ಬಾಗಲಕೋಟೆ ಜಿಲ್ಲೆಗೆ ಬೆಳ್ಳಿ ಸಂಭ್ರಮ - 48 ಪುಟಗಳ ವಿಶೇಷ ಪುರವಣಿ ಬಿಡುಗಡೆ

# BKT LOGO (( Bagalkot 25 Year Logo
Published on

ಬಾಗಲಕೋಟೆ: ಅಖಂಡ ವಿಜಯಪುರದಿಂದ ಬಾಗಲಕೋಟೆ ಜಿಲ್ಲೆಯಾಗಿ ಪರಿವರ್ತನೆಗೊಂಡು 25 ವರ್ಷಗಳು ಪೂರ್ಣಗೊಂಡ ಹಿನ್ನೆಲೆ ವಿಜಯವಾಣಿ-ದಿಗ್ವಿಜಯ ಸುದ್ದಿ ಮಾಧ್ಯಮ ಹಾಗೂ ಕನ್ನಡ ಸಾಹಿತ್ಯ ಪರಿಷತ್, ಬಾಗಲಕೋಟೆ ಸಹಯೋಗದಲ್ಲಿ ‘ಬಾಗಲಕೋಟೆ ಜಿಲ್ಲೆಗೆ ಬೆಳ್ಳಿ ಸಂಭ್ರಮ’ ಕಾರ್ಯಕ್ರಮವನ್ನು ಸೆ. 22ರಂದು (ಗುರುವಾರ) ಬೆಳಗ್ಗೆ 10-30 ಗಂಟೆಗೆ ನವನಗರದ ಕಲಾ ಭವನದ ಆವರಣದಲ್ಲಿರುವ ಕಸಾಪ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

‘ಬಾಗಲಕೋಟೆ ಅಂದು-ಇಂದು’ ವಿಷಯವಾಗಿ ಆಹ್ವಾನಿತ ಗಣ್ಯರು ಮಾತನಾಡಲಿದ್ದಾರೆ. ಜೊತೆಗೆ ವಿಜಯವಾಣಿ ಹೊರತಂದಿರುವ ಬಾಗಲಕೋಟೆಃ25 ವಿಶೇಷ ಪುರವಣಿಯನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ಸಿಇಒ ಟಿ. ಭೂಬಾಲನ್, ಎಸ್ಪಿ ಜಯಪ್ರಕಾಶ ಹಕ್ಕರಕಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಉದ್ಯಮಿ ಸಂಗಮೇಶ ನಿರಾಣಿ, ಹಿರಿಯ ಪತ್ರಕರ್ತರಾದ ರಾಮ ಮನಗೂಳಿ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ವಿಜಯವಾಣಿ-ದಿಗ್ವಿಜಯ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ, ಇತರೆ ಗಣ್ಯರು ಆಗಮಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net