ರೈತರ ಬಂಧನ ಖಂಡಿಸಿ ದಿಢೀರ್ ರಸ್ತೆ ತಡೆ

ಪ್ರಯಾಣಿಕರ ಪರದಾಟ
ತೇರದಾಳ: ಕಬ್ಬು ಬೆಳೆಗಾರರಿಗೆ ಎಂಎಸ್‌ಪಿ ದರ ನಿಗದಿಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾದ ಘಟನೆ ಖಂಡಿಸಿ, ತೇರದಾಳ ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ರೈತರು ದಿಢೀರ್ ರಸ್ತೆ ತಡೆ ನಡೆಸಿದರು.

 ಪಟ್ಟಣದ ಬಸ್ ನಿಲ್ದಾಣದ ಸಮೀಪ ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿ ಹಾಗೂ ಸಸಾಲಟ್ಟಿ ಗ್ರಾಮದ ಮುಗಳಖೋಡ ರಸ್ತೆ, ಪಾಲಬಾಂವಿ ಸೇರಿ ಬೆಳಗಾವಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮತ್ತು ಒಳಮಾರ್ಗಗಳನ್ನು ಬಂದ್ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಕಡೆ ಟೈರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

 ಯಾವುದೇ ಮುನ್ಸೂಚನೆ ಇಲ್ಲದೆ ಮಧ್ಯಾಹ್ನದ ವೇಳೆಗೆ ರಸ್ತೆ ತಡೆ ನಡೆಸಿದ್ದರಿಂದ ಶಾಲಾ-ಕಾಲೇಜು ವಾಹನಗಳು, ಉದ್ಯೋಗಿಗಳು ಹಾಗೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಗ್ರಾಮೀಣ ಭಾಗಗಳಲ್ಲಿ ಪರ್ಯಾಯ ರಸ್ತೆ ಸಂಪರ್ಕದ ಕೊರತೆಯಿಂದ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಂತವು. ಒಂದೆಡೆ ಪರ್ಯಾಯ ಮಾರ್ಗ ಹಿಡಿದರೂ ಮತ್ತೊಂದೆಡೆ ರಸ್ತೆ ತಡೆ ಎದುರಾದ ಕಾರಣ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ರೈತರ ಹೋರಾಟದ ಪರಿಣಾಮ ಸಾರ್ವಜನಿಕರು ಅನಗತ್ಯ ಸಂಕಷ್ಟ ಅನುಭವಿಸುವಂತಾಯಿತು.
ತೇರದಾಳ ತಾಲೂಕಿನ ಸಸಾಲಟ್ಟಿ ಗ್ರಾಮದ ಮುಗಳಖೋಡ ರಸ್ತೆ ಸೇರಿ ಒಳಮಾರ್ಗಗಳನ್ನು ಬಂದ್ ಮಾಡಿ ರೈತರು ಪ್ರತಿಭಟಿಸಿದರು.
Published on: 