ದಸರಾ ಸ್ತಬ್ಧ ಚಿತ್ರ ತಯಾರಿಕೆಗೆ ಸ್ಥಳೀಯರ ಕಡೆಗಣನೆ

ಮಾಜಿ ಸಿಂಡಿಕೇಟ್ ಸದಸ್ಯ ಕಲಾವಿದ ಡಿ.ಕೆ. ರಂಗನಾಥ ಆರೋಪ
ಮಹಾಲಿಂಗಪುರ : ಮೈಸೂರು ದಸರಾ ಸ್ತಬ್ಧ ಚಿತ್ರಗಳನ್ನು ತಯಾರಿಸಲು ಬಾಗಲಕೋಟೆ ಜಿಲ್ಲೆಯರನ್ನು ಕಡೆಗಣಿಸಿ ಬೇರೆ ಜಿಲ್ಲೆಯ ಕಲಾವಿದರಿಗೆ ಮೈಸೂರು ದಸರಾ ನೋಡಲ್ ಅಧಿಕಾರಿ, ಗ್ರಾಮೀಣ ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ಸಿದ್ಧರಾಯ ಬಳ್ಳೂರಗಿ ಅಣಿಯಾಗಿದ್ದಾರೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಕಲಾವಿದ ಡಿ.ಕೆ. ರಂಗನಾಥ ಪ್ರಕಟಣೆ ಮೂಲಕ ಆರೋಪಿಸಿದ್ದಾರೆ.

 ಮೈಸೂರು ದಸರಾ ಉತ್ಸವದಲ್ಲಿ ಪ್ರದರ್ಶನಗೊಳ್ಳುವ ಬಾಗಲಕೋಟೆ ಜಿಲ್ಲೆಯ ಸ್ತಬ್ಧ  ಚಿತ್ರಗಳನ್ನು ತುರ್ತು ಸಮಯ ಸೇರಿ ಹೆಚ್ಚಿನ ಅನುದಾನ ಬಯಸದೆ ದಶಕ ಕಾಲದಿಂದ  ನಾವೇ ಕೆಲಸ ಮಾಡುತ್ತ ಬಂದಿದ್ದೇವೆ. ಆದರೆ, ಪ್ರಸ್ತುತ ವರ್ಷ ದಸರಾ ಉತ್ಸವಕ್ಕೆ ಅನ್ಯ ಜಿಲ್ಲೆ ಕಲಾವಿದರಿಗೆ ಸ್ತಬ್ಧ ಚಿತ್ರಗಳನ್ನು ತಯಾರಿಸಲು ಆಹ್ವಾನಿಸಿ, ಸ್ಥಳೀಯರಿಗೆ ಅವಮಾನ ಮಾಡಿದ್ದಾರೆ. ದಸರಾ ಸ್ತಬ್ಧ ಚಿತ್ರಗಳ ತಯಾರಿಕೆಯಲ್ಲಿ ಜಿಲ್ಲೆಯ ಕಲಾವಿದರಿಗೆ ಅವಕಾಶ ನೀಡಬೇಕೆಂದು ಕಲಾವಿದ ರಂಗನಾಥ ಸಚಿವ ವಿಜಯಾನಂದ ಕಾಶಪ್ಪನವರ ಮತ್ತು ಜಿಲ್ಲಾ ಪಂಚಾಯತಿಯವರಲ್ಲಿ ಮನವಿ ಮಾಡಿದ್ದಾರೆ.
ಡಿ.ಕೆ. ರಂಗನಾಥ
Published on: 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net