ಪತ್ರಿಕಾ ವಿತರಕರಿಗೆ ಸರ್ಕಾರ ಸೌಲಭ್ಯ ಕಲ್ಪಿಸಲಿ

ಬಾಗಲಕೋಟೆ ತಾ.ಪಂ. ಮಾಜಿ ಉಪಾಧ್ಯಕ್ಷ ಸಂಗಣ್ಣ ಮುಧೋಳ ಹೇಳಿಕೆ
ಕಲಾದಗಿ : ಸೂರ್ಯೋದಯಕ್ಕೂ ಮುನ್ನವೇ ಮನೆ ಮನೆಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರು ಹವಾಮಾನ ವೈಪರೀತ್ಯ ಸೇರಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಸರ್ಕಾರ ಕನಿಷ್ಠ ಕಾರ್ಮಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಬಾಗಲಕೋಟೆ ತಾ.ಪಂ. ಮಾಜಿ ಉಪಾಧ್ಯಕ್ಷ ಸಂಗಣ್ಣ ಮುಧೋಳ ಒತ್ತಾಯಿಸಿದರು.

 ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಪತ್ರಿಕಾ ಬಳಗದ ವತಿಯಿಂದ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ಸಮಾಜದಲ್ಲಿ ಜಾಗತಿ ಮೂಡಿಸುವ ಪತ್ರಿಕಾ ಕ್ಷೇತ್ರಕ್ಕೆ ವಿತರಕರು ಪ್ರಮುಖ ಕೊಂಡಿಯಾಗಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ವಿತರಕರಿಗೆ ಉಚಿತ ವೈದ್ಯಕೀಯ ನೆರವು, ಆರೋಗ್ಯ ತಪಾಸಣೆ ಹಾಗೂ ಜೀವ ವಿಮೆ ಸೇರಿ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು ಎಂದು ಹೇಳಿದರು.

 ಬಿಜೆಪಿ ಮುಖಂಡ ಬಶೆಟ್ಟೆಪ್ಪ ಅಂಗಡಿ ಮಾತನಾಡಿ, ಪತ್ರಿಕಾ ವಿತರಕರು ಜನರ ಮನೆ ಬಾಗಿಲಿಗೆ ಜ್ಞಾನದ ಬೆಳಕು ತಲುಪಿಸುವ ಕಾಯಕಯೋಗಿಗಳು. 35 ವರ್ಷಕ್ಕೂ ಹೆಚ್ಚು ಕಾಲ ಪತ್ರಿಕೆ ವಿತರಿಸುತ್ತಿರುವ ಹಿರಿಯ ವಿತರಕ ಬಸಪ್ಪ ಪಾಣಿಶೆಟ್ಟಿ ಅವರ ಸೇವೆ ಶ್ಲಾಘನೀಯವಾಗಿದ್ದು, ಅವರಿಗೆ ಸೂಕ್ತ ಗೌರವ ಧನ ದೊರೆಯಬೇಕು ಎಂದು ಹೇಳಿದರು.

 ಪತ್ರಕರ್ತ ಚಂದ್ರಶೇಖರ ಹಡಪದ ಮಾತನಾಡಿ, ವೈಯಕ್ತಿಕ ಹಾಗೂ ಕುಟುಂಬದ ಕಾರ್ಯಕ್ರಮಗಳ ನಡುವೆಯೂ ಕರ್ತವ್ಯಕ್ಕೆ ಆದ್ಯತೆ ನೀಡಿ ಪತ್ರಿಕೆ ತಲುಪಿಸುವ ವಿತರಕರ ಸೇವೆಗೆ ಸಮಾಜ ಕತಜ್ಞವಾಗಿರಬೇಕು ಎಂದರು.

 ಪತ್ರಿಕಾ ವಿತರಕರಾದ ಬಸಪ್ಪ ಪಾಣಿಶೆಟ್ಟಿ, ಆರ್.ಜಿ. ಜೋಶಿ ಹಾಗೂ ನೂರಲಿ ನದಾ ಅವರನ್ನು ಸನ್ಮಾನಿಸಲಾಯಿತು. ಬಸಪ್ಪ ಪಾಣಿಶೆಟ್ಟಿಯವರಿಗೆ ನೂತನ ಇವಿ ಸ್ಕೂಟಿ ಕೊಡಿಸುವುದಾಗಿ ಗಣ್ಯರು ಭರವಸೆ ನೀಡಿದರು.

 ಬಸವರಾಜ ಸಂಶಿ, ನಿಂಗಪ್ಪ ಅರಕೇರಿ, ಡಾ. ಎಸ್.ಎನ್. ಹೊಸಕೇರಿ, ಹಸನಅಹ್ಮದ ರೋಣ, ಸಿ.ಎಲ್. ಹೂಗಾರ, ಮಲ್ಲಪ್ಪ ಜಮಖಂಡಿ, ದುಂಡಪ್ಪ ನಾಯ್ಕರ, ಭೀಮಶಿ ಬಳೂಲದ ಸೇರಿ ಹಲವರು ಉಪಸ್ಥಿತರಿದ್ದರು.
ಕಲಾದಗಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನ ಕಾರ್ಯಕ್ರಮವನ್ನು ಸಂಗಣ್ಣ ಮುಧೋಳ ಉದ್ಘಾಟಿಸಿದರು. ಬಶೆಟ್ಟೆಪ್ಪ ಅಂಗಡಿ, ನಿಂಗಪ್ಪ ಅರಕೇರಿ ಮತ್ತಿತರರು ಉಪಸ್ಥಿತರಿದ್ದರು.
Published on: 

ಕಲಾದಗಿ : ಸೂರ್ಯೋದಯಕ್ಕೂ ಮುನ್ನವೇ ಮನೆ ಮನೆಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರು ಹವಾಮಾನ ವೈಪರೀತ್ಯ ಸೇರಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಸರ್ಕಾರ ಕನಿಷ್ಠ ಕಾರ್ಮಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಬಾಗಲಕೋಟೆ ತಾ.ಪಂ. ಮಾಜಿ ಉಪಾಧ್ಯಕ್ಷ ಸಂಗಣ್ಣ ಮುಧೋಳ ಒತ್ತಾಯಿಸಿದರು.

ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಪತ್ರಿಕಾ ಬಳಗದ ವತಿಯಿಂದ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಜಾಗತಿ ಮೂಡಿಸುವ ಪತ್ರಿಕಾ ಕ್ಷೇತ್ರಕ್ಕೆ ವಿತರಕರು ಪ್ರಮುಖ ಕೊಂಡಿಯಾಗಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ವಿತರಕರಿಗೆ ಉಚಿತ ವೈದ್ಯಕೀಯ ನೆರವು, ಆರೋಗ್ಯ ತಪಾಸಣೆ ಹಾಗೂ ಜೀವ ವಿಮೆ ಸೇರಿ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ಬಶೆಟ್ಟೆಪ್ಪ ಅಂಗಡಿ ಮಾತನಾಡಿ, ಪತ್ರಿಕಾ ವಿತರಕರು ಜನರ ಮನೆ ಬಾಗಿಲಿಗೆ ಜ್ಞಾನದ ಬೆಳಕು ತಲುಪಿಸುವ ಕಾಯಕಯೋಗಿಗಳು. 35 ವರ್ಷಕ್ಕೂ ಹೆಚ್ಚು ಕಾಲ ಪತ್ರಿಕೆ ವಿತರಿಸುತ್ತಿರುವ ಹಿರಿಯ ವಿತರಕ ಬಸಪ್ಪ ಪಾಣಿಶೆಟ್ಟಿ ಅವರ ಸೇವೆ ಶ್ಲಾಘನೀಯವಾಗಿದ್ದು, ಅವರಿಗೆ ಸೂಕ್ತ ಗೌರವ ಧನ ದೊರೆಯಬೇಕು ಎಂದು ಹೇಳಿದರು.

ಪತ್ರಕರ್ತ ಚಂದ್ರಶೇಖರ ಹಡಪದ ಮಾತನಾಡಿ, ವೈಯಕ್ತಿಕ ಹಾಗೂ ಕುಟುಂಬದ ಕಾರ್ಯಕ್ರಮಗಳ ನಡುವೆಯೂ ಕರ್ತವ್ಯಕ್ಕೆ ಆದ್ಯತೆ ನೀಡಿ ಪತ್ರಿಕೆ ತಲುಪಿಸುವ ವಿತರಕರ ಸೇವೆಗೆ ಸಮಾಜ ಕತಜ್ಞವಾಗಿರಬೇಕು ಎಂದರು.

ಪತ್ರಿಕಾ ವಿತರಕರಾದ ಬಸಪ್ಪ ಪಾಣಿಶೆಟ್ಟಿ, ಆರ್.ಜಿ. ಜೋಶಿ ಹಾಗೂ ನೂರಲಿ ನದಾ ಅವರನ್ನು ಸನ್ಮಾನಿಸಲಾಯಿತು. ಬಸಪ್ಪ ಪಾಣಿಶೆಟ್ಟಿಯವರಿಗೆ ನೂತನ ಇವಿ ಸ್ಕೂಟಿ ಕೊಡಿಸುವುದಾಗಿ ಗಣ್ಯರು ಭರವಸೆ ನೀಡಿದರು.

ಬಸವರಾಜ ಸಂಶಿ, ನಿಂಗಪ್ಪ ಅರಕೇರಿ, ಡಾ. ಎಸ್.ಎನ್. ಹೊಸಕೇರಿ, ಹಸನಅಹ್ಮದ ರೋಣ, ಸಿ.ಎಲ್. ಹೂಗಾರ, ಮಲ್ಲಪ್ಪ ಜಮಖಂಡಿ, ದುಂಡಪ್ಪ ನಾಯ್ಕರ, ಭೀಮಶಿ ಬಳೂಲದ ಸೇರಿ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net