ಸಮಾಜದ ಒಳಿತಿಗಾಗಿ ಮಾಡುವ ಸೇವೆ ಶ್ರಮದಾನ

ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಹೇಳಿಕೆ ಪೌರತ್ವ ತರಬೇತಿ ಶಿಬಿರ
ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮದ ಶಿವಾನಂದ ಮಠದಲ್ಲಿ ಗುರುವಾರ ಜರುಗಿದ ಪೌರತ್ವ ತರಬೇತಿ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಗುರುಸಿದ್ಧೇಶ್ವರ ಬಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳು, ಗ್ರಾಪಂ ಮಾಜಿ ಅಧ್ಯಕ್ಷೆ ಆಶಾ ಚಿಂತಾಕಲ, ಪ್ರಾಚಾರ್ಯ ಎಚ್.ಎಸ್.ಘಂಟಿ, ಶಿವಾನಂದ ಮಠದ ಅಭಿನವ ಬಸವರಾಜೇಂದ್ರ ಶ್ರೀಗಳು ಇತರರಿದ್ದರು.
ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮದ ಶಿವಾನಂದ ಮಠದಲ್ಲಿ ಗುರುವಾರ ಜರುಗಿದ ಪೌರತ್ವ ತರಬೇತಿ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಗುರುಸಿದ್ಧೇಶ್ವರ ಬಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳು, ಗ್ರಾಪಂ ಮಾಜಿ ಅಧ್ಯಕ್ಷೆ ಆಶಾ ಚಿಂತಾಕಲ, ಪ್ರಾಚಾರ್ಯ ಎಚ್.ಎಸ್.ಘಂಟಿ, ಶಿವಾನಂದ ಮಠದ ಅಭಿನವ ಬಸವರಾಜೇಂದ್ರ ಶ್ರೀಗಳು ಇತರರಿದ್ದರು.
Published on: 

ಗುಳೇದಗುಡ್ಡ: ಶ್ರಮದಾನವು ಯಾವುದೇ ಪ್ರತಿಲವನ್ನು ನಿರೀಕ್ಷಿಸದೆ ಸಮಾಜದ ಒಳಿತಿಗಾಗಿ ಸ್ವಯಂಪ್ರೇರಣೆಯಿಂದ ಮಾಡುವ ಸೇವೆಯಾಗಿದೆ ಎಂದು ಗುರುಸಿದ್ಧೇಶ್ವರ ಬಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಹೇಳಿದರು.

ತಾಲೂಕಿನ ಹಂಸನೂರ ಗ್ರಾಮದ ಶಿವಾನಂದ ಮಠದಲ್ಲಿ ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಹಾಗೂ ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ(ಬಿ.ಇಡಿ) ಮಹಾವಿದ್ಯಾಲಯದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರಮದಾನದಿಂದ ಜನರಲ್ಲಿ ಸೇವಾ ಮನೋಭಾವ, ಸಹಕಾರ, ಒಗ್ಗಟ್ಟು ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಯುತ್ತದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷೆ ಆಶಾ ಚಿಂತಾಕಲ ಮಾತನಾಡಿ, ಶಿಬಿರಾರ್ಥಿಗಳು ಶಿಬಿರದ ಮೂಲಕ ಪರಿಸರ ಪ್ರಜ್ಞೆ, ನಾಯಕತ್ವ ಗುಣ, ಮಾನವೀಯ ಮೌಲ್ಯ, ನಾಗರಿಕ ಪ್ರಜ್ಞೆ, ರಾಷ್ಟ್ರೀಯ ಭಾವೈಕ್ಯತೆಯ ಅರಿವು ಮೂಡಿಸಿ ಗ್ರಾಮದಲ್ಲಿ ಅಕ್ಷರ ಪ್ರಜ್ಷೆಯ ಅರಿವು ಮೂಡಿಸಬೇಕು ಎಂದರು.

ಪ್ರಾಚಾರ್ಯ ಎಚ್.ಎಸ್.ಘಂಟಿ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಮೂರು ದಿನಗಳ ಕಾಲ ಪೌರರಾಗಿ ಮಾಡುವ ಕರ್ತವ್ಯಗಳನ್ನು ತಿಳಿದುಕೊಂಡು ಶಿಕ್ಷಕರಾಗುವ ನೀವುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಉದಾತ್ತ ಚಿಂತನೆಯ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಶಿವಾನಂದ ಮಠದ ಅಭಿನವ ಬಸವರಾಜೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ. ಮಾಜಿ ಸದಸ್ಯೆ ಕಸ್ತೂರವ್ವ ಕೆಲೂಡೆಪ್ಪ ಮೂಗಜೋಳ, ಸರ್ಕಾರಿ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ನವೀನ ಕಮಲ ಮಾತನಾಡಿದರು.

ಶಿಬಿರದ ಸಂಯೋಜಕಿ ಇಂದುಮತಿ ಬೋರಣ್ಣವರ, ಕಾರ್ಯದರ್ಶಿ ಜಯಶ್ರೀ ಲಮಾಣಿ ಹಾಗೂ ಶಿಬಿರಾರ್ಥಿಗಳಿದ್ದರು.