

ಬಾಗಲಕೋಟೆ:
ಅಲೆಮಾರಿ ಅರೆಅಲೆಮಾರಿ ಜನಾಂಗದ ಕೌದಿ ಹೊಲಿಯುವ ಕಸೂತಿ ಪರಿಣಿತೆ ರುಕ್ಷಿ÷್ಮಣಿಬಾಯಿ ನಾಗಪ್ಪ ವಾಷ್ಠರ್ ಅವರಿಗೆ ಪ್ರಸಕ್ತ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.
ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲೂಕಿನ ಕೋಡಿಹಾಳ ಗ್ರಾಮದ ಗೋಂದಳಿ ಬುಡಬುಡಕಿ ಜನಾಂಗದ ೮೨ ವಯಸ್ಸಿನ ಅಜ್ಜಿ ರುಕ್ಷಿ÷್ಮಣಿಬಾಯಿ ಅವರು ಬಾಲ್ಯದಿಂದಲೇ ತಮ್ಮ ಕುಟುಂಬದ ಕುಲಕಸುಬು ಕೌದಿ ಹೊಲಿಯುತ್ತ ಕುಡುಂಬವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ.
ಹಿಂದುಳಿದ ವರ್ಗದ ಹನಮಂತ ಮತ್ತು ಯಮುನಾಬಾಯಿ ಅವರ ಬಡಕುಟುಂಬದಲ್ಲಿ ರುಕ್ಷಿ÷್ಮಣಿಬಾಯಿ ಜನಿಸಿದ್ದು, ಅನಕ್ಷರಸ್ಥರು. ವರಿಗೆ ನಾಲ್ಕು ಜನ ಗಂಡು ಹಾಗೂ ಆರು ಹೆಣ್ಣುಮಕ್ಕಳು ಸೇರಿ ಒಟ್ಟು ೧೦ ಮಕ್ಕಳು ಇದ್ದಾರೆ. ಬುಡಬುಡಕಿ ಮತ್ತು ಕೌದಿ ಹೊಲಿಯುತ್ತಲೇ ಎಲ್ಲ ಮಕ್ಕಳನ್ನು ಪಾಲನೆ, ಪೋಷಣೆ ಮಾಡಿ ಮದುವೆ ಮಾಡಿದ್ದಾರೆ. ಒಬ್ಬ ಪುತ್ರ ಇಂಜಿನಿಯರಿAಗ್ ಓದಿ ಸದ್ಯ ಕೆಎಸ್ಆರ್ಟಿಸಿನಲ್ಲಿ ನೌಕರಿ ಮಾಡುತ್ತಿದ್ದಾರೆ. ಉಳಿದಂತೆ ಮಕ್ಕಳು ಕುಲಕಸುಬು ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.
ಸದ್ಯ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದರ ಬಗ್ಗೆ ಭಾಳ್ ಸಂತೋಷ ಆಗೈತ್ರಿ ನಂಗ ಎನ್ನುತ್ತಾರೆ ರುಕ್ಷಿ÷್ಮಣಿಬಾಯಿ.