ನಿರಾಣಿ ಸಮೂಹದ ಮೂವರು ಅನ್ನದಾತರಿಗೆ ‘ಪ್ರಗತಿಪರ ರೈತ ಪ್ರಶಸ್ತಿ’

ಭಾರತೀಯ ಸಕ್ಕರೆ ಸಕ್ಕರೆ ಸಂಸ್ಥೆಯಿಂದ ವಿತರಣೆ ಕಾನ್ಪುರದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಗೌರವ ಪ್ರದಾನ
ಕಾನ್ಪುರದಲ್ಲಿ ನಡೆದ ಭಾರತೀಯ ಸಕ್ಕರೆ ಸಂಸ್ಥೆಯ 91ನೇ ವಾರ್ಷಿಕ ಮಹಾಸಭೆಯಲ್ಲಿ ಕಬ್ಬು ಬೆಳೆಗಾರರಾದ ಬಸವರಾಜ ಯಲಗೊಣ, ಮಹಾವೀರ ಪಾಟೀಲ ಹಾಗೂ ರಮೇಶ ಅವಟಿ ರಾಷ್ಟ್ರಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ಸ್ವೀಕರಿಸಿದರು. ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೇನ್ ಪಟೇಲ್, ಸಕ್ಕರೆ ಸಚಿವಲಕ್ಷ್ಮೀ ನಾರಾಯಣ ಚೌಧರಿ, ಸ್ಥಳೀಯ ಶಾಸಕ ನಿಲಿಮಾ ಕಟಿಯಾರ್, ಸಂಸದ ರಮೇಶ ಅವಸ್ತಿ ಇತರರಿದ್ದರು.

Published on: 

ಮುಧೋಳ: ಕಬ್ಬು ಬೆಳೆಯಲ್ಲಿ ಅಧಿಕ ಇಳುವರಿ ಹಾಗೂ ಸುಧಾರಿತ ಕಷಿಯಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಯನ್ನು ಪರಿಗಣಿಸಿ, ಭಾರತೀಯ ಸಕ್ಕರೆ ಸಂಸ್ಥೆ ನೀಡುವ ಪ್ರತಿಷ್ಠಿತ ರಾಷ್ಟ್ರಮಟ್ಟದ ‘ಪ್ರಗತಿಪರ ರೈತ ಪ್ರಶಸ್ತಿ’ಗೆ ನಿರಾಣಿ ಸಮೂಹದ ಮೂವರು ರೈತರು ಭಾಜನರಾಗಿದ್ದಾರೆ.

ನಿರಾಣಿ ಶುಗರ್ಸ್‌ನ ಹಿಪ್ಪರಗಿಯ ಬಸವರಾಜ ಯಲಗೊಣ, ಮುತ್ತೂರಿನ ಮಹಾವೀರ ಪಾಟೀಲ ಹಾಗೂ ಸವದಿಯ ರಮೇಶ ಅವಟಿ ಅವರು ಈ ರಾಷ್ಟ್ರಮಟ್ಟದ ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಭಾರತೀಯ ಸಕ್ಕರೆ ಸಂಸ್ಥೆಯ 91ನೇ ವಾರ್ಷಿಕ ಮಹಾಸಭೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೇನ್ ಪಟೇಲ್, ಸಕ್ಕರೆ ಸಚಿವರಾದ ಲಕ್ಷ್ಮೀ ನಾರಾಯಣ ಚೌಧರಿ, ಸ್ಥಳೀಯ ಶಾಸಕ ನಿಲಿಮಾ ಕಟಿಯಾರ್ ಹಾಗೂ ಲೋಕಸಭಾ ಸದಸ್ಯ ರಮೇಶ ಅವಸ್ತಿ ಉಪಸ್ಥಿತರಿದ್ದು ಪ್ರಶಸ್ತಿ ವಿಜೇತ ರೈತರನ್ನು ಅಭಿನಂದಿಸಿದರು.

ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ರೈತರಿಗೆ ನಿರಾಣಿ ಉದ್ಯೋಗ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಮುರುಗೇಶ ಆರ್. ನಿರಾಣಿ, ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ಆರ್. ನಿರಾಣಿ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net