ನೆಮ್ಮದಿ ಬದುಕಿಗೆ ಅಧ್ಯಾತ್ಮದ ಅರಿವು ಅಗತ್ಯ

ಗುರುಸಿದ್ಧೇಶ್ವರ ಶ್ರೀಗಳ ಅಭಿಮತ
ರಬಕವಿ : ಆಧುನಿಕ ಜೀವನದ ಒತ್ತಡ, ಆತಂಕಗಳ ನಡುವೆ ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಪ್ರತಿಯೊಬ್ಬರೂ ಅಧ್ಯಾತ್ಮದ ಅರಿವು ಬೆಳೆಸಿಕೊಳ್ಳಬೇಕು. ಭಕ್ತಿ, ಧ್ಯಾನ ಹಾಗೂ ಸದಾಚಾರಗಳು ಬದುಕಿನಲ್ಲಿ ಶಾಂತಿ ಮತ್ತು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ ಎಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.

 ನಗರದ ಶ್ರೀಮಠದಲ್ಲಿ ದೀಪಾವಳಿ ಅಮಾವಾಸ್ಯೆ ಅಂಗವಾಗಿ ಸೋಮವಾರ ಸಂಜೆ ಆಯೋಜಿಸಿದ್ದ ಅನುಭಾವದಂಗಳ ಚಿಂತನ-ಮಂಥನ ಹಾಗೂ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

 ಅಧ್ಯಾತ್ಮವು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಲ್ಲ. ಅದು ಮನುಷ್ಯನ ಆಲೋಚನೆ, ನಡವಳಿಕೆ ಹಾಗೂ ಜೀವನದ ದಷ್ಟಿಕೋನವನ್ನು ಬದಲಿಸುವ ಶಕ್ತಿಯಾಗಿದೆ. ಆಧ್ಯಾತ್ಮಿಕ ಚಿಂತನೆ ಜೀವನದ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಮನೋಬಲ ನೀಡುತ್ತದೆ ಎಂದರು.

 ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಹಾಗೂ ನಿವತ್ತ ಶಿಕ್ಷಕ ಶಿವಾನಂದ ದಾಶ್ಯಾಳ, ಶ್ರೀ ಗುರುಸಿದ್ಧೇಶ್ವರ ಶ್ರೀಗಳ ಆಧ್ಯಾತ್ಮಿಕ ಸಾಧನೆ, ದಾಸೋಹ ಸೇವೆ ಹಾಗೂ ದುಶ್ಚಟಗಳಿಂದ ದೂರವಿರುವ ಕುರಿತು ಅವರು ನೀಡುತ್ತಿರುವ ಜಾಗತಿ ಸಂದೇಶ ಸಮಾಜಕ್ಕೆ ಮಾದರಿ. ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿರುವ ಅವರ ಸೇವೆ ಶ್ಲಾಘನೀಯ ಎಂದರು.

 ದೀಪಾವಳಿ ಅಮಾವಾಸ್ಯೆ ನಿಮಿತ್ತ ಶ್ರೀಮಠದಲ್ಲಿರುವ ಗುರುದೇವ ಬ್ರಹ್ಮಾನಂದರ ಮೂರ್ತಿಗೆ ವಿಶೇಷ ಪುಷ್ಪಾಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ನಗರದ ಮಹಾಲಕ್ಷ್ಮಿ ಭಜನಾ ಮಂಡಳಿಯ ಸದಸ್ಯರು ಭಕ್ತಿಗೀತೆಗಳನ್ನು ಹಾಡಿ ಭಜನಾ ಸೇವೆ ಸಲ್ಲಿಸಿದರು.

 ಶ್ರೀಮಠದ ಭಕ್ತರು ಹಾಗೂ ಅನುಭಾವಿಗಳು ಭಾಗವಹಿಸಿದ್ದರು.
ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಅನುಭಾವದಂಗಳ ಚಿಂತನ-ಮಂಥನ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಗುರುಸಿದ್ಧೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.
Published on: 