ಸತ್ಯಾತ್ಮತೀರ್ಥ ಶ್ರೀಗಳು ಶೀಘ್ರ ಗುಣಮುಖರಾಗಲಿ

ಹುನ್ನೂರ ಗ್ರಾಮದಲ್ಲಿ ಭಕ್ತರು ವಿಶೇಷ ಪ್ರಾರ್ಥನೆ * ಮನ್ಯುಸೂಕ್ತ, ವಿಷ್ಣುಸಹಸ್ರನಾಮ, ಗುರುಸ್ತೋತ್ರ ಪಾರಾಯಣ
ಜಮಖಂಡಿ : ಶಿಗ್ಗಾವಿ ಸಮೀಪ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿರುವ ಶ್ರೀಮದ್ ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸಿ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದಲ್ಲಿ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

 ಗ್ರಾಮದ ಪೋಸ್ಟ್ ಕಾಲನಿಯ ಹನುಮಾನ ಮಂದಿರದಲ್ಲಿ ಹುನ್ನೂರಿನ ಬ್ರಾಹ್ಮಣ ಸಂಘ, ಹರೇ ಶ್ರೀನಿವಾಸ ಭಜನಾ ಮಂಡಳಿ ಸೇರಿ ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯರು, ಜಮಖಂಡಿಯ ಸಮಾಜದವರು ಹಾಗೂ ಭಕ್ತರು ಸಾಮೂಹಿಕವಾಗಿ ಸೋಮವಾರ ಪ್ರಾರ್ಥನೆ ನೆರವೇರಿಸಿದರು.

 ಮನ್ಯುಸೂಕ್ತ, ವಿಷ್ಣುಸಹಸ್ರನಾಮ ಹಾಗೂ ಗುರುಸ್ತೋತ್ರ ಪಾರಾಯಣ ನಡೆಸಲಾಯಿತು. ಬಳಿಕ ಸಾಮೂಹಿಕ ರಾಮನಾಮ ಜಪದ ಮೂಲಕ ಶ್ರೀಗಳ ಶೀಘ್ರ ಆರೋಗ್ಯ ಚೇತರಿಕೆಗೆ ಭಗವಂತನಲ್ಲಿ ಪ್ರಾರ್ಥಿಸಲಾಯಿತು.

 ಶ್ರೀಗಳ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿ, ಭಕ್ತರ ಮೇಲೆ ಗುರುಗಳ ಕಪೆ ಸದಾ ಇರಲಿ ಎಂದು ಭಕ್ತರು ಆಶಿಸಿದರು.
ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಹನುಮಾನ ಮಂದಿರದಲ್ಲಿ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Published on: 

ಜಮಖಂಡಿ : ಶಿಗ್ಗಾವಿ ಸಮೀಪ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿರುವ ಶ್ರೀಮದ್ ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸಿ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದಲ್ಲಿ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಗ್ರಾಮದ ಪೋಸ್ಟ್ ಕಾಲನಿಯ ಹನುಮಾನ ಮಂದಿರದಲ್ಲಿ ಹುನ್ನೂರಿನ ಬ್ರಾಹ್ಮಣ ಸಂಘ, ಹರೇ ಶ್ರೀನಿವಾಸ ಭಜನಾ ಮಂಡಳಿ ಸೇರಿ ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯರು, ಜಮಖಂಡಿಯ ಸಮಾಜದವರು ಹಾಗೂ ಭಕ್ತರು ಸಾಮೂಹಿಕವಾಗಿ ಸೋಮವಾರ ಪ್ರಾರ್ಥನೆ ನೆರವೇರಿಸಿದರು.

ಮನ್ಯುಸೂಕ್ತ, ವಿಷ್ಣುಸಹಸ್ರನಾಮ ಹಾಗೂ ಗುರುಸ್ತೋತ್ರ ಪಾರಾಯಣ ನಡೆಸಲಾಯಿತು. ಬಳಿಕ ಸಾಮೂಹಿಕ ರಾಮನಾಮ ಜಪದ ಮೂಲಕ ಶ್ರೀಗಳ ಶೀಘ್ರ ಆರೋಗ್ಯ ಚೇತರಿಕೆಗೆ ಭಗವಂತನಲ್ಲಿ ಪ್ರಾರ್ಥಿಸಲಾಯಿತು.

ಶ್ರೀಗಳ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿ, ಭಕ್ತರ ಮೇಲೆ ಗುರುಗಳ ಕಪೆ ಸದಾ ಇರಲಿ ಎಂದು ಭಕ್ತರು ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net