ರಾಜ್ಯದಲ್ಲಿ ತುಘಲಕ್ ದರ್ಬಾರ್

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆಕ್ರೋಶ
ಇಳಕಲ್ಲ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರ್‌ನಿಂದ ಜನ ಸಾಮಾನ್ಯರು ಮತ್ತು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು ಕೇವಲ ಒಂದು ವಾರದಲ್ಲಿ ಹಾಲಿನ ದರ ಮತ್ತು ಬಸ್ ಪ್ರಯಾಣ ದರವನ್ನು ಏಕಾಏಕಿ ಹೆಚ್ಚಳ ಮಾಡಲಾಗಿದೆ ಎಂದು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

 ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 3.75 ರೂ. ಇತ್ತು, ಈಗ ಅದನ್ನು 7 ರೂ. ಹೆಚ್ಚಿಸಲಾಗಿದೆ. ಸ್ಟಾೃಂಪ್ ಡ್ಯೂಟಿ ಹಾಗೂ ಆಸ್ತಿ ನೋಂದಣಿ ದರಗಳನ್ನು ದುಪ್ಪಟ್ಟು ಮಾಡಿ ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳುವ ಕೆಲಸ ನಡೆಯುತ್ತಿದೆ ಎಂದರು.

 ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎಂದು ಘೋಷಿಸಿ, ಅದರ ಹೊರೆಯನ್ನು ಪುರುಷ ಪ್ರಯಾಣಿಕರಿಂದಲೇ ಬಸ್ ದರ ಹೆಚ್ಚಳದ ಮೂಲಕ ವಸೂಲಿ ಮಾಡಲಾಗುತ್ತಿದೆ. 58 ರೂ. ಇದ್ದ ಸಮೃದ್ಧಿ ಹಾಲಿನ ದರವನ್ನು 74 ರೂ. ಗೆ ಏರಿಸಲಾಗಿದೆ. ಶೇ. 16ರಷ್ಟು ಹೆಚ್ಚಳವಾಗಿದ್ದು, ಇದರಲ್ಲಿ 7 ರೈತರಿಗೆ, 1 ಕಂಪನಿಗೆ ಹೋದರೆ ಉಳಿದ 8 ಎಲ್ಲಿಗೆ ಹೋಗುತ್ತಿದೆ? ಎಂದು ಪ್ರಶ್ನಿಸಿದರು.

ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ
 ಇಳಕಲ್ಲ ನಗರದಲ್ಲಿ 24/7 ನಿರಂತರ ಕುಡಿಯುವ ನೀರು ಯೋಜನೆ ಸಂಪೂರ್ಣ ಹಳ್ಳ ಹಿಡಿದಿದ್ದು, ಜನರಿಗೆ 10 ದಿನಗಳಿಗೊಮ್ಮೆ ನೀರು ಬರುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಜೂನಿಯರ್ ಕಾಲೇಜು ಬಳಿ ನಿರ್ಮಾಣವಾಗುತ್ತಿದ್ದ ವಾಟರ್ ಟ್ಯಾಂಕ್ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಹಿರೇಶಿವನಗುತ್ತಿ ಕೆರೆಯಿಂದ ತಮ್ಮ ರೆರ್ಸಾಟ್‌ಗೆ ನೀರು ಪೂರೈಸುತ್ತಿದ್ದಾರೆ ಎಂದು ಆರೋಪಿಸಿದರು.

 ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಪೂರೈಸಲು ಬಿಜೆಪಿ ಅವಧಿಯಲ್ಲಿ ಆರಂಭವಾಗಿದ್ದ ‘ಜಲ ಜೀವನ್ ಮಿಷನ್’ ಕಾಮಗಾರಿಗಳೂ ಈ ಸರ್ಕಾರದಲ್ಲಿ ಸ್ಥಗಿತಗೊಂಡಿವೆ. ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಮಂತ್ರಿಯಾದರೂ ಮತಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣ ವಿಲರಾಗಿದ್ದಾರೆ ಎಂದು ಆರೋಪಿಸಿದರು.

 ಇಳಕಲ್ಲ ಗ್ರಾಮೀಣ ಮಂಡಲ ಅಧ್ಯಕ್ಷ ಮಹಾಂತಗೌಡ ಪಾಟೀಲ ಮಾತನಾಡಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲರ ಸುದ್ದಿಗೋಷ್ಠಿಯಲ್ಲಿ ಕೂರುವ ಮುಖಂಡರ ಬಗ್ಗೆ ಸಚಿವ ಕಾಶಪ್ಪನವರ ಲಘುವಾಗಿ ನಿಂದಿಸುತ್ತಿರುವುದು ಖಂಡನೀಯ. ಸಚಿವರು ಕೆಟ್ಟ ಪದಪ್ರಯೋಗವನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ರೂಪಿಸಲಾಗುವುದು. ನಾವು ಸತ್ತವರೋ ಅಥವಾ ಬದುಕಿರುವವರೋ ಎಂಬುದನ್ನು ಮುಂಬರುವ ಚುನಾವಣೆಯಲ್ಲಿ ತೋರಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳು ಹಾಗೂ ಬೆಲೆ ಏರಿಕೆಯನ್ನು ಖಂಡಿಸಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ನೇತೃತ್ವದಲ್ಲಿ ನ. 6ರಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ರ‌್ಯಾಲಿ ಬಸವೇಶ್ವರ ವೃತ್ತದಿಂದ ಆರಂಭವಾಗಿ ಪ್ರಮುಖ ರಸ್ತೆಗಳ ಮೂಲಕ ಕಂಠಿ ವೃತ್ತದವರೆಗೆ ಸಾಗಲಿದ್ದು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖಂಡರು ಕರೆ ನೀಡಿದ್ದಾರೆ.

 ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಶೆಟ್ಟರ, ಮುಖಂಡರಾದ ಗುರಂ ಲಕ್ಷ್ಮಣ, ಮಂಜುನಾಥ ಹೊಸಮನಿ, ವೀರೇಶ ಹಿರೇಮನಿ ಇತರರಿದ್ದರು.
ಇಳಕಲ್ಲ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಶೆಟ್ಟರ, ಗುರಂ ಲಕ್ಷ್ಮಣ, ಮಂಜುನಾಥ ಹೊಸಮನಿ ಇದ್ದರು.
Published on: 