ಹಸಿದವರಿಗೆ ಅನ್ನ ನೀಡುವುದೆ ಶ್ರೇಷ್ಠ ಸೇವೆ

ಚಲನಚಿತ್ರ ನಟ ಪ್ರವೀಣ ಹುಲಗಬಾಳಿ ಅಭಿಮತ
ರಬಕವಿ: ದಾಸೋಹ ಸೇವೆಯಲ್ಲಿ ಶ್ರೀಮಂತ-ಬಡವ, ಮೇಲು-ಕೀಳು, ಜಾತಿ-ಧರ್ಮ ಎಂಬ ಯಾವುದೇ ಭೇದ ಭಾವ ಇರಬಾರದು. ಎಲ್ಲರೂ ಒಂದೇ ಸಾಲಿನಲ್ಲಿ ಕುಳಿತು ಪ್ರೀತಿಯಿಂದ ಅನ್ನ ಸ್ವೀಕರಿಸುವುದೇ ಸಮಾನತೆ ಮತ್ತು ಮಾನವೀಯತೆಯ ನಿಜವಾದ ಸಂಕೇತ ಎಂದು ಚಲನಚಿತ್ರ ನಟ ಪ್ರವೀಣ ಹುಲಗಬಾಳಿ ಹೇಳಿದರು.

 ನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ದೀಪಾವಳಿ ಅಂಗವಾಗಿ ದೇವಸ್ಥಾನದ ಟ್ರಸ್ಟ್ ಕಮಿಟಿ ಹಾಗೂ ಶ್ರೀ ಡಿ.ಕೆ. ಕೊಟ್ರಶೆಟ್ಟಿ ೌಂಡೇಷನ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಅನ್ನ ದಾಸೋಹ ಸೇವೆಯಲ್ಲಿ ಭಾಗವಹಿಸಿ,  ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

 ಅನ್ನದಾಸೋಹದಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆ ಮತ್ತು ಪ್ರೀತಿಯಿಂದ ಬಡಿಸುವುದಷ್ಟೇ ಅಲ್ಲದೆ, ಅನ್ನ ಸ್ವೀಕರಿಸುವವರ ಗೌರವವನ್ನೂ ಕಾಪಾಡಬೇಕು. ಪ್ರಚಾರದ ಉದ್ದೇಶಕ್ಕಿಂತ ಪರೋಪಕಾರದ ಮನೋಭಾವದಿಂದ ಮಾಡುವ ಸೇವೆ ಹೆಚ್ಚು ಶಾಶ್ವತ. ಹಸಿದವರಿಗೆ ಅನ್ನ ನೀಡುವುದು ಅತ್ಯಂತ ಶ್ರೇಷ್ಠ ಸೇವೆಯಾಗಿದೆ ಎಂದರು.

 ಹರಿಯಾಣ ಕೇಂದ್ರಿಯ ವಿಶ್ವವಿದ್ಯಾಲಯದ ಗ್ರಂಥಪಾಲಕ ಸಂತೋಷ ಹುಲಗಬಾಳಿ ಮಾತನಾಡಿ, ಹಣ, ಆಸ್ತಿ, ಅಧಿಕಾರ ಮತ್ತು ಅಂತಸ್ತು ತಾತ್ಕಾಲಿಕವಾದರೂ ಹಸಿದವರಿಗೆ ಅನ್ನ ನೀಡುವುದರಿಂದ ಸಿಗುವ ಆತ್ಮತಪ್ತಿ ಶಾಶ್ವತವಾದದ್ದು. ದಾನವೆಂದರೆ ಕೇವಲ ಹಣ ನೀಡುವುದಲ್ಲ. ಮಾನವೀಯತೆಯನ್ನು ಹಂಚಿಕೊಳ್ಳುವುದಾಗಿದೆ. ಯಾವುದೇ ಪ್ರತಿಲದ ನಿರೀಕ್ಷೆಯಿಲ್ಲದೆ ಹಸಿದವರ ಹೊಟ್ಟೆ ತುಂಬಿಸುವುದೇ ನಿಜವಾದ ದಾಸೋಹ ಎಂದು ಹೇಳಿದರು.

 ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶಿವಜಾತ ಉಮದಿ, ಡಿ.ಕೆ. ಕೊಟ್ರಶೆಟ್ಟಿ ೌಂಡೇಷನ್ ಅಧ್ಯಕ್ಷ ಸೋಮಶೇಖರ ಕೊಟ್ರಶೆಟ್ಟಿ, ಗೌತಮ ಕೊಟ್ರಶೆಟ್ಟಿ, ಮಾಧುರಿ ಕೊಟ್ರಶೆಟ್ಟಿ, ರೇವಣ್ಣ ಉಮದಿ, ಸಚಿನ ಉಮದಿ, ಬಸವರಾಜ ದಲಾಲ, ಡಾ. ಜಿ.ಎಚ್. ಚಿತ್ತರಗಿ, ಶಿವಾನಂದ ದಾಶ್ಯಾಳ, ಮಹಾದೇವ ನಂದಯ್ಯಗೋಳ, ಚಂದ್ರಶೇಖರ ಹುಲಗಬಾಳಿ, ಮಲ್ಲಿಕಾರ್ಜುನ ಗಡೆನ್ನವರ, ವಿಜಯಕುಮಾರ ಹಲಕುರ್ಕಿ ಹಾಗೂ ಸಂಗಮೇಶ ಗುಣಕಿ ಉಪಸ್ಥಿತರಿದ್ದರು.
ರಬಕವಿಯ ದಾನಮ್ಮದೇವಿ ದೇವಸ್ಥಾನದಲ್ಲಿ ದೀಪಾವಳಿ ಅಂಗವಾಗಿ ಆಯೋಜಿಸಿದ್ದ ಅನ್ನದಾಸೋಹ ಸೇವೆಯಲ್ಲಿ ಚಲನಚಿತ್ರ ನಟ ಪ್ರವೀಣ ಹುಲಗಬಾಳಿ ಅವರನ್ನು ಸನ್ಮಾನಿಸಲಾಯಿತು. ಸಂತೋಷ ಹುಲಗಬಾಳಿ, ಶಿವಜಾತ ಉಮದಿ ಹಾಗೂ ಸೋಮಶೇಖರ ಕೊಟ್ರಶೆಟ್ಟಿ ಇದ್ದರು.
Published on: 