ಹೂಗಾರ ಸಮಾಜಕ್ಕೆ ಮಾದಯ್ಯನವರ ಕೊಡುಗೆ ಅನನ್ಯ

ಡಾ. ಚಂದ್ರಶೇಖರ ಸ್ವಾಮೀಜಿ ಅಭಿಮತ ಲೋಕಾಪುರದಲ್ಲಿ ಗಮನ ಸೆಳೆದ ಕುಂಭಮೇಳ ಮೆರವಣಿಗೆ
ಲೋಕಾಪುರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮೀಜಿ ಚಾಲನೆ ನೀಡಿದರು. ಹಿರೇಮಠದ ಡಾ. ಚಂದ್ರಶೇಖರ ಸ್ವಾಮೀಜಿ, ನಿಂಗಯ್ಯ ಅಪ್ಪಯ್ಯನವರಮಠ ಸ್ವಾಮೀಜಿ, ಪಿಎಸ್‌ಐ ನಿಖಿಲ್‌ಕಾಂಬಳೆ, ಪ್ರವೀಣ ತಿಮ್ಮಣ್ಣ ಪೂಜಾರಿ, ಶ್ರೀಶೈಲ ಗುರವ, ಹನುಮಂತ ಗುರವ,  ಸಿದ್ದು ಹೂಗಾರ  ಇತರರಿದ್ದರು.

Published on: 

ಲೋಕಾಪುರ: ಶಿವಶರಣ ಹೂಗಾರ ಮಾದಯ್ಯನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜ್ಞಾನದ ಪರಿಮಳವನ್ನು ಬೀರಿದ್ದಾರೆ ಎಂದು ಹಿರೇಮಠದ ಡಾ.ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ ಹೂಗಾರ, ಜೀರ, ಗುರವ, ಪೂಜಾರ ಹಾಗೂ ು ಸಮಾಜ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡ 12ನೇ ಶತಮಾನದ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಶಿವಶರಣ ಹೂಗಾರ ಮಾದಯ್ಯನವರು ಹೂಗಾರ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು, ಹೂಗಾರ ಸಮಾಜ ಭಾಂಧವರು ಅವರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಹನುಮಂತ ಭೀಮಪ್ಪ ಹೂಗಾರ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಯುವಕರು ಒಗ್ಗಟ್ಟಿನಿಂದ ಹೂಗಾರ ಸಮಾಜ ಸಂಘಟನೆಗೆ ಕೈ ಜೋಡಿಸಬೇಕು. ಯವಕರು ಸಮಾಜಮುಖಿಯಾಗಿ ಒಳ್ಳೆಯ ಕಾರ್ಯದಲ್ಲಿ ತೊಡಗಿ ಆದರ್ಶ ವ್ಯಕ್ತಿಗಳಾಗಬೇಕು. ಕಾಯಕ ತತ್ವದ ಮೂಲಕ ಬಸವಣ್ಣವರ ಮನಸ್ಸು ಗೆದ್ದ ಹೂಗಾರ ಮಾದಯ್ಯನವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮೀಜಿ, ಬೆಳಗಲಿಯ ಮಹಾಲಿಂಗ ಶಾಸೀಗಳು ಹಾಗೂ ನಿಂಗಯ್ಯ ಅಪ್ಪಯ್ಯನವರಮಠ ಸ್ವಾಮೀಜಿ ಆಶೀರ್ವಚನ ನೀಡಿದರು. ಪಿಎಸ್‌ಐ ನಿಖೀಲ್ ಕಾಂಬಳೆ, ಹೂಗಾರ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ ತಿಮ್ಮಣ್ಣ ಪೂಜಾರಿ, ಹೂಗಾರ ಸಮಾಜ ತಾಲೂಕು ಅಧ್ಯಕ್ಷ ಶ್ರೀಶೈಲ ಗುರವ, ಹನುಮಂತ ಗುರವ, ಸಿದ್ದು ಹೂಗಾರ ಇತರರಿದ್ದರು.

ಭಾವಚಿತ್ರ ಅದ್ದೂರಿ ಮರೆವಣಿಗೆ: ಲೋಕಾಪುರ ಪಟ್ಟಣದಲ್ಲಿ ಶಿವಶರಣ ಹೂಗಾರ ಮಾದಯ್ಯನವರ ಭಾವಚಿತ್ರ ಮರೆವಣಿಗೆ ಅದ್ದೂರಿಯಿಂದ ವಿವಿಧ ವಾದ್ಯ ಮೇಳ, ಮಹಿಳೆಯರ ಕುಭಮೇಳದೊಂದಿಗೆ ಪಟ್ಟಣದ ಹೂಗಾರ ಓಣಿಯಿಂದ ಆರಂಭಗೊಂಡು ದೇಸಾಯಿಯವರ ವಾಡೆ, ಬಸವೇಶ್ವರ ವೃತ್ತ, ಮೇನ ಬಜಾರ ಮಾರ್ಗವಾಗಿ ರಾಘವೇಂದ್ರ ಕಲ್ಯಾಣ ಮಂಟಪಕ್ಕೆ ತಲುಪಿತು.

ಲೋಕಾಪುರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವದ ಅಂಗವಾಗಿ ಮಹಿಳೆಯರ ಕುಂಭಮೇಳ ಮೆರವಣಿಗೆ.
ಲೋಕಾಪುರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವದ ಅಂಗವಾಗಿ ಮಹಿಳೆಯರ ಕುಂಭಮೇಳ ಮೆರವಣಿಗೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net