ಹಕ್ಕು ಪಡೆಯಲು ಹೋರಾಟ ಅಗತ್ಯ

ಕಾರ್ಯಧ್ಯಕ್ಷ ಸಾಯಬಣ್ಣಾ ಮಡಿವಾಳರ ಹೇಳಿಕೆ * ಮಡಿವಾಳ ಸಮಾಜದ ಪೂರ್ವಭಾವಿ ಸಭೆ
ಬೀಳಗಿ: ಕೇವಲ ಕುಲಕಸುಬಿಗೆ ಸೀಮಿತವಾಗದೆ ಸಮಾಜ ಬಾಂಧವರು ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಉತ್ತರ ಕರ್ನಾಟಕದ ಮಡಿವಾಳ ಸಮಾಜದ ಕಾರ್ಯಧ್ಯಕ್ಷ ಸಾಯಬಣ್ಣಾ ಮಡಿವಾಳರ ಹೇಳಿದರು.

 ಪಟ್ಟಣದ ಕಾಳಿಕಾಕಮಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಡಿವಾಳ ಸಮಾಜದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಡಿವಾಳ ಸಮಾಜ ಸಾಮಾಜಿಕ ಆರ್ಥಿಕ ಶೈಕ್ಷಣಿಕ ರಾಜಕೀಯವಾಗಿ ಬಹಳ ಹಿಂದುಳಿದಿದ್ದು, ಇಂದಿನ ದಿನಮಾನಗಳಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

  ಹಲವಾರು ಹೋರಾಟಗಳನ್ನು ಮಾಡಿದ್ದು ಸರ್ಕಾರಗಳು ತಮ್ಮ ಗಮನಕ್ಕೆ ಹರಿಸುತ್ತಿಲ್ಲ. ಆದ್ದರಿಂದ ನಾವೆಲ್ಲರೂ ಕೂಡ ಒಂದಾಗಿ ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತೆದೆ. ರಾಜ್ಯದ ತುಂಬಾ ಯುವ ಮತ್ತು ಮಹಿಳಾ ಸಂಘಟನೆ ಮಾಡಬೇಕಾಗಿದೆ. ನಂತರ ಮುಂದಿನ ದಿನಗಳಲ್ಲಿ ಜಿಲ್ಲಾ ಸಮಾವೇಶ ಮಾಡಲಾಗುತ್ತದೆ ಎಂದರು.

 ರಾಜ್ಯ ಉಪಾಧ್ಯಕ್ಷ ದುರ್ಗೇಶ ಮಡಿವಾಳರ ಮಾತನಾಡಿ, ಮಡಿವಾಳ ಸಮಾಜದ ಅಭಿವೃದ್ಧಿಗೆ ಮತ್ತು ಹಕ್ಕುಗಳ ಹೋರಾಟಕ್ಕೆ ಯುವಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

 ಮಹಿಳಾ ಜಿಲ್ಲಾಧ್ಯಕ್ಷ  ರಾಜೇಶ್ವರಿ ಮಡಿವಾಳರ ಹಾಗೂ ತಾಲೂಕುಧ್ಯಕ್ಷ ಹನುಮಂತ ಮಡಿವಾಳರ, ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷರಾದ ಬಸವರಾಜ ಮಡಿವಾಳರ, ಮುಧೋಳ ತಾಲೂಕ ಮಹಿಳಾ ಅಧ್ಯಕ್ಷ ಮಂಜುಳಾ ಪರೀಟ, ತಾಲೂಕು ಮಹಿಳಾ ಅಧ್ಯಕ್ಷ ಸುಧಾ ಮಡಿವಾಳರ, ಕಾರ್ಯದರ್ಶಿ ಅನುಷಾ ಮಡಿವಾಳರ, ನಗರ ಘಟಕ ಅಧ್ಯಕ್ಷ ಸಂಗಮೇಶ ಮಡಿವಾಳರ ಇದ್ದರು.
ಬೀಳಗಿ ಪಟ್ಟಣದ ಕಾಳಿಕಾಕಮಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಸಮಾಜದ ಪೂರ್ವಭಾವಿ ಸಭೆಯಲ್ಲಿ ಮಡಿವಾಳ ಸಮಾಜದ ರಾಜ್ಯ ಕಾರ್ಯಧ್ಯಕ್ಷ ಸಾಯಬಣ್ಣಾ ಮಡಿವಾಳರ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ದುರ್ಗೇಶ ಮಡಿವಾಳರ, ಮಹಿಳಾ ಜಿಲ್ಲಾಧ್ಯಕ್ಷ ರಾಜೇಶ್ವರಿ ಮಡಿವಾಳರ ಹಾಗೂ ತಾಲೂಕಾಧ್ಯಕ್ಷ ಹನುಮಂತ ಮಡಿವಾಳರ, ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷರಾದ ಬಸವರಾಜ ಮಡಿವಾಳರ, ಮುಧೋಳ ತಾಲೂಕು ಮಹಿಳಾ ಅಧ್ಯಕ್ಷ ಮಂಜುಳಾ ಪರೀಟ ಇದ್ದರು.
Published on: 

ಬೀಳಗಿ: ಕೇವಲ ಕುಲಕಸುಬಿಗೆ ಸೀಮಿತವಾಗದೆ ಸಮಾಜ ಬಾಂಧವರು ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಉತ್ತರ ಕರ್ನಾಟಕದ ಮಡಿವಾಳ ಸಮಾಜದ ಕಾರ್ಯಧ್ಯಕ್ಷ ಸಾಯಬಣ್ಣಾ ಮಡಿವಾಳರ ಹೇಳಿದರು.

ಪಟ್ಟಣದ ಕಾಳಿಕಾಕಮಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಡಿವಾಳ ಸಮಾಜದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಡಿವಾಳ ಸಮಾಜ ಸಾಮಾಜಿಕ ಆರ್ಥಿಕ ಶೈಕ್ಷಣಿಕ ರಾಜಕೀಯವಾಗಿ ಬಹಳ ಹಿಂದುಳಿದಿದ್ದು, ಇಂದಿನ ದಿನಮಾನಗಳಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಹಲವಾರು ಹೋರಾಟಗಳನ್ನು ಮಾಡಿದ್ದು ಸರ್ಕಾರಗಳು ತಮ್ಮ ಗಮನಕ್ಕೆ ಹರಿಸುತ್ತಿಲ್ಲ. ಆದ್ದರಿಂದ ನಾವೆಲ್ಲರೂ ಕೂಡ ಒಂದಾಗಿ ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತೆದೆ. ರಾಜ್ಯದ ತುಂಬಾ ಯುವ ಮತ್ತು ಮಹಿಳಾ ಸಂಘಟನೆ ಮಾಡಬೇಕಾಗಿದೆ. ನಂತರ ಮುಂದಿನ ದಿನಗಳಲ್ಲಿ ಜಿಲ್ಲಾ ಸಮಾವೇಶ ಮಾಡಲಾಗುತ್ತದೆ ಎಂದರು.

ರಾಜ್ಯ ಉಪಾಧ್ಯಕ್ಷ ದುರ್ಗೇಶ ಮಡಿವಾಳರ ಮಾತನಾಡಿ, ಮಡಿವಾಳ ಸಮಾಜದ ಅಭಿವೃದ್ಧಿಗೆ ಮತ್ತು ಹಕ್ಕುಗಳ ಹೋರಾಟಕ್ಕೆ ಯುವಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಮಹಿಳಾ ಜಿಲ್ಲಾಧ್ಯಕ್ಷ ರಾಜೇಶ್ವರಿ ಮಡಿವಾಳರ ಹಾಗೂ ತಾಲೂಕುಧ್ಯಕ್ಷ ಹನುಮಂತ ಮಡಿವಾಳರ, ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷರಾದ ಬಸವರಾಜ ಮಡಿವಾಳರ, ಮುಧೋಳ ತಾಲೂಕ ಮಹಿಳಾ ಅಧ್ಯಕ್ಷ ಮಂಜುಳಾ ಪರೀಟ, ತಾಲೂಕು ಮಹಿಳಾ ಅಧ್ಯಕ್ಷ ಸುಧಾ ಮಡಿವಾಳರ, ಕಾರ್ಯದರ್ಶಿ ಅನುಷಾ ಮಡಿವಾಳರ, ನಗರ ಘಟಕ ಅಧ್ಯಕ್ಷ ಸಂಗಮೇಶ ಮಡಿವಾಳರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net