ದೊರಕಿರುವ ಪ್ರತಿಯೊಂದು ಸಂಪನ್ಮೂಲಗಳ ಬಳಕೆಯ ಜೊತೆಗೆ ಅವುಗಳ ಸಂರಕ್ಷಣೆಯತ್ತ ಪ್ರತಿಯೊಬ್ಬರು ಗಮನಹರಿಸಬೇಕು ಎಂದರು.
ಗಾಳಿ, ನೀರು, ಬೆಂಕಿ ಸೇರಿದಂತೆ ಪಂಚಭೂತಗಳನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಭೂಮಿ, ನೀರನ್ನು ಮಾತೆಯರಿಗೆ ಹೋಲಿಸಲಾಗುತ್ತದೆ. ಅಂತಹ ಮಾತೆಯರನ್ನು ಪೂಜಿಸುವುದರ ಜೊತೆಗೆ ಪ್ರತಿಯೊಂದು ಕೆರೆಗಳನ್ನು ಸುವ್ಯವಸ್ಥಿತವಾಗಿರಿಸಿಕೊಂಡು, ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಿ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಸುಮಾರು ಏಳು ಗುಡ್ಡಗಳನ್ನು ಸುತ್ತುವರಿದು ನಿಂತಿರುವ ಅಯ್ಯನಕೆರೆಯು ತುಂಬಿ ಕೋಡಿ ಬಿದ್ದಿರುವುದು ಸುತ್ತಮುತ್ತಲಿನ ಗ್ರಾಮಗಳ ರೈತರ ಮೊಗದಲ್ಲಿ ಸಂತಸವನ್ನು ಮೂಡಿಸಿದೆ ಎಂದರು.
ಮಾನವ ಸೇರಿದಂತೆ ಪ್ರತಿಯೊಂದು ಜೀವಿಗೂ ನೀರು ಅತ್ಯಂತ ಅವಶ್ಯಕ. ಹೆಚ್ಚು ಮರ ಗಿಡಗಳನ್ನು ಬೆಳೆಸಿ ಪೋಷಿಸುವುದರಿಂದ ಕಾಲಕ್ಕೆ ತಕ್ಕ ಮಳೆಯಾಗುವುದಲ್ಲದೆ ಪ್ರಕೃತಿ ಸಮತೋಲನದಲ್ಲಿರುತ್ತದೆ. ಇತಿ ಹಾಸ ಪ್ರಸಿದ್ಧವುಳ್ಳ ಅಯ್ಯನಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಅಚ್ಚುಕಟ್ಟಾಗಿರಿಸಿಕೊಂಡು ಇದರ ರಕ್ಷಣೆಗೆ ಮುಂದಾಗಬೇಕು ಎಂದರು.
ನೀರಿನ ಮಹತ್ವವನ್ನು ಪ್ರತಿಯೊಬ್ಬರು ಅರಿತು ಅದರ ಹಿತಮಿತ ಬಳಕೆಯ ಬಗ್ಗೆ ಗಮನ ಹರಿಸಬೇಕು ರೈತರು ಕೃಷಿ ಚಟುವಟಿಕೆಗಳಲ್ಲಿ ಬಳಸಿಕೊಂಡು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಧೃಡರಾಗಲು ಅಯ್ಯ ನಕೆರೆಯ ಪಾತ್ರ ಮಹತ್ವದಾಗಿದೆ ಎಂದರು.
ಈ ಸಂದರ್ಭದಲ್ಲಿ ಬಸವತತ್ವ ಪೀಠದ ಶ್ರೀ ಬಸವಮರುಳಸಿದ್ದ ಸ್ವಾಮೀಜಿ, ಶ್ರೀಜ್ಞಾನಪ್ರಭು ಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ, ಹುಲಿಕೆರೆ ಮಠದ ಶ್ರೀವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಮಹಡಿಮನೆ ಸತೀಶ್, ಮಂಗಳ ತಮ್ಮಯ್ಯ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದಯಾಶಂಕರ್, ಸಖರಾಯಪಟ್ಟಣ ಗ್ರಾಪಂ ಅಧ್ಯಕ್ಷೆ ರಾಜಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net