ಲಾಭದತ್ತ ಬೆಲ್ಲದ ಬಾಗೇವಾಡಿ ಪಿಕೆಪಿಎಸ್

9Huk1
Published on

ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿಯ ಕೃಷಿ ಸೇವಾ ಸಹಕಾರ ಸಂಘ ಪ್ರಸಕ್ತ ವರ್ಷಾಂತ್ಯಕ್ಕೆ ೩.೫೬ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಸದಸ್ಯ ಪೃಥ್ವಿ ಕತ್ತಿ ಹೇಳಿದರು.

ಸೋಮವಾರ ಸಂಘದ ಶತಮಾನೋತ್ಸವ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ೨೦೨೫ರ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ೧೯೦೫ರಲ್ಲಿ ಪ್ರಾರಂಭವಾದ ಸಂಘ ಹೆಮ್ಮರವಾಗಿ ಬೆಳೆದಿದೆ. ಬೆಲ್ಲದ ಬಾಗೇವಾಡಿ, ಹುಕ್ಕೇರಿ, ಮಲ್ಲಾಪುರ ಪಿಜಿ ಮತ್ತು ಕಲ್ಲೋಳಿ ಗ್ರಾಮದಲ್ಲಿ ಸಂಘದಿಂದ ಕೀಟನಾಶಕ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಮತ್ತಷ್ಟು ಮಳಿಗೆಗಳನ್ನು ಸ್ಥಾಪಿಸಲು ಕ್ರಮವಹಿಸಬೇಕೆಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಶ್ರೀಕಾಂತ ಖೇಮಲಾಪುರೆ ಮಾತನಾಡಿ, ಸಂಘದಿಂದ ರಸಗೊಬ್ಬರ, ಕೀಟನಾಶಕ ಮತ್ತು ಬೀಜ ಖರೀದಿಸುವ ಸದಸ್ಯರಿಗೆ ಶೇ.೮ರಂತೆ ರಸಗೊಬ್ಬರ ರಿಯಾಯ್ತಿ ಹಾಗೂ ಅ ವರ್ಗದ ಷೇರುದಾರರಿಗೆ ಶೇ.೨೫ ಲಾಭಾಂಶ ಹಂಚಿಕೆ ಮಾಡುವುದಾಗಿ ಘೋಷಿಸಿದರು.

ಪ್ರಗತಿಪರ ಕಬ್ಬು ಬೆಳೆಗಾರ ಸುಧೀರ ಕತ್ತಿ, ನ್ಯಾನೋ ರಸಗೊಬ್ಬರ ಬಳಕೆ ಕುರಿತು ರೈತರಿಗೆ ತಿಳಿವಳಿಕೆ ನೀಡಿದರು. ಸಂಘದ ವ್ಯವಸ್ಥಾಪಕ ರವೀಂದ್ರ ಕತ್ತಿ ವಾರ್ಷಿಕ ವರದಿ ಓದಿದರು.

ಉಪಾಧ್ಯಕ್ಷ ಅಶೋಕ ಬೆಲ್ಲದ, ನಿರ್ದೇಶಕರಾದ ಮುರಗೇಶ ಮಾಳಗಿ, ಸಂಗಪ್ಪ ಎಡತ್ತಿನವರ, ಭರಮಪ್ಪ ಮುನ್ನೋಳಿ, ಬಸವರಾಜ ಲಟ್ಟಿ, ನಾಸೀರ್ ಜಗದಾಳ, ಬಸವರಾಜ ಗಸ್ತಿ, ಮಂಗಲಾ ಚರಾಟಿ, ಸಂದೀಪ ಕತ್ತಿ, ರಾಜಕುಮಾರ ಪರೀಟ, ಮುಖಂಡರಾದ ಮುರಗೇಶ ಕತ್ತಿ, ಕಿಶೋರ ಕತ್ತಿ, ಅಪ್ಪಾಸಾಹೇಬ ಖೇಮಲಾಪುರೆ, ಮರೆಪ್ಪ ಮುನ್ನೋಳಿ, ಆರ್.ಟಿ.ಶಿರಾಳಕರ, ಗ್ರಾಪಂ ಅಧ್ಯಕ್ಷ ಗಂಗಾಧರ ನಾವಿ, ಲೆಕ್ಕ ಪರಿಶೋಧಕ ಶಿವಾನಂದ ಹಾಲಬಾವಿ ಇತರರಿದ್ದರು. ಸಾವಂತ ಮುನ್ನೋಳಿ ಸ್ವಾಗತಿಸಿ, ವಂದಿಸಿದರು. ಭರತೇಶ ಉಪಾಧ್ಯೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net