

ತುಮಕೂರು : ಭೂ ಮಂಜೂರಾತಿ ಸಮಿತಿಗಳಲ್ಲಿ ಮಂಜೂರಾಗಿರುವ ಜಮೀನಿಗೆ ಸಾಗುವಳಿ ಪತ್ರ ನೀಡುವಂತೆ ಹಾಗೂ ಬಗರ್‌ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ರಕ್ಷಣೆ ನೀಡುವಂತೆ ಕೋರಿ ಸೋಮವಾರ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕುಣಿಗಲ್ ತಾಲೂಕು ಸೇರಿ ಜಿಲ್ಲೆಯ ಸಾವಿರಾರು ಜನರು ಫಾರಂ ನಂ 53 ಮತ್ತು 57 ರಲ್ಲಿ ತಾವು ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಗೋವಾಳದ ಜಮೀನು ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದರು.
ಬಗರ್ ಹುಕ್ಕುಂ ಸಮಿತಿಯಲ್ಲಿ ಮಂಜೂರಾದ ಜಮೀನಿಗೂ ಇದುವರೆಗೂ ಸಾಗುವಳಿ ಚೀಟಿ ನೀಡಿಲ್ಲ. ಇದಕ್ಕಾಗಿ ರೈತರು ದಿನ ನಿತ್ಯ ಸರಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಭೂಮಿಯಲ್ಲಿ ಬೆಳೆ ಬೆಳೆದರೂ ಯಾವುದೇ ದಾಖಲೆಗಳಿಲ್ಲದ ಕಾರಣ ಬ್ಯಾಂಕಿನಿಂದ ಸಾಲ ಸೌಲಭ್ಯ, ಸರ್ಕಾರದ ಸವಲತ್ತುಗಳಿಂದಲೂ ವಂಚಿತರಾಗುತ್ತಿದ್ದಾರೆ ಎಂದು ವೈ.ಎಚ್.ಹುಚ್ಚಯ್ಯ ಹೇಳಿದರು.
ಬಲಾಢ್ಯರು ಬಡವರ ಜಮೀನುಗಳನ್ನು ಒತ್ತುವರಿ ವಾಡಿ ದೌರ್ಜನ್ಯದಿಂದ ಒಕ್ಕಲೆಬ್ಬಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದ್ದರಿಂದ ಈ ಹಿಂದೆ ಮಂಜೂರಾಗಿರುವ ಜಮೀನುಗಳಿಗೆ ಸಾಗುವಳಿ ಪತ್ರ ವಿತರಿಸಬೇಕು ಹಾಗೂ ಅರ್ಜಿ ಸಲ್ಲಿಸಿ ಕಾಯುತ್ತಿರುವವರಿಗೆ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ವರ್ಗದವರ ತೋಟಿ, ತಳವಾರ, ನೀರುಗಂಟಿ, ಇನಾಮ್ ಜಮೀನುಗಳು ಅವರ ಹೆಸರಿಗೆ ಮರು ಮಂಜೂರಾಗಿದ್ದರೂ ಅಲ್ಲದೆ, ಇವುಗಳನ್ನು ಕೊಳ್ಳುವುದು, ಮಾರುವುದು ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೆಲವರು ಕಾನೂನು ಬಾಹಿರವಾಗಿ ಪರಿಶಿಷ್ಟರ ಜಮೀನುಗಳನ್ನು ಖರೀದಿ ವಾಡಿ ಕಾನೂನು ಉಲ್ಲಂನೆ ವಾಡುತ್ತಿದ್ದಾರೆ. ಈ ಬಗ್ಗೆ ಇರುವ ಪಿಟಿಸಿಎಲ್ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಿದ್ದಾರೆ. ಜಿ.ಕೆ.ನಾಗಣ್ಣ, ಕುಣಿಗಲ್ ತಾಲೂಕು ಅಹಿಂದ ವರ್ಗಗಳ ಒಕ್ಕೂಟದ ದೊಡ್ಡಯ್ಯ, ಎಸ್.ಆರ್.ಚಿಕ್ಕಣ್ಣ, ಧನಂಜಯ್ಯ, ಗಂಗಮ್ಮ ಇದ್ದರು.