ಪರಿಹಾರಕ್ಕಾಗಿ 15ರಿಂದ ನಿರಂತರ ಧರಣಿ ಎಚ್ಚರಿಕೆ

ಸನ್ನತಿ ಬ್ಯಾರೇಜ್ ಮುಳುಗಡೆ ಸಂತ್ರಸ್ತ ರೈತರು * ಬಾಗಲಕೋಟೆ ಆರ್ ಆ್ಯಂಡ್ ಆರ್ ಕಚೇರಿ ಎದುರು ಪ್ರತಿಭಟನೆ
ಬಾಗಲಕೋಟೆ: ಸನ್ನತಿ ಬ್ರಿಡ್ಜ್ ಕಮ್ ಬ್ಯಾರೇಜ್ ಯೋಜನೆಯಿಂದ ಜಮೀನು ಕಳೆದುಕೊಂಡಿರುವ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳ ರೈತರಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಅ. 15ರಿಂದ ಬ್ಯಾರೇಜ್ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಯಾದಗಿರಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ದೇವಿಂದ್ರಪ್ಪ  ಕೋಲಕಾರ ಎಚ್ಚರಿಸಿದರು.

 ನಗರದ ನವನಗರದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಆಯುಕ್ತರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ರೈತರು, ಬಳಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

 ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳ, ಹುರಸಗುಂಡಗಿ, ಅಣಬಿ, ರೋಜಾ ಎಸ್ ಹಾಗೂ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿ, ಕೊಲ್ಲೂರ, ಕನಗನಹಳ್ಳಿ, ಉಳಂಡಿಗೇರಾ ಗ್ರಾಮಗಳ ಜಮೀನುಗಳು ಬ್ಯಾರೇಜ್ ನಿರ್ಮಾಣದಿಂದ ಮುಳುಗಡೆಯಾಗಿವೆ. ಪರಿಹಾರ ಹೆಚ್ಚಿಸುವಂತೆ ರೈತರು ನ್ಯಾಯಾಲಯದ ಮೊರೆ ಹೋಗಿದ್ದು, ನೀರಾವರಿ ಜಮೀನಿಗೆ ಎಕರೆಗೆ 90 ಲಕ್ಷ ರೂ. ಹಾಗೂ ಒಣಭೂಮಿಗೆ 55 ಲಕ್ಷ ರೂ. ವರೆಗೆ ಪರಿಹಾರ ನೀಡುವಂತೆ ಜಿಲ್ಲಾ ನ್ಯಾಯಾಲಯಗಳು ಆದೇಶಿಸಿವೆ ಎಂದು ಅವರು ತಿಳಿಸಿದರು.

 ಸರ್ಕಾರ ಈ ದರವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿರುವುದರಿಂದ ಸುಮಾರು 10 ವರ್ಷಗಳಿಂದ ರೈತರಿಗೆ ಪರಿಹಾರ ದೊರೆತಿಲ್ಲ. ರೈತರು ಒನ್‌ಟೈಮ್ ಸೆಟ್ಲ್‌ಮೆಂಟ್ ಮೂಲಕ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನಕ್ಕೆ ಸಿದ್ಧರಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

 ಮೂರನೇ ಹಂತದ ಕಾಮಗಾರಿಗೆ ಸಂಬಂಧಿಸಿದ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಿದ ಮಾದರಿಯಲ್ಲೇ ಮೊದಲ ಮತ್ತು ಎರಡನೇ ಹಂತದ ಪ್ರಕರಣಗಳನ್ನೂ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು.

 ಬಾಗಲಕೋಟೆ ಜಿಲ್ಲೆಯಲ್ಲಿ ಮುಳುಗಡೆಯಾದ ಜಮೀನುಗಳಿಗೆ ನಿಗದಿಪಡಿಸಿರುವ ಪರಿಹಾರ ದರದ ಮಾದರಿಯನ್ನು ಸನ್ನತಿ ಬ್ಯಾರೇಜ್ ಯೋಜನೆಯಲ್ಲೂ ಅನುಸರಿಸಿದರೆ ರೈತರಿಗೆ ನ್ಯಾಯ ದೊರೆಯುವುದರ ಜತೆಗೆ ಸರ್ಕಾರದ ವೆಚ್ಚವೂ ಕಡಿಮೆಯಾಗಲಿದೆ ಎಂದು ಹೇಳಿದರು.

 ಈ ವಿಷಯವಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ 10 ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಅ.15ರಿಂದ ಸನ್ನತಿ ಬ್ರಿಡ್ಜ್ ಕಮ್ ಬ್ಯಾರೇಜ್ ಎದುರು ನಿರಂತರ ಧರಣಿ ನಡೆಸಲಾಗುವುದು. ಬ್ಯಾರೇಜ್‌ನಲ್ಲಿ ನೀರು ನಿಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

 ಮುರಳೀಧರ ಕುಲಕರ್ಣಿ, ಮಾಳಪ್ಪ ಹೇರುಂಡಿ, ಮಂಜು ಸಾಹು, ಯೂಸುಫ್ ಪೀರಾ, ಗುರುಪಾದಯ್ಯ ಸ್ವಾಮಿ, ಸಂತೋಷ ಸಾಹು, ಚನಬಸು ವನದುರ್ಗ, ಚಂದ್ರಶೇಖರ ಗೋಗಿ ಇತರರಿದ್ದರು.
ಸನ್ನತಿ ಬ್ಯಾರೇಜ್ ಯೋಜನೆಗೆ ಜಮೀನು ಕಳೆದುಕೊಂಡ ರೈತರಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡುವಂತೆ ಆಗ್ರಹಿಸಿ ಗುರುವಾರ ಬಾಧಿತ ಜಿಲ್ಲೆಗಳ ಸಂತ್ರಸ್ತರು ಬಾಗಲಕೋಟೆ ಆರ್ ಆ್ಯಂಡ್ ಆರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
Published on: 

ಬಾಗಲಕೋಟೆ: ಸನ್ನತಿ ಬ್ರಿಡ್ಜ್ ಕಮ್ ಬ್ಯಾರೇಜ್ ಯೋಜನೆಯಿಂದ ಜಮೀನು ಕಳೆದುಕೊಂಡಿರುವ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳ ರೈತರಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಅ. 15ರಿಂದ ಬ್ಯಾರೇಜ್ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಯಾದಗಿರಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ದೇವಿಂದ್ರಪ್ಪ ಕೋಲಕಾರ ಎಚ್ಚರಿಸಿದರು.

ನಗರದ ನವನಗರದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಆಯುಕ್ತರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ರೈತರು, ಬಳಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳ, ಹುರಸಗುಂಡಗಿ, ಅಣಬಿ, ರೋಜಾ ಎಸ್ ಹಾಗೂ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿ, ಕೊಲ್ಲೂರ, ಕನಗನಹಳ್ಳಿ, ಉಳಂಡಿಗೇರಾ ಗ್ರಾಮಗಳ ಜಮೀನುಗಳು ಬ್ಯಾರೇಜ್ ನಿರ್ಮಾಣದಿಂದ ಮುಳುಗಡೆಯಾಗಿವೆ. ಪರಿಹಾರ ಹೆಚ್ಚಿಸುವಂತೆ ರೈತರು ನ್ಯಾಯಾಲಯದ ಮೊರೆ ಹೋಗಿದ್ದು, ನೀರಾವರಿ ಜಮೀನಿಗೆ ಎಕರೆಗೆ 90 ಲಕ್ಷ ರೂ. ಹಾಗೂ ಒಣಭೂಮಿಗೆ 55 ಲಕ್ಷ ರೂ. ವರೆಗೆ ಪರಿಹಾರ ನೀಡುವಂತೆ ಜಿಲ್ಲಾ ನ್ಯಾಯಾಲಯಗಳು ಆದೇಶಿಸಿವೆ ಎಂದು ಅವರು ತಿಳಿಸಿದರು.

ಸರ್ಕಾರ ಈ ದರವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿರುವುದರಿಂದ ಸುಮಾರು 10 ವರ್ಷಗಳಿಂದ ರೈತರಿಗೆ ಪರಿಹಾರ ದೊರೆತಿಲ್ಲ. ರೈತರು ಒನ್‌ಟೈಮ್ ಸೆಟ್ಲ್‌ಮೆಂಟ್ ಮೂಲಕ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನಕ್ಕೆ ಸಿದ್ಧರಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಮೂರನೇ ಹಂತದ ಕಾಮಗಾರಿಗೆ ಸಂಬಂಧಿಸಿದ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಿದ ಮಾದರಿಯಲ್ಲೇ ಮೊದಲ ಮತ್ತು ಎರಡನೇ ಹಂತದ ಪ್ರಕರಣಗಳನ್ನೂ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಮುಳುಗಡೆಯಾದ ಜಮೀನುಗಳಿಗೆ ನಿಗದಿಪಡಿಸಿರುವ ಪರಿಹಾರ ದರದ ಮಾದರಿಯನ್ನು ಸನ್ನತಿ ಬ್ಯಾರೇಜ್ ಯೋಜನೆಯಲ್ಲೂ ಅನುಸರಿಸಿದರೆ ರೈತರಿಗೆ ನ್ಯಾಯ ದೊರೆಯುವುದರ ಜತೆಗೆ ಸರ್ಕಾರದ ವೆಚ್ಚವೂ ಕಡಿಮೆಯಾಗಲಿದೆ ಎಂದು ಹೇಳಿದರು.

ಈ ವಿಷಯವಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ 10 ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಅ.15ರಿಂದ ಸನ್ನತಿ ಬ್ರಿಡ್ಜ್ ಕಮ್ ಬ್ಯಾರೇಜ್ ಎದುರು ನಿರಂತರ ಧರಣಿ ನಡೆಸಲಾಗುವುದು. ಬ್ಯಾರೇಜ್‌ನಲ್ಲಿ ನೀರು ನಿಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಮುರಳೀಧರ ಕುಲಕರ್ಣಿ, ಮಾಳಪ್ಪ ಹೇರುಂಡಿ, ಮಂಜು ಸಾಹು, ಯೂಸುಫ್ ಪೀರಾ, ಗುರುಪಾದಯ್ಯ ಸ್ವಾಮಿ, ಸಂತೋಷ ಸಾಹು, ಚನಬಸು ವನದುರ್ಗ, ಚಂದ್ರಶೇಖರ ಗೋಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net