ಕುಂದಾಪುರದಲ್ಲಿ ಬಗರ್‌ಹುಕುಂ ಸಮಿತಿ ಸಭೆ

gan-7
Published on

ಕುಂದಾಪುರ: ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕು ಬಗರ್ ಹುಕುಂ ಅಕ್ರಮ ಸಕ್ರಮ ಜಾಗ ಮಂಜೂರಾತಿ ಸಮಿತಿ ಸಭೆಯು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ ಕುಂದಾಪುರ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆಯಿತು.

ಹಲವು ವರ್ಷಗಳಿಂದ ಮಂಜೂರುಗೊಳ್ಳಲು ಬಾಕಿಯಿರುವ ಅರ್ಹ ಅಕ್ರಮ ಸಕ್ರಮ ಅರ್ಜಿಗಳನ್ನು ಶೀಘ್ರವೇ ಇತ್ಯರ್ಥಗೊಳಿಸಲು ಶಾಸಕರು ಸೂಚಿಸಿದರು. ಜತೆಗೆ 18 ಕಡತಗಳನ್ನು ಮಂಜೂರುಗೊಳಿಸಲು ಶಿಫಾರಸ್ಸು ಮಾಡಲಾಯಿತು.

ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ ಹೆಗಡೆ, ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಸದಾನಂದ ಶೆಟ್ಟಿ ಕೆದೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net