ಸ್ವಾವಲಂಬಿಗಳಾಗಿ ಆರ್ಥಿಕ ಅಭಿವೃದ್ಧಿ ಸಾಧಿಸಿ

Achieve economic development by becoming self-reliant
ಬಾಗಲಕೋಟೆ ನಗರದ ಬಿವಿವಿ ಸಂಘದ ಜನ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಟೇಲರಿಂಗ್ ತರಬೇತಿಗೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಸದಸ್ಯರಾದ ಎಸ್.ಕೆ.ಶಾಬಾದಿ, ಎಸ್.ಆರ್.ಮನಹಳ್ಳಿ, ಬಿ.ಎಸ್.ಅಂಗಡಿ, ವೀರಣ್ಣ ಕಿರಗಿ, ಶರಣಬಸವ ಹುನ್ನೂರ, ನಾಗರತ್ನಾ ಟಿ.ಎಂ. ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಆರ್ಥಿಕ ಸ್ವಾವಲಂಬಿಯಾಗಲು ತರಬೇತಿ ಅಗತ್ಯ. ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಜನ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಟೇಲರಿಂಗ್ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ 18 ವಿವಿಧ ವೃತ್ತಿಗಳು ಬರುತ್ತವೆ. ಮಹಿಳೆಯರು ಈ ಟೇಲರಿಂಗ್ ತರಬೇತಿಯನ್ನು ಪಡೆದು ಸರ್ಕಾರಿ ಸಾಲ ಸೌಲಭ್ಯದೊಂದಿಗೆ ಸ್ವಂತ ಉದ್ಯೋಗ ಆರಂಭಿಸಿ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿದರು. ಸಂಘದ ಸದಸ್ಯರಾದ ಎಸ್.ಕೆ.ಶಾಬಾದಿ, ಎಸ್.ಆರ್.ಮನಹಳ್ಳಿ, ಬಿ.ಎಸ್.ಅಂಗಡಿ, ವೀರಣ್ಣ ಕಿರಗಿ, ಶರಣಬಸವ ಹುನ್ನೂರ, ನಾಗರತ್ನಾ ಟಿ.ಎಂ ಉಪಸ್ಥಿತರಿದ್ದರು. ಬಿ.ಕೆ.ಕೋರಿ ನಿರೂಪಿಸಿದರು. ಎ.ಎಸ್.ಗೌಡರ ಸ್ವಾಗತಿಸಿದರು. ಎಸ್.ಜಿ.ಕಬ್ಬಿಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net