ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ

kadatha
Published on

ಮಡಿಕೇರಿ: ಮಡಿಕೇರಿ ತಾಲೂಕು ವ್ಯಾಪ್ತಿಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹೆಚ್ಚುವರಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯು ನೆರವಂಡ ಉಮೇಶ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

ಈ ಸಮಿತಿಗೆ ಒಟ್ಟು ೧೭ ಕಡತಗಳನ್ನು ಮಂಡಿಸಿದ್ದು, ಈ ಪೈಕಿ ೧೬ ಕಡತಗಳನ್ನು ಮಂಜೂರಾತಿಗೆ ಶಿಫಾರಸ್ಸು ಮಾಡಿ ಆಕ್ಷೇಪಣೆ ಅವಧಿಗೆ ಸಲ್ಲಿಸಲಾಯಿತು. ಸದಸ್ಯರಾದ ತುಳಸಿ ಗಾಂಧಿ ಪ್ರಸಾದ್, ಕೇಟೋಳಿ ಮೋಹನ್ ರಾಜ್, ಎಚ್.ಬಿ.ರಘು, ಸದಸ್ಯ ಕಾರ್ಯದರ್ಶಿಯಾದ ತಹಶೀಲ್ದಾರ್ ಪಿ.ಸಿ.ಪ್ರವೀಣ್ ಕುಮಾರ್, ಜಿಲ್ಲಾ ಭೂಮಿ ಸಮಾಲೋಚಕರು ಹಾಗೂ ಕಂದಾಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net