

ಮುಧೋಳ: ತಾಲೂಕಿನ ಮೆಳ್ಳಿಗೇರಿಯಲ್ಲಿ ಶ್ರೀ ಸತ್ಯದೇವಿ ಪರ್ಜನ್ಯ ಸಪ್ತಾಹ ಹಾಗೂ ಜಾತ್ರಾ ಮಹೋತ್ಸವ ನಿಮಿತ್ತ ಫ್ರೇಂಡ್ಸ್ ಫಾರೆವರ್ ಗ್ರೂಪ್ ವತಿಯಿಂದ ಸತತ ಎರಡನೇ ಬಾರಿಗೆ ರಾಜ್ಯಮಟ್ಟದ ಪುರುಷರ ಮ್ಯಾಟ್ ಖೋಖೋ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಅವಳಿ ಜಿಲ್ಲೆಯ ಹನ್ನೆರಡು ತಂಡಗಳು ಪಾಲ್ಗೊಂಡು, ಕುಂದರಗಿ ಶ್ರೀ ಮಾರುತೇಶ್ವರ ಸ್ಟೋರ್ಟ್ಸ್ ಕ್ಲಬ್ ತಂಡ (ಪ್ರಥಮ), ಆರ್‌ಸಿಬಿ ಬಾಗಲಕೋಟೆ (ದ್ವಿತೀಯ), ಮೆಳ್ಳಿಗೇರಿಯ ಶ್ರೀ ಸತ್ಯದೇವಿ ಖೋಖೋ ತಂಡ (ತೃತೀಯ) ಹಾಗೂ ಇಂಗಳಗಿ ಶ್ರೀ ಮೃತ್ಯುಂಜಯ ಖೋಖೋ ತಂಡ (ಚತುರ್ಥ) ಸ್ಥಾನವನ್ನು ಪಡೆದುಕೊಂಡವು.
ಕ್ರೀಡಾ ಪ್ರೇಮಿ ಸಿ.ಸಿ. ನ್ಯಾಮಗೌಡ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಯುವ ಜನತೆಯಲ್ಲಿ ಕ್ರೀಡಾ ಸ್ಫೂರ್ತಿಯನ್ನು ಮೂಡಿಸಲು ಇಂತಹ ರಾಜ್ಯಮಟ್ಟದ ಪಂದ್ಯಾವಳಿಗಳು ಅತ್ಯಂತ ಅವಶ್ಯಕವಾಗಿವೆ. ಸೋಲು-ಗೆಲುವುಗಳಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದೇ ಮುಖ್ಯವಾಗಿದ್ದು, ಆಟಗಾರರು ಉತ್ತಮ ಪ್ರದರ್ಶನದೊಂದಿಗೆ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು, ಮೆಳ್ಳಿಗೇರಿ ಗ್ರಾಮವು ಕ್ರೀಡಾ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜೇತ ತಂಡಗಳಿಗೆ ಗ್ರಾಮದ ಹಳೆಯ ಖೋಖೋ ತಂಡದ ಆಟಗಾರರು ನಗದು ಬಹುಮಾನ ನೀಡಿ ಗೌರವಿಸಿದರು.