ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ

25-SanduruP2
ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಸಂಡೂರು ತಾಲೂಕು ಬಂಡ್ರಿಯಲ್ಲಿ ಸಿಪಿಐದಿಂದ ಪ್ರಚಾರಾಂದೋಲನ ನಡೆಯಿತು. ತಾಲೂಕು ಕಾರ್ಯದರ್ಶಿ ಎ.ಸ್ವಾಮಿ, ಬಂಡ್ರಿ ಶಾಖೆ ಕಾರ್ಯದರ್ಶಿ ಎಚ್.ದುರುಗಮ್ಮ, ಸಂಡೂರು ಶಾಖೆ ಕಾರ್ಯದರ್ಶಿ ಖಲಂದರ್ ಬಾಷಾ ಇತರರಿದ್ದರು.
Published on

ಸಂಡೂರು: ತಾಲೂಕಿನ ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಬಂಡ್ರಿ ಹಾಗೂ ಭುಜಂಗನಗರ ಗ್ರಾಮದಲ್ಲಿ ಸಿಪಿಐದಿಂದ ಬುಧವಾರ ಪ್ರಚಾರಾಂದೋಲನ ನಡೆಯಿತು.

ಸಿಪಿಐ ತಾಲೂಕು ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ತಾಲೂಕಿನ ಅರಣ್ಯ ಭೂಮಿ ಸಾಗುವಳಿ ಮಾಡುವ ಮತ್ತು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಈ ಕುರಿತು ತಾಲೂಕಿನಲ್ಲಿ ಸರ್ವೇ ನಡೆಸಬೇಕು. ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಜಿಂದಾಲ್ ಕಾರ್ಖಾನೆ ಮತ್ತು ಎನ್‌ಎಂಡಿಸಿಯಲ್ಲಿ ಸರೋಜಿನಿ ಮಹಿಷಿ ವರದಿಯ ಶಿಫಾರಸು ಜಾರಿ ಮಾಡಬೇಕು. ತೋರಣಗಲ್ ಗ್ರಾಮ ಕೈಗಾರಿಕಾ ಪ್ರದೇಶವಾಗಿರುವುದರಿಂದ 100 ಬೆಡ್ ಆಸ್ಪತ್ರೆ ಕಟ್ಟಿಸಿ ಬಸ್ ನಿಲ್ದಾಣ ನಿರ್ಮಿಸಬೇಕು. ಡಿಎಂಎಫ್ ಮತ್ತು ಕೆಎಂಇಆರ್‌ಸಿ ನಿಧಿಯಲ್ಲಿ ಆಸ್ಪತ್ರೆ. ಶಾಲಾ, ಕಾಲೇಜುಗಳು, ವಸತಿನಿಲಯಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಬೇಕೆಂದು ಆಗ್ರಹಿಸಿದರು.

ಜಿಂದಾಲ್ ಕಾರ್ಖಾನೆಯ ರಾಸಾಯನಿಕ ನೀರು ದರೋಜಿ ಕೆರೆಯಲ್ಲಿ ಸಂಗ್ರಹವಾಗುತ್ತಿರುವುದರಿಂದ ಕೃಷಿ ಇಳುವರಿ ಕುಂಠಿತವಾಗುತ್ತಿದೆ. ಕೆರೆಗೆ ರಾಸಾಯನಿಕ ನೀರು ಹರಿಯುವುದನ್ನು ತಡೆಯಬೇಕು. ವಿಮುಕ್ತ ದೇವದಾಸಿಯರಿಗೆ ಬಂಡ್ರಿ ಭಾಗದ ಸರ್ವೇ ನಂ.378ರಲ್ಲಿ ಆರು ಎಕರೆ ನಿವೇಶನ ನೀಡಿದ್ದು ನೆಲ ಸಮತಟ್ಟು ಮಾಡಿ ನಿವೇಶನ ಹಂಚಿಕೆ ಮಾಡಬೇಕು ಎಂದು ಎ.ಸ್ವಾಮಿ ಒತ್ತಾಯಿಸಿದರು.

ದೇವದಾಸಿ ಮಹಿಳೆಯರ ಸಂಘದ ತಾಲೂಕು ಅಧ್ಯಕ್ಷೆ ಮಾರಮ್ಮ, ಪ್ರಮುಖರಾದ ಬಸಮ್ಮ, ಬಸಪ್ಪ, ತಾಯಪ್ಪ, ಈರಪ್ಪ, ಹನುಮಂತಪ್ಪ, ತಿಪ್ಪೇಸ್ವಾಮಿ, ಹೊನ್ನೂರಮ್ಮ, ಜಾನಕಿ, ತಾಯಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net