ಯುವ ಶಕ್ತಿಗೆ ಸನ್ಮಾರ್ಗದರ್ಶನ ಅತ್ಯವಶ್ಯ

ಸಂಸದ ಬಿ.ವೈ. ರಾಘವೇಂದ್ರ ಹೇಳಿಕೆ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ
ಜಮಖಂಡಿ ನಗರದಲ್ಲಿ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ‘2027ರ ದಿನದರ್ಶಿಕೆ’ ಬಿಡುಗಡೆಗೊಳಿಸಿದರು. ಬಾಳೆಹೊನ್ನೂರು ರಂಭಾಪುರಿ ಮಹಾಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು, ಶಾಸಕ ನಾಡೋಜ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಇತರರಿದ್ದಾರೆ.
ಜಮಖಂಡಿ ನಗರದಲ್ಲಿ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ‘2027ರ ದಿನದರ್ಶಿಕೆ’ ಬಿಡುಗಡೆಗೊಳಿಸಿದರು. ಬಾಳೆಹೊನ್ನೂರು ರಂಭಾಪುರಿ ಮಹಾಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು, ಶಾಸಕ ನಾಡೋಜ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಇತರರಿದ್ದಾರೆ.
Published on: 

ಜಮಖಂಡಿ: ಇಂದಿನ ಯುವ ಜನತೆ ಮಾನಸಿಕ ಖಿನ್ನತೆ ಹಾಗೂ ದಾರಿ ತಪ್ಪಿಸುವ ವಿಚಾರಗಳಿಂದ ದೂರವಿದ್ದು, ದೇಶ ನಿರ್ಮಾಣಕ್ಕೆ ಪೂರಕವಾದ ಸನ್ಮಾರ್ಗದಲ್ಲಿ ಸಾಗಬೇಕು. ಯುವ ಶಕ್ತಿಯೇ ರಾಷ್ಟ್ರದ ನಿಜವಾದ ಶಕ್ತಿಯಾಗಿದ್ದು, ಯುವಕರಿಗೆ ಧಾರ್ಮಿಕ ಸಂಸ್ಕಾರ, ಆಧ್ಯಾತ್ಮಿಕ ಅರಿವು ಮತ್ತು ಸೂಕ್ತ ಮಾರ್ಗದರ್ಶನ ನೀಡುವುದು ಅಗತ್ಯ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ನಗರ ಸಮೀಪದ ಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದ ಮಾನವ ಧರ್ಮ ಮಂಟಪದಲ್ಲಿ ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ 2027ರ ದಿನದರ್ಶಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹುಟ್ಟುವಾಗ ಯಾರಿಗೂ ತಮ್ಮ ಜಾತಿ, ಧರ್ಮದ ಅರಿವಿರುವುದಿಲ್ಲ. ಈ ಭೂಮಿಯ ಗಾಳಿ, ನೀರು ಮತ್ತು ಆಹಾರ ಹಂಚಿಕೊಂಡು ಬದುಕುವ ನಾವೆಲ್ಲರೂ ಒಂದೇ ತಾಯಿಯ ಮಕ್ಕಳೆಂಬ ಭಾವನೆಯಿಂದ ಬಾಳಬೇಕು ಎಂಬ ಮಾನವ ಧರ್ಮದ ಸಂದೇಶವನ್ನು ರಂಭಾಪುರಿ ಜಗದ್ಗುರುಗಳು ಸಮಾಜಕ್ಕೆ ಸಾರಿದ್ದಾರೆ ಎಂದರು.

ಇಂದಿನ ಯುವ ಜನತೆ ತಮ್ಮ ಶಕ್ತಿಯನ್ನು ದೇಶದ ಅಭಿವದ್ಧಿಗೆ ಬಳಸಬೇಕು. ಚಂದ್ರಶೇಖರ ಆಜಾದ್, ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಹಾಗೂ ವೀರ ಸಾವರ್ಕರ್ ಸೇರಿ ಹಲವು ಮಹನೀಯರು ಯುವ ವಯಸ್ಸಿನಲ್ಲಿಯೇ ದೇಶಕ್ಕಾಗಿ ಶ್ರಮಿಸಿ ತ್ಯಾಗ ಮಾಡಿದ್ದಾರೆ. ಅವರ ಆದರ್ಶಗಳು ಇಂದಿನ ಯುವ ಜನತೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ರೇಣುಕಾಚಾರ್ಯರ ತತ್ವಗಳು ಹಾಗೂ ಜಗದ್ಗುರುಗಳ ಮಾರ್ಗದರ್ಶನ ಯುವಕರನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಸಹಕಾರಿಯಾಗಲಿವೆ. ದೇಶದ ಯುವಕರನ್ನು ಜೆನ್‌ಜಿ ಹೆಸರಿನಲ್ಲಿ ಅವರ ದಿಕ್ಕನ್ನು ತಪ್ಪಿಸುವ ಕಾರ್ಯ ಆಗುತ್ತಿದೆ ಎಂದರು.

ಬಾಳೆಹೊನ್ನೂರು ರಂಭಾಪುರಿ ಮಹಾಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು, ಶಾಸಕ ನಾಡೋಜ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net