ರಕ್ಷಣೆಗಾಗಿರುವ ಕಾನೂನು, ಕಾಯ್ದೆಗಳ ಅರಿವು ಅಗತ್ಯ

ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಕೆ. ಬೊಂಬ್ಲೆ ಹೇಳಿಕೆ
ಬಾದಾಮಿ : ಭವಿಷ್ಯದಲ್ಲಿ ಸದಢ ದೇಶ ನಿರ್ಮಾಣಕ್ಕೆ ಮಕ್ಕಳ ಬಾಲ್ಯಾವಸ್ಥೆಯ ರಕ್ಷಣೆ ಮತ್ತು ಸಂರಕ್ಷಣೆ ಅತ್ಯಂತ ಅಗತ್ಯ ಎಂದು ಚೊಳಚಗುಡ್ಡ ಗ್ರಾಮದ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಕೆ. ಬೊಂಬ್ಲೆ ಹೇಳಿದರು.

 ತಾಲೂಕಿನ ಖ್ಯಾಡ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಹಾಗೂ ರೀಚ್ ಸ್ವಯಂ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸುರಕ್ಷಿತ ಬಚಪನ್ ಅಭಿಯಾನದ ಅಂಗವಾಗಿ ಶಾಲಾ ಮಕ್ಕಳಿಗೆ 2012ರ ಕಾಯ್ದೆ ಕುರಿತು ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಜಾಗತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ಸಂವಿಧಾನ ನೀಡಿರುವ ಹಕ್ಕುಗಳಷ್ಟೇ ಕರ್ತವ್ಯಗಳೂ ಮುಖ್ಯ. ಸಂವಿಧಾನ, ಮಹಿಳೆಯರಿಗೆ ಗೌರವ ನೀಡುವುದು ಮತ್ತು ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬರ ಪ್ರಮುಖ ಕರ್ತವ್ಯವಾಗಿದೆ. ಪರಸ್ಪರ ಸಹೋದರತ್ವದ ಭಾವನೆಯನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗಾಗಿ ಇರುವ ಪ್ರಮುಖ ಕಾನೂನು-ಕಾಯ್ದೆಗಳ ಬಗ್ಗೆ ಅರಿವು ಹೊಂದಬೇಕು ಎಂದು ತಿಳಿಸಿದರು.

 ಖ್ಯಾಡ ಶಾಲೆ ಮುಖ್ಯ ಶಿಕ್ಷಕ ಎ.ಎಂ. ಗೌಡರ ಮಾತನಾಡಿ, ಸುರಕ್ಷಿತ ಬಚಪನ್ ಅಭಿಯಾನವು ಮಕ್ಕಳಲ್ಲಿ ಅರಿವು ಹಾಗೂ ಕಾಯ್ದೆ ಬಗ್ಗೆ ಮಾಹಿತಿ ನೀಡುವ ಅಭಿಯಾನವಾಗಿದೆ. ಮಕ್ಕಳ ಸಮಸ್ಯೆಗಳಿಗೆ 1098 ಮಕ್ಕಳ ಸಹಾಯವಾಣಿ ಸಂಪರ್ಕ ಮಾಡಬಹುದು ಎಂದು ತಿಳಿಸಿದರು.

 ರೀಚ್ ಸಂಸ್ಥೆ ಸಂಯೋಜಕಿ ಸುಧಾ ಚಿಮ್ಮನಕಟ್ಟಿ ಮಾತನಾಡಿ, ಇಂದಿನ ಮಕ್ಕಳು ಇಂದಿನ ಪ್ರಜೆಗಳು. ದೇಶದ ಅಮೂಲ್ಯ ಸಂಪತ್ತಾಗಿರುವ ಮಕ್ಕಳಿಗೆ ಸುರಕ್ಷಿತ ಬಾಲ್ಯ ಹಾಗೂ ಗೌರವಯುತ ಜೀವನ ಒದಗಿಸುವುದು ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

 ಮಕ್ಕಳು ಸ್ೇ ಟಚ್’ (ಸುರಕ್ಷಿತ ಸ್ಪರ್ಶ) ಮತ್ತು ಅನ್‌ಸ್ೇ ಟಚ್’ (ಅಸುರಕ್ಷಿತ ಸ್ಪರ್ಶ) ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಯಾರಾದರೂ ಅಸಹಜವಾಗಿ ಅಥವಾ ಖಾಸಗಿ ಅಂಗಗಳನ್ನು ಮುಟ್ಟಿದಾಗ ಭಯಪಡದೆ ತಕ್ಷಣ ಧ್ವನಿ ಎತ್ತಬೇಕು. ಲೈಂಗಿಕ ದೌರ್ಜನ್ಯ ಅಥವಾ ಅನುಮಾನಾಸ್ಪದ ನಡವಳಿಕೆಗಳು ಕಂಡು ಬಂದಾಗ ಯಾವುದೇ ಮುಜುಗರವಿಲ್ಲದೆ ತಕ್ಷಣ ಶಿಕ್ಷಕರಿಗೆ, ಪಾಲಕರಿಗೆ ತಿಳಿಸಬೇಕು. ದೌರ್ಜನ್ಯ ನಡೆದ ನಂತರ ಕಾನೂನು ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿಯೇ ಮುನ್ನೆಚ್ಚರಿಕೆ ವಹಿಸುವುದು ಮುಖ್ಯವಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಾದಾಮಿ ತಾಲೂಕಿನ ಖ್ಯಾಡ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುರಕ್ಷಿತ ಬಚಪನ್ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಜಾಗತಿ ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ನಿಷೇಧ ಭೀತ್ತಿ ಚಿತ್ರ ಪ್ರದರ್ಶನಗೊಳಿಸಲಾಯಿತು. ಎಸ್.ಕೆ. ಬೊಂಬ್ಲೆ, ಎ.ಎಂ. ಗೌಡರ, ಸುಧಾ ಚಿಮ್ಮನಕಟ್ಟಿ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇತರರಿದ್ದರು.
Published on: 