ಕಲಾವಿದರ ಬದ್ಧತೆ ಸಮಾಜಕ್ಕೆ ಪ್ರೇರಣೆಯಾಗಲಿ

ಚಲನಚಿತ್ರ ನಿರ್ಮಾಪಕ ಶ್ರೀಶೈಲ ಭಜಂತ್ರಿ ಹೇಳಿಕೆ ಮಹಾಲಿಂಗೇಶ್ವರ ಜಾತ್ರೋತ್ಸವದಲ್ಲಿ ಮಧ್ಯರಾತ್ರಿವರೆಗೆ ರಸಮಂಜರಿ
ಮಹಾಲಿಂಗಪುರ: ಕಿರುತೆರೆ ಕಲಾವಿದರು ವಿಭಿನ್ನ ಪಾತ್ರಗಳ ಮೂಲಕ ಜನಮನ ಗೆಲ್ಲುವುದರ ಜತೆಗೆ ಸಾಮಾಜಿಕ ಸಂದೇಶಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಕಿರುತೆರೆ ಮತ್ತು ಚಲನಚಿತ್ರ ನಿರ್ಮಾಪಕ ಶ್ರೀಶೈಲ ಭಜಂತ್ರಿ ಹೇಳಿದರು. 

 ನಗರದಲ್ಲಿ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಿರುತೆರೆ ಕಲಾವಿದರ ಹಾಸ್ಯ ಸಂಜೆ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲೆಯ ಮೇಲಿನ ಪರಿಶ್ರಮ, ಶಿಸ್ತು ಮತ್ತು ಬದ್ಧತೆ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದ್ದು, ಗ್ರಾಮೀಣ ಭಾಗದ ಕಲಾವಿದರಿಗೂ ಸೂಕ್ತ ವೇದಿಕೆ ದೊರೆಯುತ್ತಿರುವುದು ಸಂತಸದ ಸಂಗತಿ ಎಂದರು.

ಸಂಜೆ 7ರಿಂದ ಮಧ್ಯರಾತ್ರಿ 1.30ರವರೆಗೆ ನಡೆದ ಕಾರ್ಯಕ್ರಮದಲ್ಲಿ ಕಲಾವಿದರು ಹಾಸ್ಯ, ಗಾಯನ, ನತ್ಯ ಹಾಗೂ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಕಲಾವಿದರಾದ ಅಶ್ಮಿತ ಮಂಗಳೂರು, ದಾನಪ್ಪ ಮೂಡಲಗಿ, ಅಪ್ಪಣ್ಣ, ಕಸ್ತೂರಿ, ಐರಾ ಉಡುಪಿ, ಜ್ಯೂನಿಯರ್ ರಾಜಕುಮಾರ್, ಜ್ಯೂನಿಯರ್ ಪುನೀತ್ ರಾಜಕುಮಾರ್, ದೀಪಿಕಾ ಮಹಾನಟಿ ಹಾಗೂ ಡಿಕೆಡಿ ವಿಜಯಸಿಂಗ್ ತಂಡದವರು ವಿವಿಧ ಕಲಾ ಪ್ರಕಾರಗಳ ಮೂಲಕ ಗಮನ ಸೆಳೆದರು. ಹಾಸ್ಯ ಪ್ರಸಂಗಗಳು, ಸಂಗೀತ ಹಾಗೂ ಮನಮೋಹಕ ನತ್ಯಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.

ಶ್ರೀಶೈಲ ಭಜಂತ್ರಿ, ಎಂಜಿನಿಯರ್ ಹುಚ್ಚೇಶ ವಡ್ಡರ, ಸಿ.ಎಂ. ಹೊಸೂರ, ರಮೇಶ ಕೆಸರಗೊಪ್ಪ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ಮಹಾಲಿಂಗೇಶ್ವರ ಮಠದ ಆಡಳಿತಾಧಿಕಾರಿ ಈಶ್ವರ ಮಠದ ಸಾನ್ನಿಧ್ಯ ವಹಿಸಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ರವಿಗೌಡ ಪಾಟೀಲ, ಉಪಾಧ್ಯಕ್ಷ ಬಸವರಾಜ ಪಾಶ್ಚಾಪೂರ, ಲಕ್ಷ್ಮಣಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಸಿದ್ದುಗೌಡ ಪಾಟೀಲ, ವಿಜುಗೌಡ ಪಾಟೀಲ, ಸುನಿಲಗೌಡ ಪಾಟೀಲ, ಶಂಕರಗೌಡ ಪಾಟೀಲ, ಮಹಾಲಿಂಗಪ್ಪ ತಟ್ಟಿಮನಿ, ವಿಠ್ಠಲ ಹಲಗಣಿ, ಮಹಾಂತೇಶ ಚಿಂಚಲಿ ಮತ್ತಿತರರು ಉಪಸ್ಥಿತರಿದ್ದರು.

ಸುಪ್ರೀತಾ ವಜ್ರಮಟ್ಟಿ, ಕಾವ್ಯ ಮಾಳಿ ಪ್ರಾರ್ಥಿಸಿದರು. ನಾರನಗೌಡ ಉತ್ತಂಗಿ ನಿರೂಪಿಸಿದರು.
ಮಹಾಲಿಂಗಪುರದಲ್ಲಿ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಕಿರುತೆರೆ ಕಲಾವಿದರ ಹಾಸ್ಯ ಸಂಜೆ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಈಶ್ವರ ಮಠದ ಉದ್ಘಾಟಿಸಿದರು. ರವಿಗೌಡ ಪಾಟೀಲ, ಬಸವರಾಜ ಪಾಶ್ಚಾಪೂರ, ಯಲ್ಲನಗೌಡ ಪಾಟೀಲ ಇತರರಿದ್ದರು.
Published on: 

ಮಹಾಲಿಂಗಪುರ: ಕಿರುತೆರೆ ಕಲಾವಿದರು ವಿಭಿನ್ನ ಪಾತ್ರಗಳ ಮೂಲಕ ಜನಮನ ಗೆಲ್ಲುವುದರ ಜತೆಗೆ ಸಾಮಾಜಿಕ ಸಂದೇಶಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಕಿರುತೆರೆ ಮತ್ತು ಚಲನಚಿತ್ರ ನಿರ್ಮಾಪಕ ಶ್ರೀಶೈಲ ಭಜಂತ್ರಿ ಹೇಳಿದರು.

ನಗರದಲ್ಲಿ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಿರುತೆರೆ ಕಲಾವಿದರ ಹಾಸ್ಯ ಸಂಜೆ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲೆಯ ಮೇಲಿನ ಪರಿಶ್ರಮ, ಶಿಸ್ತು ಮತ್ತು ಬದ್ಧತೆ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದ್ದು, ಗ್ರಾಮೀಣ ಭಾಗದ ಕಲಾವಿದರಿಗೂ ಸೂಕ್ತ ವೇದಿಕೆ ದೊರೆಯುತ್ತಿರುವುದು ಸಂತಸದ ಸಂಗತಿ ಎಂದರು.

ಸಂಜೆ 7ರಿಂದ ಮಧ್ಯರಾತ್ರಿ 1.30ರವರೆಗೆ ನಡೆದ ಕಾರ್ಯಕ್ರಮದಲ್ಲಿ ಕಲಾವಿದರು ಹಾಸ್ಯ, ಗಾಯನ, ನತ್ಯ ಹಾಗೂ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಕಲಾವಿದರಾದ ಅಶ್ಮಿತ ಮಂಗಳೂರು, ದಾನಪ್ಪ ಮೂಡಲಗಿ, ಅಪ್ಪಣ್ಣ, ಕಸ್ತೂರಿ, ಐರಾ ಉಡುಪಿ, ಜ್ಯೂನಿಯರ್ ರಾಜಕುಮಾರ್, ಜ್ಯೂನಿಯರ್ ಪುನೀತ್ ರಾಜಕುಮಾರ್, ದೀಪಿಕಾ ಮಹಾನಟಿ ಹಾಗೂ ಡಿಕೆಡಿ ವಿಜಯಸಿಂಗ್ ತಂಡದವರು ವಿವಿಧ ಕಲಾ ಪ್ರಕಾರಗಳ ಮೂಲಕ ಗಮನ ಸೆಳೆದರು. ಹಾಸ್ಯ ಪ್ರಸಂಗಗಳು, ಸಂಗೀತ ಹಾಗೂ ಮನಮೋಹಕ ನತ್ಯಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.

ಶ್ರೀಶೈಲ ಭಜಂತ್ರಿ, ಎಂಜಿನಿಯರ್ ಹುಚ್ಚೇಶ ವಡ್ಡರ, ಸಿ.ಎಂ. ಹೊಸೂರ, ರಮೇಶ ಕೆಸರಗೊಪ್ಪ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ಮಹಾಲಿಂಗೇಶ್ವರ ಮಠದ ಆಡಳಿತಾಧಿಕಾರಿ ಈಶ್ವರ ಮಠದ ಸಾನ್ನಿಧ್ಯ ವಹಿಸಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ರವಿಗೌಡ ಪಾಟೀಲ, ಉಪಾಧ್ಯಕ್ಷ ಬಸವರಾಜ ಪಾಶ್ಚಾಪೂರ, ಲಕ್ಷ್ಮಣಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಸಿದ್ದುಗೌಡ ಪಾಟೀಲ, ವಿಜುಗೌಡ ಪಾಟೀಲ, ಸುನಿಲಗೌಡ ಪಾಟೀಲ, ಶಂಕರಗೌಡ ಪಾಟೀಲ, ಮಹಾಲಿಂಗಪ್ಪ ತಟ್ಟಿಮನಿ, ವಿಠ್ಠಲ ಹಲಗಣಿ, ಮಹಾಂತೇಶ ಚಿಂಚಲಿ ಮತ್ತಿತರರು ಉಪಸ್ಥಿತರಿದ್ದರು.

ಸುಪ್ರೀತಾ ವಜ್ರಮಟ್ಟಿ, ಕಾವ್ಯ ಮಾಳಿ ಪ್ರಾರ್ಥಿಸಿದರು. ನಾರನಗೌಡ ಉತ್ತಂಗಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net