ಚಿಮ್ಮಡ ಗ್ರಾಮಕ್ಕೆ ಜಿ.ಪಂ. ಸಿಇಒ ಗಜಾನನ ಬಾಲೆ ಭೇಟಿ

ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದನೆ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಚಿಮ್ಮಡ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿ.ಪಂ. ಸಿಇಒ ಗಜಾನನ ಬಾಲೆ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸವರಾಜ ಐನಾಪುರ, ಸುರೇಶ ಪಂಚಿಹಾಳ, ಪ್ರಭು ಮುಧೋಳ, ಶಿವಾನಂದ ಬಿರಾದಾರ ಇತರರಿದ್ದರು.
ಚಿಮ್ಮಡ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿ.ಪಂ. ಸಿಇಒ ಗಜಾನನ ಬಾಲೆ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸವರಾಜ ಐನಾಪುರ, ಸುರೇಶ ಪಂಚಿಹಾಳ, ಪ್ರಭು ಮುಧೋಳ, ಶಿವಾನಂದ ಬಿರಾದಾರ ಇತರರಿದ್ದರು.
Published on: 

ಚಿಮ್ಮಡ: ಗ್ರಾಮಕ್ಕೆ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಗಜಾನನ ಬಾಲೆ ಬುಧವಾರ ಭೇಟಿ ನೀಡಿ ಗ್ರಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಹಾಗೂ ಅವಶ್ಯಕತೆಗಳ ಕುರಿತು ಪರಿಶೀಲನೆ ನಡೆಸಿದರು.

ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಬಿಸಿಯೂಟ, ಮಕ್ಕಳ ಸಂಖ್ಯೆ, ಶಾಲೆಯಲ್ಲಿ ಖಾಯಂ ಶಿಕ್ಷಕರಿಗಿಂತ ಅತಿಥಿ ಶಿಕ್ಷಕರೇ ಹೆಚ್ಚಿರುವ ಕುರಿತು ಮಾಹಿತಿ ಪಡೆದರು.

ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ತೀವ್ರ ಕೊರತೆಯಿದ್ದು, ಕೂಡಲೇ ನೇಮಕಗೊಳಿಸುವಂತೆ ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿದರು. ಸಂಬಂಧಿಸಿದ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮದ ಎರಡೂ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಮೂಹಿಕ ಶೌಚಗೃಹಗಳ ವೀಕ್ಷಣೆ ಮಾಡಿದರು.

ಸ್ಥಳಿಯ ಗ್ರಾಮ ಪಂಚಾಯಿತಿಯಲ್ಲಿ ಭೂ ಗ್ಯಾರಂಟಿ (ಗಣಕೀಕೃತ ಪಹಣಿ ನೀಡುವ ಈ ಸ್ವತ್ತು) ಯೋಜನೆ ಪ್ರಗತಿ ಪರಿಶೀಲಿಸಿದರು. ಕುಡಿಯುವ ನೀರಿನ ಸಮಸ್ಯೆಯಿದ್ದರೆ, ಪಟ್ಟಿ ಮಾಡಿ ಮಾಹಿತಿ ಸಲ್ಲಿಸುವಂತೆ ಸ್ಥಳಿಯ ಅಧಿಕಾರಿಗಳಿಗೆ ಆದೇಶಿಸಿದರು.

ತಾ.ಪಂ. ಇಒ ಬಸವರಾಜ ಐನಾಪುರ, ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಯೋಜನೆ ಕಾರ್ಯ ನಿರ್ವಾಹಕ ಅಭಿಯಂತ ಸುರೇಶ ಪಂಚಿಹಾಳ, ಅರಣ್ಯಾಧಿಕಾರಿಗಳು ಹಾಗೂ ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಆನಂದ ಕವಟಿ, ಬಾಳೇಶ ಬ್ಯಾಕೋಡ, ನಾಗಪ್ಪ ಆಲಕನೂರ, ಪಿಡಿಒ ಶಿವಾನಂದ ಬಿರಾದರ, ಸಿಆರ್‌ಪಿ ದ್ರಾಕ್ಷಾಯಿಣಿ ಮಂಡಿ, ಮುಖ್ಯೋಪಾಧ್ಯಾಯ ಜೆ.ಎಸ್. ಸನದಿ ಇತರರಿದ್ದರು.