ನೂರಾರು ಬಾಲ್ಯ ವಿವಾಹ ತಡೆದ ಗುರಮ್ಮ

ಸ್ವರಚಿತ ಆಶು ಕವಿತೆ, ಬಾಲ್ಯ ವಿವಾಹದ ವಿರುದ್ಧ ಹೋರಾಟ
ಬಾಗಲಕೋಟೆ:
ಬಾಲ್ಯ ವಿವಾಹಕ್ಕೆ ಒಳಗಾಗಿ ಬಾಲ್ಯದಲ್ಲೆ ವಿಧವೆಯಾಗಿ, ತನ್ನಂತೆ ಇರತೆ ಬಾಲೆಯವರು ಇಂಥ ಸಂಕಷ್ಟಕ್ಕೆ ಸಿಲುಕಬಾರದೆಂದು ಬಾಲ್ಯ ವಿವಾಹ ಹಾಗೂ ದೇವದಾಸಿ ಪದ್ಧತಿ ವಿರುದ್ಧ ಹೋರಾಟ ಮಾಡುತ್ತ ಬಂದಿರುವ ಗುರಮ್ಮ ತಂದೆ ಪಂಪಯ್ಯ ಸಂಕಿನಮಠ ಅವರಿಗೆ ೨೦೨೬-೨೭ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. 
ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದ ೮೩ ವಯಸ್ಸಿನ ಗುರಮ್ಮ, ಬಾಲ್ಯ ವಿವಾಹದ ವಿರುದ್ಧ ಗಟ್ಟುಗಿತ್ತೆಯಾಗಿ ಹೋರಾಟ ಮಾಡುವುದರ ಜೊತೆಗೆ ಜನರಲ್ಲಿ ಆ ಬಗ್ಗೆ ಅರಿವು ಮೂಡಿಸವ ಹಾಗೂ ಮಹಿಳೆಯರಿಗೆ ಹೊಲಿಗೆ ತರಬೇತಿ ಕೊಡಿಸಿ ಸ್ವಾವಲಂಬಿಗಳನ್ನಾಗಿ ಮಾಡಿರುವುದಲ್ಲದೇ ಇನ್ನೂರಕ್ಕೂ ಹೆಚ್ಚು ಬಾಲ್ಯ ವಿವಾಹಗಳನ್ನು ತಡೆದ ಕೀರ್ತಿ ಇವರಿಗೆ ಸಲ್ಲುತ್ತದೆ. 
ಹೋರಾಟದ ಜೀವನದ ಜೊತೆಗೆ ಜಾನಪದ ಕಲಾವಿದೆಯಾಗಿ, ಸ್ವರಚಿತ ಆಶು ಕವಿತೆಗಳ ಮೂಲಕವೂ ಈ ಇಳಿ ವಯಸ್ಸಿನಲ್ಲೂ ರಾಜ್ಯದ ಮೂಲೆ ಮೂಲೆಗೆ ಸಂಚರಿಸಿ ಕಲೆಯ ಅನಾವರಣದ ಜೊತೆಗೆ ಬಾಲ್ಯ ವಿವಾಹದ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಸಮಾಜ ಸೇವೆಗೆ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿವೆ. ಈಗ ಅವರ ಪ್ರಶಸ್ತಿಗಳ ಗೊಂಚಲಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿಕೊಂಡಿದೆ.
ಗುರಮ್ಮ ಸಂಕಿನಮಠ
Published on: 