ಕಿರಾಣಿ ಅಂಗಡಿಯಲ್ಲಿದ್ದ 3.25 ಲಕ್ಷ ರೂ. ಕಳ್ಳತನ

Thief
Published on

ಬ್ಯಾಡಗಿ: ಕಿರಾಣಿ ಅಂಗಡಿಯೊಂದರ ಮೇಲ್ಚಾವಣಿಗೆ ಹಾಕಿದ್ದ ತಗಡು ತೆಗೆದು ಅಂಗಡಿಯಲ್ಲಿದ್ದ 3.25 ಲಕ್ಷ ರೂ. ದೋಚಿರುವ ಘಟನೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆದಿದೆ.

ರವಿ ಸಣ್ಣಬಸಪ್ಪ ಹುಲಿಹಳ್ಳಿ (52) ಎಂಬುವರಿಗೆ ಸೇರಿದ ಗೋಣಿಬಸವೇಶ್ವರ ಕಿರಾಣಿ ಸ್ಟೋರ್​ನಲ್ಲಿ ಕಳ್ಳತನ ಆಗಿರುವುದು.

ಇವರು ಅಂಗಡಿಗೆ ಬೀಗ ಹಾಕಿಕೊಂಡು ಹೋಗಿದ್ದ ಸಮಯದಲ್ಲಿ ಯಾರೋ ಖದೀಮರು ಮೇಲ್ಚಾವಣಿಯ ತಗಡು ತೆಗೆದು ಒಳಗೆ ನುಗ್ಗಿ ಡ್ರಾನಲ್ಲಿದ್ದ ಹಣ ಲೂಟಿ ಮಾಡಿದ್ದಾನೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net