

ರಬಕವಿ-ಬನಹಟ್ಟಿ: ಪದವಿ ಪೂರ್ವ ಶಿಕ್ಷಣ ಇಲಾಖೆ, ಸರ್ಕಾರಿ ಪ.ಪೂ ಕಾಲೇಜು ಆಶ್ರಯದಲ್ಲಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟದಲ್ಲಿ ಯಲ್ಲಟ್ಟಿ ಗ್ರಾಮದ ಕೊಣ್ಣೂರ ವಿಜ್ಞಾನ ಪ.ಪೂ. ಕಾಲೇಜು ಸತತ 5ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನವಾಗಿದೆ.
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ 100 ಮೀಟರ್, 200 ಮೀಟರ್ ಓಟದ ಸ್ಪರ್ಧೆಯಲ್ಲಿ ಹನುಮಂತ ಗುರುವ, 800 ಮೀಟರ್ ಓಟದ ಸ್ಪರ್ಧೆಯಲ್ಲಿ ಸಂಕೇತ ಹಾಲಳ್ಳಿ, 5 ಕಿ.ಮೀ. ಗುಡ್ಡುಗಾಡು ಓಟದ ಸ್ಪರ್ಧೆಯಲ್ಲಿ ಚೇತನ ನಾಯಕ, ಉದ್ದ ಜಿಗಿತ ಹನುಮಂತ ಗುರವ, ಚದುರಂಗದಲ್ಲಿ ರಾಹುಲ ಚಿಮ್ಮಲ, ಜೋಡಿಯೋಗ ಸ್ಪರ್ಧೆಯಲ್ಲಿ ಸಾಗರ ಬಳಗನ್ನವರ, ವೀರ ಆಪ್ಟೆ ತಾಳಬದ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಚಕ್ರ ಎಸೆತ ಸ್ಪರ್ಧೆ ಕಾವ್ಯಾ ಬಂಢಾರ, ಬಲ್ಲೆಎಸೆತ (ಜಾವಲಿನ್) ಚೈತ್ರಾ ಕಡಪಟ್ಟಿ, ಚದುರಂಗದಲ್ಲಿ ರಶ್ಮಿ ವಡ್ಡರ, ಶಾಂತಾ ಪಾರ್ಷಿ, ಸಹನಾ ಪಾಟೀಲ, ಗುಂಪು ಆಟದ ವ್ಹಾಲಿಬಾಲ್ ಸ್ಪರ್ಧೆಯಲ್ಲಿ ಅಮೋಘ ಹಿರೇಕೊಡಿ ತಂಡ, ಹ್ಯಾಂಡಬಾಲ್ ಸ್ಪರ್ಧೆಯಲ್ಲಿ ಸಾಗರ ಪಾಟೀಲ ತಂಡ ಪ್ರಥಮ, ಸೆೆಟಲ್ ಬ್ಯಾಡ್ಮಿಂಟನಲ್ಲಿ ಸ್ನೇಹಾ ಕುರಿ ತಂಡ ದ್ವಾತೀಯ, ಪುಟಬಾಲ್ ಸ್ಪರ್ಧೆಯಲ್ಲಿ ವೀರ ಅಪ್ಟೆ ತಂಡ, ಖೋ-ಖೋ ಸ್ಪರ್ಧೆಯಲ್ಲಿ ವೆಂಕಟೇಶ ಪಚ್ಛನ್ನವರ ತಂಡ ಸೇರಿ ವಿವಿಧ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಪ್ರೊ.ಬಸವರಾಜ ಕೊಣ್ಣೂರ ತಿಳಿಸಿದ್ದಾರೆ.
ಈ ಸಾಧನೆಗೆ ಸಂಸ್ಥೆಯ ಉಪಾಧ್ಯಕ್ಷ ನಿಖಿಲ ಕೊಣ್ಣೂರ, ಆಡಳಿತಾಧಿಕಾರಿ ಶೀತಲ್ ಕೊಣ್ಣೂರ, ಉಪಪ್ರಾಚಾರ್ಯ ಪ್ರೊ.ಶಿವಾನಂದ ಕಂದಗಲ್ ಹರ್ಷ ವ್ಯಕ್ತಪಡಿಸಿದ್ದಾರೆ.