ಧರ್ಮ ರಕ್ಷಣೆಗೆ ನಾವೆಲ್ಲರೂ ಬದ್ಧರಾಗೋಣ

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿಕೆ ಭಾರತಮಾತೆ, ಗೋ ಪೂಜೆ ಕಾರ್ಯಕ್ರಮ
ಗುಳೇದಗುಡ್ಡದಲ್ಲಿ ಆರ್‌ಎಸ್‌ಎಸ್‌ನ ವಿಜಯದಶಮಿ ಪಥಸಂಚಲನದ ಅಂಗವಾಗಿ ಭಾರತಮಾತೆ ಹಾಗೂ ಗೋಮಾತೆ ಪೂಜೆ ಸಲ್ಲಿಸಲಾಯಿತು. ಶಾಂತಗೌಡ ಪಾಟೀಲ, ಕಾಡಸಿದ್ಧೇಶ್ವರ ಶ್ರೀಗಳು, ವಿಠ್ಠಲ ಪತ್ತಾರ, ಸಂಪತ್ತಕುಮಾರ ರಾಠಿ, ಕಮಲಕಿಶೋರ ಮಾಲಪಾಣಿ, ಭುವನೇಶ ಪೂಜಾರ ಇತರರಿದ್ದರು.
ಗುಳೇದಗುಡ್ಡದಲ್ಲಿ ಆರ್‌ಎಸ್‌ಎಸ್‌ನ ವಿಜಯದಶಮಿ ಪಥಸಂಚಲನದ ಅಂಗವಾಗಿ ಭಾರತಮಾತೆ ಹಾಗೂ ಗೋಮಾತೆ ಪೂಜೆ ಸಲ್ಲಿಸಲಾಯಿತು. ಶಾಂತಗೌಡ ಪಾಟೀಲ, ಕಾಡಸಿದ್ಧೇಶ್ವರ ಶ್ರೀಗಳು, ವಿಠ್ಠಲ ಪತ್ತಾರ, ಸಂಪತ್ತಕುಮಾರ ರಾಠಿ, ಕಮಲಕಿಶೋರ ಮಾಲಪಾಣಿ, ಭುವನೇಶ ಪೂಜಾರ ಇತರರಿದ್ದರು.
Published on: 

ಗುಳೇದಗುಡ್ಡ: ವಿಜಯದಶಮಿ ಅಂಗವಾಗಿ ಪಟ್ಟಣದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ಅದ್ದೂರಿಯಾಗಿ ನಡೆಯಲಿದೆ. ಈ ನಿಟ್ಟಿನಲ್ಲಿ ಭಾರತಮಾತೆ ಹಾಗೂ ಗೋ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ಪಟ್ಟಣದ ಕೆಳಗಿನ ಮಾರ್ಕೆಟ್ ಸರ್ಕಲ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ವಿವಿಧ ಹಿಂದೂಪರ ಸಂಘಟನೆಗಳಿಂದ ಮಂಗಳವಾರ ಹಮ್ಮಿಕೊಂಡಿದ್ದ ಭಾರತಮಾತೆ ಹಾಗೂ ಗೋ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಷ್ಟ್ರ ಹಾಗೂ ಧರ್ಮ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧವಾಗಿ ನಿಲ್ಲಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹಿಂದೂಗಳನ್ನು ಎಚ್ಚರಿಸಿ ಒಗ್ಗಟ್ಟಾಗಿಸುವ ಕೆಲಸ ಮಾಡುತ್ತವೆ. ಪ್ರತಿಯೊಬ್ಬರು ವಿಜಯದಶಮಿ ಪಥಸಂಚಲನದಲ್ಲಿ ಭಾಗವಹಿಸಬೇಕು ಎಂದರು.

ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಶ್ರೀಗಳು ಗೋಪೂಜೆ ನೆರವೇರಿಸಿದರು.

ಆರ್‌ಎಸ್‌ಎಸ್‌ನ ತಾಲೂಕು ಕಾರ್ಯನಿರ್ವಾಹ ವಿಠ್ಠಲ ಪತ್ತಾರ, ಸಂಪತ್ತಕುಮಾರ ರಾಠಿ, ಕಮಲಕಿಶೋರ ಮಾಲಪಾಣಿ, ಭುವನೇಶ ಪೂಜಾರ, ರವಿ ಅಂಗಡಿ, ಪೊಲೀಸಪ್ಪ ರಾಮದರ್ಗ, ಸಂಜೀವ ಕಾರಕೂನ, ಆದಪ್ಪ ಕಲಬುರ್ಗಿ, ಮಹೇಶ ಸೂಳಿಭಾವಿ, ಮಹಾದೇವ ಜಗತಾಪ, ಪ್ರಥಮೇಶ ವಾಘಮೋಡೆ, ರವಿ ಬೀಳಗಿ, ಪ್ರಭು ಕಳ್ಳಿಗುಡ್ಡ, ಆನಂದ ಗೋವಿಂದಕರ, ಸಂಗಮೇಶ ತಿಪ್ಪಾ, ಬಸವರಾಜ ಕಳ್ಳಿಗುಡ್ಡ, ರಾಘವ ತಿವಾಡಿ, ರಾಮು ಛಬ್ಬಿ, ಬಸು ಶೆಡ್ಲಿ, ಪರಶುರಾಮ ಸೂಳಿಭಾವಿ, ಸಂತೋಷ ಗಾಯದ, ದೀಪಕ ರಾಠೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net