ಬರಪೀಡಿತ ಮುಧೋಳ ಘೋಷಣೆಗೆ ಆಗ್ರಹ

ಬಿಜೆಪಿಯಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ * ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ
ಮುಧೋಳ: ಮುಧೋಳ ತಾಲೂಕಿನಲ್ಲಿ ತೀವ್ರ ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಗ್ರಾಮೀಣ ಹಾಗೂ ನಗರ ಮಂಡಳಗಳ ವತಿಯಿಂದ ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

  ಮುಧೋಳ ತಾಲೂಕು ಕೂಡಲೇ ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ತುರ್ತು ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಇದಕ್ಕೂ ಮುನ್ನ ನಗರದ ರಾಣಾ ಪ್ರತಾಪಸಿಂಹ ವೃತ್ತದಲ್ಲಿ ಬೆಳಗಾವಿ-ವಿಜಯಪುರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 ಅರುಣ ಗೋವಿಂದ ಕಾರಜೋಳ ಮಾತನಾಡಿ, ಬರದ ತೀವ್ರತೆಗೆ ರೈತರು ಬಹಳಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಆದರು ಸಹ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಪ್ರತಿ ರೈತ ಕುಟುಂಬಕ್ಕೆ ತಕ್ಷಣ 2,500 ರೂ.ಪರಿಹಾರ ನೀಡಬೇಕು. ತಾಲೂಕಿಗೆ ವಿಶೇಷ ತುರ್ತು ಬರ ಪರಿಹಾರ ನಿಧಿ ಬಿಡುಗಡೆ ಮಾಡಿ, ಪ್ರತಿ ಎಕರೆಗೆ 50,000 ರೂ.ವರೆಗೆ ಪರಿಹಾರ ಶೀಘ್ರ ಒದಗಿಸಬೇಕು ಎಂದು ಆಗ್ರಹಿಸಿದರು.

 ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಬಾಕಿ ಉಳಿದಿರುವ ಬೆಳೆ ವಿಮೆ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಜಾನುವಾರುಗಳಿಗೆ ಉಂಟಾಗಿರುವ ಮೇವಿನ ಸಮಸ್ಯೆ ನೀಗಿಸಲು ತಕ್ಷಣ ಮೇವು ಶಿಬಿರಗಳನ್ನು ಆರಂಭಿಸಬೇಕು. ಕಳೆದ ಆರು ತಿಂಗಳಿಂದ ಬಾಕಿ ಉಳಿದಿರುವ ವಿವಿಧ ಪಿಂಚಣಿ ಹಣ ತುರ್ತಾಗಿ ಪಾವತಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

 ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗಣ್ಣಗೌಡ ಪಾಟೀಲ ಮಾತನಾಡಿ, ಅನ್ನದಾತರು ನಲುಗಿರುವ ಸಂದರ್ಭದಲ್ಲಿ ಸರ್ಕಾರದ ಮೌನ ಹಾಗೂ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.

 ಮುಖಂಡರಾದ ಶಿವಗಿರೆಪ್ಪ ಅಕ್ಕಿಮರಡಿ, ನಾಗಪ್ಪ ಅಂಬಿ, ಶ್ರೀಶೈಲಗೌಡ ಪಾಟೀಲ, ಧರೆಪ್ಪ ಸಾಂಗ್ಲೀಕರ, ರವಿ ಲಕ್ಷಣ್ಣವರ, ಮಹಾಲಂಗಪ್ಪ ತೇಲಿ, ಸುರೇಶ ರಾಮತೀರ್ಥ, ಸುನೀಲ ಕಂಬೋಗಿ, ಸದಾಶಿವ ಇಟಕನ್ನವರ, ಹಣಮಂತ ತುಳಸಿಗೇರಿ ಇತರರಿದ್ದರು.
ಮುಧೋಳದಲ್ಲಿ ಬರ ಪರಿಹಾರಕ್ಕಾಗಿ ಆಗ್ರಹಿಸಿ ರಾಣಾ ಪ್ರತಾಪಸಿಂಹ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು. ಸಂಗಣ್ಣ ಕಾತರಕಿ, ಶಿವಗಿರೆಪ್ಪ ಅಕ್ಕಿಮರಡಿ, ನಾಗಪ್ಪ ಅಂಬಿ, ಶ್ರೀಶೈಲಗೌಡ ಪಾಟೀಲ, ಧರೆಪ್ಪ ಸಾಂಗ್ಲೀಕರ, ಅರುಣ ಕಾರಜೋಳ, ರವಿ ಲಕ್ಷಣ್ಣವರ ಇತರರಿದ್ದರು.
Published on: 

ಮುಧೋಳ: ಮುಧೋಳ ತಾಲೂಕಿನಲ್ಲಿ ತೀವ್ರ ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಗ್ರಾಮೀಣ ಹಾಗೂ ನಗರ ಮಂಡಳಗಳ ವತಿಯಿಂದ ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮುಧೋಳ ತಾಲೂಕು ಕೂಡಲೇ ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ತುರ್ತು ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಇದಕ್ಕೂ ಮುನ್ನ ನಗರದ ರಾಣಾ ಪ್ರತಾಪಸಿಂಹ ವೃತ್ತದಲ್ಲಿ ಬೆಳಗಾವಿ-ವಿಜಯಪುರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅರುಣ ಗೋವಿಂದ ಕಾರಜೋಳ ಮಾತನಾಡಿ, ಬರದ ತೀವ್ರತೆಗೆ ರೈತರು ಬಹಳಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಆದರು ಸಹ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಪ್ರತಿ ರೈತ ಕುಟುಂಬಕ್ಕೆ ತಕ್ಷಣ 2,500 ರೂ.ಪರಿಹಾರ ನೀಡಬೇಕು. ತಾಲೂಕಿಗೆ ವಿಶೇಷ ತುರ್ತು ಬರ ಪರಿಹಾರ ನಿಧಿ ಬಿಡುಗಡೆ ಮಾಡಿ, ಪ್ರತಿ ಎಕರೆಗೆ 50,000 ರೂ.ವರೆಗೆ ಪರಿಹಾರ ಶೀಘ್ರ ಒದಗಿಸಬೇಕು ಎಂದು ಆಗ್ರಹಿಸಿದರು.

ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಬಾಕಿ ಉಳಿದಿರುವ ಬೆಳೆ ವಿಮೆ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಜಾನುವಾರುಗಳಿಗೆ ಉಂಟಾಗಿರುವ ಮೇವಿನ ಸಮಸ್ಯೆ ನೀಗಿಸಲು ತಕ್ಷಣ ಮೇವು ಶಿಬಿರಗಳನ್ನು ಆರಂಭಿಸಬೇಕು. ಕಳೆದ ಆರು ತಿಂಗಳಿಂದ ಬಾಕಿ ಉಳಿದಿರುವ ವಿವಿಧ ಪಿಂಚಣಿ ಹಣ ತುರ್ತಾಗಿ ಪಾವತಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗಣ್ಣಗೌಡ ಪಾಟೀಲ ಮಾತನಾಡಿ, ಅನ್ನದಾತರು ನಲುಗಿರುವ ಸಂದರ್ಭದಲ್ಲಿ ಸರ್ಕಾರದ ಮೌನ ಹಾಗೂ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಶಿವಗಿರೆಪ್ಪ ಅಕ್ಕಿಮರಡಿ, ನಾಗಪ್ಪ ಅಂಬಿ, ಶ್ರೀಶೈಲಗೌಡ ಪಾಟೀಲ, ಧರೆಪ್ಪ ಸಾಂಗ್ಲೀಕರ, ರವಿ ಲಕ್ಷಣ್ಣವರ, ಮಹಾಲಂಗಪ್ಪ ತೇಲಿ, ಸುರೇಶ ರಾಮತೀರ್ಥ, ಸುನೀಲ ಕಂಬೋಗಿ, ಸದಾಶಿವ ಇಟಕನ್ನವರ, ಹಣಮಂತ ತುಳಸಿಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net