ನವನಗರ ಯುನಿಟ್-3ರಲ್ಲಿ ಏಕೀಕೃತ ಮಾರುಕಟ್ಟೆ ಸ್ಥಳ ಪರಿಶೀಲನೆ

ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಅಧಿಕಾರಿಗಳ ಭೇಟಿ
ಬಾಗಲಕೋಟೆ : ಬಾಗಲಕೋಟೆ ನಗರದಲ್ಲಿ ವ್ಯಾಪಾರ ವಹಿವಾಟು ವೃದ್ಧಿಸಲು ನವನಗರದ ಯುನಿಟ್-3ರಲ್ಲಿ ಮೆಗಾ ಮಾರ್ಕೆಟ್ ನಿರ್ಮಾಣ ಸ್ಥಳಕ್ಕೆ ಶುಕ್ರವಾರ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

 ಯುನಿಟ್-3ರಲ್ಲಿ 229.40 ಎಕರೆ ಜಾಗೆಯಲ್ಲಿ ಏಕೀಕೃತ ಮಾರುಕಟ್ಟೆ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಈಚೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು.

 ಆ ಸ್ಥಳದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಆಸ್ಪತ್ರೆ, ಗಾರ್ಡನ್, ಗೋಡಾನ, ಚಿತ್ರ ಮಂದಿರ, ಹೋಟೆಲ್‌ಗಳು, ವಸತಿ ತಂಗುದಾಣ, ಶೌಚಾಲಯ ಅಭಿವೃದ್ಧಿ ಪಡಿಸುವ ಕುರಿತು ಚಿಂತನೆಗಳು ನಡೆದಿದ್ದು, ಈ ಬಗ್ಗೆ ಸ್ಥಳದ ಪರಿಶೀಲನೆ ನಡೆಸಿದರು.

 ಬಿಟಿಡಿಎ ಅಧಿಕಾರಿಗಳಾದ ರಾಘವೇಂದ್ರ ಜೋಶಿ, ಬುಮಾ ಅಧ್ಯಕ್ಷ ರವಿ ಕುಮಟಗಿ, ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ ಇತರರಿದ್ದರು.
ಬಾಗಲಕೋಟೆ ನವನಗರದ ಯುನಿಟ್-3ರಲ್ಲಿ ಏಕೀಕೃತ ಮಾರುಕಟ್ಟೆ ನಿರ್ಮಾಣ ಉದ್ದೇಶಿತ ಸ್ಥಳವನ್ನು ಶುಕ್ರವಾರ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ಅಧಿಕಾರಿಗಳು ಪರಿಶೀಲಿಸಿದರು.
Published on: 