7ನೇ ಇಂಡೋ-ನೇಪಾಳ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಬೇಟೆಯಾಡಿದ ಬಾಗಲಕೋಟೆ ಬ್ರದರ್ಸ್

sahodararu
7ನೇ ಇಂಡೋ-ನೇಪಾಳ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಬೇಟೆಯಾಡಿದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತೋಗುಣಸಿ ಗ್ರಾಮದ ಬ್ರದರ್ಸ್ ಯುವರಾಜ ಗಾಣಿಗೇರ, ನಾಗರಾಜ್​ ಗಾಣಿಗೇರ.
Published on

ಬಾಗಲಕೋಟೆ : ನೇಪಾಳದ ಪೊಖ್ರಾ ರಂಗಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 7ನೇ ಇಂಡೋ-ನೇಪಾಳ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಬಾಗಲಕೋಟೆಯ ನಾಗರಾಜ್ ಮತ್ತು ಯುವರಾಜ್ ಗಾಣಿಗೇರ ಸಹೋದರರು 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ತೋಗುಣಿಸಿ ಗ್ರಾಮದವರಾದ ಸಹೋದರರಲ್ಲಿ ನಾಗರಾಜ ಗಾಣಿಗೇರ 23 ವರ್ಷದೊಳಗಿನ ವಿಭಾಗದಲ್ಲಿ 4 ನಿಮಿಷ 34 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದರೇ, ಯುವರಾಜ 17 ವರ್ಷದೊಳಗಿನ ವಿಭಾಗದಲ್ಲಿ 4ನಿಮಿಷ 32 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕದ ಬೇಟೆಯಾಡಿದ್ದಾರೆ.

ನನ್ನ ಕ್ಷೇತ್ರದ ಇಬ್ಬರು ಕ್ರೀಡಾಪಟುಗಳು ಜಾಗತಿಕ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕ್ರೀಡಾ ಬದುಕಿನಲ್ಲಿ ಇನ್ನಷ್ಟು ದೊಡ್ಡ ಸಾಧನೆಗಳು ಕೈಗೂಡಲಿ. ನಿಮ್ಮ ಸಾಧನೆ ನಾಡಿನ ಗ್ರಾಮೀಣ ಪ್ರತಿಭೆಗಳಿಗೆ ಪ್ರೇರಣೆಯಾಗಲಿ. ಸಿದ್ದರಾಮಯ್ಯ ಮಾಜಿ ಸಿಎಂ, ಬಾದಾಮಿ ಮತಕ್ಷೇತ್ರದ ಶಾಸಕ, (ಫೇಸ್‌ಬುಕ್‌ನಲ್ಲಿ ಶುಭ ಹಾರೈಸಿದ್ದಾರೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net