ಸೆ.29ರಿಂದ ಬನಹಟ್ಟಿಯಲ್ಲಿ ಕಾಡಸಿದ್ಧೇಶ್ವರ ಜಾತ್ರೆ

ಮಂಗಳವಾರ ಪೇಟೆಯ ದೈವ ಮಂಡಳಿಯ ಕಾರ್ಯಾಧ್ಯಕ್ಷ ಶ್ರೀಶೈಲ ಧಬಾಡಿ ಮಾಹಿತಿ
ರಬಕವಿ/ಬನಹಟ್ಟಿ: ಬೆಡಗಿನ ವಚನಕಾರ ಶ್ರೀ ಕಾಡಸಿದ್ಧೇಶ್ವರರ ಜಾತ್ರೆ ಸೆ.29ರಿಂದ ಅ.1 ರವರೆಗೆ ನಡೆಯಲಿದೆ ಎಂದು ಮಂಗಳವಾರ ಪೇಟೆಯ ದೈವ ಮಂಡಳಿಯ ಕಾರ್ಯಾಧ್ಯಕ್ಷ ಶ್ರೀಶೈಲ ಧಬಾಡಿ ತಿಳಿಸಿದರು. 

ಭಾನುವಾರ ಬನಹಟ್ಟಿಯ ದೈವ ಮಂಡಳಿಯ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಾತ್ರೆಯ ಅಂಗವಾಗಿ ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ಉಚ್ಛಾಯಿ ರಥೋತ್ಸವ ನಡೆಯಲಿದೆ. ಸೋಮವಾರ ರಾತ್ರಿಯಿಂದಲೇ ನೂರಾರು ಜನರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸುತ್ತಾರೆ. ಮಂಗಳವಾರ ರಾತ್ರಿ. 8.30ಕ್ಕೆ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.

  ಬುಧವಾರ ಮಧ್ಯಾಹ್ನ 3ರಿಂದ ಸಂಜೆ 8 ರವರೆಗೆ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ನಡೆಯಲಿವೆ. ಗುರುವಾರ ನಡೆಯುವ ಕಳಸೋತ್ಸವದೊಂದಿಗೆ ಮೂರು ದಿನಗಳ ಜಾತ್ರೆ ಮುಕ್ತಾಯಕವಾಗಲಿದೆ. 

 ಬೈಲಾಟ, ಕರಡಿ, ಸಂಬಾಳ ವಾದನ, ನಾಟಕ ಪ್ರದರ್ಶನ, ದೇವಸ್ಥಾನದ ಆವರಣದಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಯೆಂದು ಧಬಾಡಿ ತಿಳಿಸಿದರು.

  ಹಿರೇಮಠದ ಶರಣಬಸವ ಶಿವಾಚಾರ್ಯರು, ಪ್ರಾದಿಕಾರ ಅಧ್ಯಕ್ಷ ದಾನಪ್ಪ ಹುಲಜತ್ತಿ, ಶ್ರೀಪಾದ ಬಾನಕಾರ, ಪಂಡಿತ ಪಟ್ಟಣ, ಬಸವರಾಜ ಜಾಡಗೌಡ, ಶಿವಾನಂದ ಕುಳ್ಳಿ, ಸುಭಾಸ ಜಾಡಗೌಡ, ಬಿ. ಸಇ. ಕೊಣ್ಣೂರ ಇತರರಿದ್ದರು.
ಬನಹಟ್ಟಿಯ ದೈವ ಮಂಡಳಿಯ ಕಾರ್ಯಾಲಯದಲ್ಲಿ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಪೇಟೆಯ ದೈವ ಮಂಡಳಿಯ ಕಾರ್ಯಾಧ್ಯಕ್ಷ ಶ್ರೀಶೈಲ ಧಬಾಡಿ ಮಾತನಾಡಿದರು. ಶರಣಸಬವ ಶಿವಾಚಾರ್ಯರು, ಹಿರೇಮಠದ ಶರಣಬಸವ ಶಿವಾಚಾರ್ಯರು, ಪ್ರಾದಿಕಾರ ಅಧ್ಯಕ್ಷ ದಾನಪ್ಪ ಹುಲಜತ್ತಿ, ಶ್ರೀಪಾದ ಬಾನಕಾರ, ಪಂಡಿತ ಪಟ್ಟಣ, ಬಸವರಾಜ ಜಾಡಗೌಡ, ಶಿವಾನಂದ ಕುಳ್ಳಿ ಇತರರಿದ್ದರು.
Published on: 

ರಬಕವಿ/ಬನಹಟ್ಟಿ: ಬೆಡಗಿನ ವಚನಕಾರ ಶ್ರೀ ಕಾಡಸಿದ್ಧೇಶ್ವರರ ಜಾತ್ರೆ ಸೆ.29ರಿಂದ ಅ.1 ರವರೆಗೆ ನಡೆಯಲಿದೆ ಎಂದು ಮಂಗಳವಾರ ಪೇಟೆಯ ದೈವ ಮಂಡಳಿಯ ಕಾರ್ಯಾಧ್ಯಕ್ಷ ಶ್ರೀಶೈಲ ಧಬಾಡಿ ತಿಳಿಸಿದರು.

ಭಾನುವಾರ ಬನಹಟ್ಟಿಯ ದೈವ ಮಂಡಳಿಯ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಾತ್ರೆಯ ಅಂಗವಾಗಿ ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ಉಚ್ಛಾಯಿ ರಥೋತ್ಸವ ನಡೆಯಲಿದೆ. ಸೋಮವಾರ ರಾತ್ರಿಯಿಂದಲೇ ನೂರಾರು ಜನರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸುತ್ತಾರೆ. ಮಂಗಳವಾರ ರಾತ್ರಿ. 8.30ಕ್ಕೆ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.

ಬುಧವಾರ ಮಧ್ಯಾಹ್ನ 3ರಿಂದ ಸಂಜೆ 8 ರವರೆಗೆ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ನಡೆಯಲಿವೆ. ಗುರುವಾರ ನಡೆಯುವ ಕಳಸೋತ್ಸವದೊಂದಿಗೆ ಮೂರು ದಿನಗಳ ಜಾತ್ರೆ ಮುಕ್ತಾಯಕವಾಗಲಿದೆ.

ಬೈಲಾಟ, ಕರಡಿ, ಸಂಬಾಳ ವಾದನ, ನಾಟಕ ಪ್ರದರ್ಶನ, ದೇವಸ್ಥಾನದ ಆವರಣದಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಯೆಂದು ಧಬಾಡಿ ತಿಳಿಸಿದರು.

ಹಿರೇಮಠದ ಶರಣಬಸವ ಶಿವಾಚಾರ್ಯರು, ಪ್ರಾದಿಕಾರ ಅಧ್ಯಕ್ಷ ದಾನಪ್ಪ ಹುಲಜತ್ತಿ, ಶ್ರೀಪಾದ ಬಾನಕಾರ, ಪಂಡಿತ ಪಟ್ಟಣ, ಬಸವರಾಜ ಜಾಡಗೌಡ, ಶಿವಾನಂದ ಕುಳ್ಳಿ, ಸುಭಾಸ ಜಾಡಗೌಡ, ಬಿ. ಸಇ. ಕೊಣ್ಣೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net