

ಜಮಖಂಡಿ: ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ವೈಯಕ್ತಿಕ ಯಶಸ್ಸಿಗೆ ಸೀಮಿತಗೊಳಿಸದೆ, ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡುವ ಗುರಿ ಹೊಂದಬೇಕು. ಶಿಕ್ಷಣದೊಂದಿಗೆ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಹಾಗೂ ಉದ್ಯಮಶೀಲತೆಯನ್ನೂ ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಚಿವ ಡಾ. ಮುರುಗೇಶ ನಿರಾಣಿ ಹೇಳಿದರು.
ನಗರದ ಬಿಎಲ್‌ಡಿಇ ಕಾಲೇಜಿನ ದರ್ಬಾರ್ ಹಾಲ್‌ನಲ್ಲಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯಕ್ರಮದ ಜತೆಗೆ ಪಠ್ಯೇತರ ಜ್ಞಾನಕ್ಕೂ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು. ಸಾಧಕರನ್ನು ಕೇವಲ ಸ್ಮರಿಸುವುದಕ್ಕಿಂತ ಅವರ ಕಾರ್ಯಪದ್ಧತಿಯಿಂದ ಪ್ರೇರಣೆ ಪಡೆದು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದರು.
ಉತ್ತರ ಕರ್ನಾಟಕದ ಶ್ರೇಷ್ಠ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಸಾಧನೆಯನ್ನು ಕೊಂಡಾಡಿದ ನಿರಾಣಿಯವರು, 1976ರಲ್ಲಿ ಒಂದು ಟ್ರಕ್‌ನಿಂದ ಸರಕು ಸಾಗಣೆ ವ್ಯವಹಾರ ಆರಂಭಿಸಿ, ಅದನ್ನು ದೇಶವ್ಯಾಪಿ ಸಾರಿಗೆ ಹಾಗೂ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಬೆಳೆಸಿದ್ದಾರೆ. ದೃಢಸಂಕಲ್ಪ, ಪರಿಶ್ರಮ, ಶಿಸ್ತು, ಪ್ರಾಮಾಣಿಕತೆ, ಹೊಸತನ ಹಾಗೂ ಸೇವಾ ಮನೋಭಾವ ಇದ್ದರೆ ದೊಡ್ಡ ಉದ್ಯಮ ಕಟ್ಟಬಹುದು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ತಿಳಿಸಿದರು.
ಎಸ್.ಎಚ್. ಲಗಳಿ, ಡಾ. ಎಂ.ಆರ್. ಪಾಟೀಲ, ಬಾಗಲಕೋಟೆ ವಿವಿ ಉಪಕುಲಪತಿ ಪ್ರೊ. ಆನಂದ ದೇಶಪಾಂಡೆ, ಡಾ. ಸುದರ್ಶನ ರೆಡ್ಡಿ, ಆರ್.ವಿ. ವಾಟ್ನಾಳ, ಮುರಗೇಶ ಹತ್ತಿಕಾಳ, ಆನಂದ ಮುರುಗನ್, ಆರ್.ಕೆ. ನಾಯಕ, ಎಸ್.ಎಸ್. ಕಲ್ಯಾಣಿ, ಸಂಗಮೇಶ ನಿರಾಣಿ ಇತರರಿದ್ದರು.