ಕುಖ್ಯಾತ ರೌಡಿ ಬಾಗಪ್ಪ ಹರಿಜನ ಭೀಕರ ಹತ್ಯೆ

Bagappa-harijana-horrific-murder
ವಿಜಯಪುರದ ಮದೀನಾ ನಗರದಲ್ಲಿ ಬಾಗಪ್ಪ ಹರಿಜನ ಹತ್ಯೆ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಪರಿಶೀಲಿಸುತ್ತಿರುವ ಪೊಲೀಸರು.
Published on

ವಿಜಯಪುರ: ಭೀಮಾತೀರದ ಹಂತಕ ಚಂದಪ್ಪ ಹರಿಜನನ ಸಹಚರ, ಕುಖ್ಯಾತ ರೌಡಿ ಬಾಗಪ್ಪ ಹರಿಜನ ಭೀಕರವಾಗಿ ಹತ್ಯೆಯಾಗಿದ್ದಾನೆ...!

ಇಲ್ಲಿನ ಆಕಾಶವಾಣಿ ಕೇಂದ್ರದ ಮುಂದಿನ ರಸ್ತೆಯಲ್ಲಿರುವ ಮದೀನಾ ನಗರದಲ್ಲಿ ಮಂಗಳವಾರ ರಾತ್ರಿ 9&30 ರಿಂದ 10 ಗಂಟೆ ಸುಮಾರಿಗೆ ಈ ಟನೆ ನಡೆದಿದ್ದು, ಬಾಗಪ್ಪ ರಕ್ತದ ಮಡುವಿನಲ್ಲಿ ಬಿದ್ದು ಅಸುನೀಗಿದ್ದಾನೆ. ಅರೆ ಬೆತ್ತಲೆಯಾಗಿ ಬಿದ್ದಿರುವ ಬಾಗಪ್ಪನ ಮುಖ ರಕ್ತಸಿಕ್ತವಾಗಿದ್ದು, ಗುರುತು ಸಿಗದಷ್ಟು ಭಯಾನಕವಾಗಿತ್ತು.

ಮದೀನಾ ನಗರದಲ್ಲಿ ಪರಿಚಯಸ್ತರೊಬ್ಬರ ಮನೆ ಇದ್ದು ಆಗಾಗ ಬರುತ್ತಿದ್ದ ಬಾಗಪ್ಪ ಹರಿಜನ ಅಲ್ಲಿಯೇ ರಾತ್ರಿ ಕಳೆಯುತ್ತಿದ್ದನೆಂದು ತಿಳಿದು ಬಂದಿದೆ. ಇದೀಗ ಆತನ ಇರುವಿಕೆಯನ್ನು ಅರಿತ ದುಷ್ಕರ್ಮಿಗಳು ಮಾರಕಾಸಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಟನೆಗೆ ಹಳೆಯ ವೈಷಮ್ಯವೇ ಕಾರಣ ಎನ್ನಲಾಗಿದೆ. ಟನೆ ಸುದ್ದಿ ತಿಳಿಯುತ್ತಿದ್ದಂತೆ ಎಸ್​ಪಿ ಲಕ್ಷ್ಮಣ ನಿಂಬರಗಿ, ಎಎಸ್​ಪಿ ಶಂಕರ ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ ಸೇರಿದಂತೆ ಪೊಲೀಸ್​ ಅಧಿಕಾರಿಗಳ ತಂಡ ದೌಡಾಯಿಸಿ ತಡರಾತ್ರಿವರೆಗೆ ಪರಿಶೀಲನೆ ನಡೆಸಿತು.

ಯಾರು ಈ ಬಾಗಪ್ಪ?:

ಭೀಮಾ ತೀರದ ಬಹುತೇಕ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಾಗಪ್ಪ ಹರಿಜನ ಮೂಲತ@ ಸಿಂದಗಿ ತಾಲೂಕಿನ ಬ್ಯಾಡಗಿಹಾಳ ಗ್ರಾಮದವನು. ಸುಮಾರು 10 ಕ್ಕೂ ಅಧಿಕ ಪ್ರಕರಣಗಳಲ್ಲಿ ಈತನ ಮೇಲೆ ಮೊಕದ್ದಮೆ ದಾಖಲಾಗಿದ್ದವು. ಒಟ್ಟು 6 ಕೊಲೆ ಪ್ರಕರಣ ಹಾಗೂ 4 ಇನ್ನಿತರ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದನು.

ಪ್ರಮುಖವಾಗಿ 2000ರಲ್ಲಿ ದಣ ಸೊಲ್ಲಾಪುರದ ದೋತ್ರೆ ಗ್ರಾಮದಲ್ಲಿ ಚಂದಪ್ಪ ಹರಿಜನ ಮೇಲೆ ಪೊಲೀಸರು ಎನ್​ಕೌಂಟರ್​ ನಡೆಸಿದ ಸಂದರ್ಭ ಪೊಲೀಸರ ಮೇಲೆ ಗುಂಡು ಹಾರಿಸಿದ ಬಾಗಪ್ಪ ಬಳಿಕ ವಿವಿಧ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

1997ರಲ್ಲಿ ಚಡಚಣದಲ್ಲಿ ನಡೆದ ಕೊಲೆ ಪ್ರಕರಣ, 1997-98ರಲ್ಲಿ ಆಳಂದ ಪೊಲೀಸ್​ ಠಾಣೆಯಲ್ಲಿ ನಡೆದ 2 ಕೊಲೆ ಹಾಗೂ ಅಪಹರಣ, 1998ರಲ್ಲಿ ಸಿಂದಗಿ ಠಾಣೆ ವ್ಯಾಪ್ತಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ, 1999ರಲ್ಲಿ ಆಲಮೇಲ ಠಾಣೆ ವ್ಯಾಪ್ತಿಯಲ್ಲೊಂದು ಕೊಲೆ, 2001ರಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾ ಹೇಳಲು ಹೊರಟಿದ್ದ ವ್ಯಕ್ತಿ ಮೇಲೆ ಗುಂಡು ಹಾರಿಸಿ ಬಾಗಪ್ಪ ಸುದ್ದಿಯಾಗಿದ್ದ. ಅದೂ ಬಸ್​ನ ಟಾಪ್​ ಮೇಲೇರಿ ವ್ಯಕ್ತಿಯ ಕೊಲೆಗೈದು ಪರಾರಿಯಾಗಿದ್ದ. 2003ರಲ್ಲಿ ಅ್ಜಲ್​ಪುರ ತಾಲೂಕಿನ ಶಿರೋಳದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದಲ್ಲಿ ಈತನೂ ಭಾಗಿಯಾಗಿದ್ದ. ಈ ಎಲ್ಲ ಪ್ರಕರಣಗಳೊಂದಿಗೆ ಈಚೆಗೆ ನಡೆದ ಕೆಲವು ಕೊಲೆ ಹಾಗೂ ಕೊಲೆ ಯತ್ನ ಆರೋಪ ಕೂಡ ಬಾಗಪ್ಪ ಎದುರಿಸುತ್ತಿದ್ದಾನೆ. 2013-14ರಲ್ಲಿ ಆಲಮೇಲ ಬಳಿ ಇನ್ನೊಬ್ಬ ಹಂತಕ ಬಸವರಾಜ ಹರಿಜನ ಕೊಲೆಗೈದಿದ್ದನು.

ಆಟೋದಲ್ಲಿ ಬಂದಿದ್ದ ನಾಲ್ಕೆ$ದು ದುಷ್ಕರ್ಮಿಗಳಿಂದ ಬಾಗಪ್ಪನ ಕೊಲೆಯಾಗಿದೆ. ವಿಜಯಪುರ ನಗರದ ಮದೀನಾ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬಾಗಪ್ಪ ಊಟ ಮಾಡಿ ಮನೆ ಎದುರು ವಾಕಿಂಗ್​ ಮಾಡುತ್ತಿದ್ದಾಗ ಹಂತಕರು ಮಾರಕಾಸ್ತ್ರ, ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆಮಾಡಿದ್ದಾರೆ. ಆತನ ಮೇಲೆ ಹತ್ತು ಕೇಸ್​ಗಳಿವೆ. ಈ ಪೈಕಿ ಆರು ಮರ್ಡರ್​ ಕೇಸ್​ಗಳಿವೆ. 1993 ರಿಂದ ಬಾಗಪ್ಪನ ಕ್ರಿಮಿನಲ್​ ಹಿಸ್ಟರಿ ಶುರುವಾಗಿದೆ. 2016&17ರಲ್ಲಿ ಬಾಗಪ್ಪನ ಮೇಲೆ ಸೆಕ್ಯೂರಿಟಿ ಕೇಸ್​ ಹಾಕಲಾಗಿತ್ತು. ಎಲ್ಲ ಆಯಾಮಗಳಲ್ಲಿಯೂ ಕಾರ್ಯಾಚರಣೆ ನಡೆಯುತ್ತಿದೆ. ಹಂತಕರ ಬಂಧನಕ್ಕೆ ಜಿಲ್ಲಾ ಪೊಲೀಸರ ತಂಡವಾಗಿ ಕೆಲಸ ಮಾಡುತ್ತಿದೆ. > ಲಕ್ಷ್ಮಣ ನಿಂಬರಗಿ ಎಸ್​ಪಿ, ವಿಜಯಪುರ

ಕೋರ್ಟ್​ ಆವರಣದಲ್ಲಿ ನಡೆದಿತ್ತು ಗುಂಡಿನ ದಾಳಿ :

2013 ಜನವರಿ 2 ರಂದು ಸಿಂದಗಿ ತಾಲೂಕಿನ ಬೊಮ್ಮನಹಳ್ಳಿಯ ಅಂಬೇಡ್ಕರ್​ ವೃತ್ತದಲ್ಲಿ 7.20ರ ಸುಮಾರಿಗೆ ರ್ಷಣೆಯಾಗಿತ್ತು. ಬೈಕ್​ ಮೇಲೆ ಬಂದ ಹಂತಕರು ಬಸವರಾಜನ ಮೇಲೆ 9 ಸುತ್ತು ಗುಂಡು ಹಾರಿಸಿ ತಲ್ವಾರ್​ನಿಂದ ತಲೆ ಕತ್ತರಿಸಿ ಪರಾರಿಯಾಗಿದ್ದರು.

ಆ ಕೇಸಿನ ಮೇಲೆ ಬಾಗಪ್ಪ ವಿಚಾರಣೆಗೆ ಹಾಜರಾಗುತ್ತಿದ್ದ. ಹೀಗೆ ವಿಚಾರಣೆಗೆ ಬಂದಾಗಲೇ 2017ರ ಆ.8 ರಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿಯೇ ಬಾಗಪ್ಪ ಹರಿಜನನ ಮೇಲೆ ಗುಂಡಿನ ದಾಳಿ ನಡೆದಿತ್ತು.

ಸ್ಕಾರ್ಪಿಯೋ ವಾಹನದಲ್ಲಿ ಕೋರ್ಟ್​ ಆವರಣಕ್ಕೆ ಬಂದಿದ್ದ ಬಾಗಪ್ಪ ವಾಹನ ನಿಲ್ಲಿಸಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿ ಹಿಂದಿನಿಂದ ಕೂಗಿ ಗಮನ ಸೆಳೆದಿದ್ದಲ್ಲದೇ ಬಾಗಪ್ಪ ತಿರುಗಿ ನೋಡುತ್ತಿದ್ದಂತೆ ಗುಂಡಿನ ಸುರಿಮಳೆಗೈಯ್ಯಲಾಗಿತ್ತು.

ಒಟ್ಟು ಐದು ಸುತ್ತು ಗುಂಡು ಹಾರಿಸಲಾಗಿದ್ದು, ಐದೂ ಗುಂಡು ದೇಹ ಹೊಕ್ಕಿದ್ದವು. ಎರಡು ಗುಂಡು ಹೊಟ್ಟೆಗೆ, ಒಂದು ಎದೆ, ಪಕ್ಕೆಲುಬು ಹಾಗೂ ಇನ್ನೊಂದು ಕಿಬ್ಬೊಟ್ಟೆಗೆ ತಾಗಿ ಬಲವಾದ ಗಾಯ ಮಾಡಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಬಾಗಪ್ಪನನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಿಎಲ್​ಡಿಇಗೆ ರವಾನಿಸಿ ಅಲ್ಲಿಂದ ಹೈದ್ರಾಬಾದ್​ಗೆ ಕಳುಹಿಸಲಾಗಿತ್ತು.

ವಿಚಿತ್ರವೆಂದರೆ ಇದೇ ಬಾಗಪ್ಪ ಹರಿಜನ 2001ರಲ್ಲಿ ತನ್ನ ವಿರುದ್ಧ ಸಾ ಹೇಳಲು ಬಂದ ವ್ಯಕ್ತಿ ಮೇಲೆ ಅದೇ ನ್ಯಾಯಾಲಯದ ಆವರಣದಲ್ಲೇ ಗುಂಡು ಹಾರಿಸಿದ್ದ.

ಚಂದಪ್ಪ ಹರಿಜನ ಹಾಗೂ ಭಾಗಪ್ಪ ಹರಿಜನ ಇಬ್ಬರೂ ಕೂಡಿಕೊಂಡು ಸುಮಾರು ತಲೆಗಳನ್ನು ತೆಗೆದಿದ್ದಾರಲ್ಲದೇ ಆಸ್ತಿಯನ್ನೂ ಮಾಡಿದ್ದಾರೆ ಅಲ್ಲದೇ, ಚಂದಪ್ಪನ ಸಾವಿನ ನಂತರ ಆಸ್ತಿ ಹಂಚಿಕೆಗಾಗಿಯೇ ಬಸವರಾಜ ಹಾಗೂ ಬಾಗಪ್ಪನ ನಡುವೆ ಕಲಹ ಉಂಟಾಗುತ್ತಿತ್ತೆಂಬ ಸುದ್ದಿ ಭೀಮಾತೀರದುದ್ದಕ್ಕೂ ಸದ್ದು ಮಾಡುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net